Handball Game ಬಿಹಾರದಲ್ಲಿ ನಡೆದ 47 ನೇ ರಾಷ್ಟ್ರ ಮಟ್ಟದ ಜ್ಯೂನಿಯರ್ ವಿಭಾಗದ ಹ್ಯಾಂಡ್ ಬಾಲ್ ನಲ್ಲಿ ಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟುಗಳಾದ ವಂದನಾ ಪಿ ಗೌಡ ಮತ್ತು ಈಶಾನ್ಯ ಆರ್. ಪ್ರತಿಭಾನ್ವಿತ ಕ್ರೀಡಾಪಟುಗಳು ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ, ಉತ್ತಮ ಆಟದ ಪ್ರದರ್ಶನ ನೀಡಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಕ್ರೀಡೆಯ ಜೊತೆಗೆ ಓದಿನಲ್ಲಿಯೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕ ಗಳಿಸಿ, ಓದಿನಲ್ಲಿಯೂ ಪ್ರತಿಭಾನ್ವಿತ ಪ್ರತಿಭೆಗಳಾಗಿರುತ್ತಾರೆ.
Handball Game ವಂದನಾ ಪಿ. ಗೌಡ ಶೆಟ್ಟಿಹಳ್ಳಿ ಗ್ರಾಮದ ಪರಮೇಶ್ವರಪ್ಪ ಮತ್ತು ಗೀತಾ. ದಂಪತಿಗಳ ಪುತ್ರಿ. ಈಶಾನ್ಯ ಆರ್. ಗುರಪುರದ ಗ್ರಾಮದ ರಮೇಶ್ ಕೆ.ಎನ್. ಮತ್ತು ಪ್ರೇಮ ಜೆ.ದಂಪತಿಗಳ ಪುತ್ರಿ ಯಾಗಿರುತ್ತಾಳೆ.
ಈ ಪ್ರತಿಭೆಗಳು ಶಿವಮೊಗ್ಗ ಜಿಲ್ಲೆಗೂ ,ರಾಜ್ಯಕ್ಕೂ ಹಾಗೂ ಸಂಸ್ಥೆಗೆ ಕೀರ್ತಿ ತಂದ ಈ ಕ್ರೀಡಾಪಟುಗಳ ಮುಂದಿನ ಕ್ರೀಡಾ ಜೀವನ ಯಶಸ್ವಿಯಾಗಲೆಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಯವರು, ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿ, ಆಡಳಿತ ಮಂಡಳಿಯ ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್. ಉಪನ್ಯಾಸಕರು,ಪೋಷಕರು, ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.
Date:
