National Day Calendar ಪ್ರತಿ ವರ್ಷ ಜೂನ್ ೨೨ ರಂದು ವಿಶ್ವ ಮಳೆಕಾಡು ದಿನವನ್ನಾಗಿ ಆಚರಿಸುತ್ತಾರೆ. ಈ ಕಾರ್ಯಕ್ರಮವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಹನುಮಂತಪ್ಪ ಅವರು ಉದ್ಘಾಟಿಸಿ ಈ ವರ್ಷದ ಘೋಷ ವಾಕ್ಯ ಅರಣ್ಯ ಮತ್ತು ಆಹಾರ ವಾಗಿದೆ ಎಂದು ತಿಳಿಸಿ, ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಮಳೆ ಕಾಡಿನ ಪ್ರಾಮುಖ್ಯತೆ, ಮಳೆ ಕಾಡಿನಿಂದಾಗುವ ಪ್ರಯೋಜನಗಳು, ಮಳೆ ಕಾಡನ್ನು ಉಳಿಸಿಕೊಳ್ಳುವ ಪರಿ ಕುರಿತು ಅರಿವು ಮೂಡಿಸುವ ಸಲುವಾಗಿ ಈ ದಿನವನ್ನು ವಿಶ್ವದಾದ್ಯಂತ ಮಳೆ ಕಾಡಿನ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಶ್ರೀ ರಮೇಶ್ ಮಳೇ ಕಾಡಿನ ಪ್ರಾಮುಖ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜ ಪರಿಸರ ಅವರು ವಿಭಾಗದ ವಿದ್ಯಾರ್ಥಿಗಳನ್ನು ಅರಣ್ಯ ಇಲಾಖೆಯ National Day Calendar ಅಧಿಕಾರಿಗಳೊಂದಿಗೆ ಆಗುಂಬೆಯ ಮಳೆ ಕಾಡಿನ ವೀಕ್ಷಣೆಗೆ ಕರೆದುಕೊಂಡು ಹೋಗಿ ಅರಣ್ಯದ, ಜೀವ ವೈವಿಧ್ಯತೆಯ ಪ್ರಾಮುಖ್ಯತೆ ಕುರಿತು ತಿಳಿಸಿಕೊಟ್ಟರು. ಕುವೆಂಪು ವಿವಿಯ ವನ್ಯಜೀವಿ ವಿಭಾಗದ ವಿದ್ಯಾರ್ಥಿ ಲೋಹಿಯಾ ನಾರಾಯಣ್ ಔಷಧಿ ಸಸ್ಯಗಳ ಪ್ರಾಮುಖ್ಯತೆಯ ಕುರಿತು ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಓಪನ್ ಮೈಂಡ್ಸ್ ಶಾಲೆಯ ಮಕ್ಕಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಶ್ರೀ ವಿಜಯಕುಮಾರ್ ಇನ್ನಿತರ ಅರಣ್ಯ ಅಧಿಕಾರಿಗಳು, ಶ್ರೀ ಲೋಕೇಶ್ವರಪ್ಪ, ಶ್ರೀ ಬಾಲಕೃಷ್ಣ, ಡಾ. ಸುಬ್ರಮಣ್ಯ, ಶ್ರೀಮತಿ ಪೂಜಾ ನಾಗರಾಜ್ ಪರಿಸರ, ಸಂಶೋಧನಾ ವಿದ್ಯಾರ್ಥಿಗಳಾದ ಶ್ರೀ ಜಯಂತ್ ಬಾಬು, ಶ್ರೀ ಅನಿಲ್ ಕುಮಾರ್ ಇನ್ನಿತರರು ಭಾಗವಹಿಸಿದ್ದರು.
National Day Calendar ಮಳೆಕಾಡುಗಳ ಪ್ರಯೋಜನ ತಿಳಿಸುವ ಉದ್ದೇಶದಿಂದ ಮಳೆಕಾಡು ದಿನಾಚರಣೆ- ಡಾ.ಹನುಮಂತಪ್ಪ
Date:
