Yoga Day ಯೋಗದಿಂದ ಬದುಕು ಉತ್ತಮವಾಗಿದೆ. ಸಾವಿರಾರು ವರ್ಷಗಳಿಂದ ದೇಹ ಮತ್ತು ಮನಸ್ಸನ್ನು ಒಟ್ಟು ಗೂಡಿಸುವ ಅದ್ಭುತ ಕೆಲಸವನ್ನು ಯೋಗ ಮಾಡುತ್ತಾ ಬಂದಿದೆ ಎಂದು ಡೆಲ್ಲಿ ವರ್ಲ್ಡ್ ಶಾಲೆಯ ಪ್ರಾಂಶುಪಾಲೆ ದಿವ್ಯ ಶೆಟ್ಟಿ ಹೇಳಿದರು.
ಅವರು ನಗರದ ಡೆಲ್ಲಿ ವರ್ಲ್ಡ್ ಶಾಲೆಯಲ್ಲಿ ಆಯೋಜಿಸಿದ್ದ ೧೧ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ೧೭೭ ದೇಶಗಳಲ್ಲಿ ಯೋಗ ಅಭ್ಯಾಸ ಮಾಡುತ್ತಿರುವುದು ಹೆಗ್ಗಳಿಕೆಯಾಗಿದೆ. ಆರೋಗ್ಯ ಚೆನಾಗಿದ್ದರೆ ಬದುಕು ಚೆನ್ನಾಗಿರುತ್ತದೆ ಎಂದರು.
Yoga Day ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಕಾರ್ತಿಕ್ ಎಸ್. ಎಲ್ ಮಾತನಾಡುತ್ತಾ, ಯೋಗವು ದೇಹವನ್ನು ಮತ್ತು ಮನಸ್ಸನ್ನು ಸದೃಢಗೊಳಿಸುತ್ತದೆ ಎಂದರು.
ಶಾಲೆಯ ವಿದ್ಯಾರ್ಥಿನಿ ಚಾರ್ವಿ ಎಸ್ ಸೇರಿದಂತೆ ಹಲವರು ವಿದ್ಯಾರ್ಥಿಗಳು ಆಸನಗಳ ಪ್ರದರ್ಶನವನ್ನು ನೀಡಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ರಘು, ಶಿಕ್ಷಕರು, ಮಕ್ಕಳು, ಸೇರಿದಂತೆ ಹಲವರಿದ್ದರು.
Yoga Day ಯೋಗಾದಿಂದ ಉತ್ತಮ ಬದುಕು- ದಿವ್ಯಾ ಶೆಟ್ಟಿ
Date:
