Department of Horticulture,Shimoga 2025-26 ನೇ ಸಾಲಿಗೆ ಶಿಕಾರಿಪುರ ತಾಲ್ಲೂಕಿನ ಆಸಕ್ತ ರೈತರಿಂದ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ರೈತರು ತಮ್ಮ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಚೇರಿ, ಶಿಕಾರಿಪುರ ಇಲ್ಲಿಗೆ ಭೇಟಿ ನೀಡಿ ಅರ್ಜಿಯನ್ನು ಪಡೆದು ಕಾರ್ಯಕ್ರಮದ ಸದುಉಪಯೋಗ ಪಡೆಯಬಹುದು.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅಂಗಾಂಶ ಬಾಳೆ, ತರಕಾರಿ, ಹೂ ಬೆಳೆ, ಕಾಳುಮೆಣಸು ಪ್ರದೇಶ ವಿಸ್ತರಣೆ, ಕೃಷಿಹೊಂಡ, ಕಳೆ ಚಾಪೆ(ವೀಡ್ ಮ್ಯಾಟ್), ಟ್ರ್ಯಾಕ್ಟರ್ (20 ಪಿಟಿಓ), ಕೃಷಿಹೊಂಡ, ಅಡಿಕೆ ಎಲೆಚುಕ್ಕೆ ರೋಗ ನಿರ್ವಹಣೆ (ಶಿಲೀಂದ್ರ ನಾಶಕಗಳ ಜಿ.ಎಸ್.ಟಿ. ಬಿಲ್) ಮತ್ತು ರಾಜ್ಯದೊಳಗೆ ಹಮ್ಮಿಕೊಳ್ಳುವ ತರಬೇತಿ ಕಾರ್ಯಕ್ರಮಗಳು, ಹಾಗೂ ರಾಷ್ಟಿçÃಯ ಖಾದ್ಯ ತೈಲ ಅಭಿಯಾನ- ತಾಳೆ ಬೆಳೆ ಯೋಜನೆಯಡಿ ಪ್ರದೇಶ ವಿಸ್ತರಣೆ(ಸ್ವದೇಶಿ ಮತ್ತು ವಿದೇಶಿ ತಳಿಗಳು) ಅಂತರ ಬೆಳೆ, ತಾಳೆ ಹಣ್ಣು ಕೊಯ್ಯಲು ಸಹಾಯಧನ ಕಾರ್ಯಕ್ರಮಗಳಿಗೆ ಸಹಾಯಧನ, ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹಣ್ಣಿನ ಬೆಳೆಗಳು, ತರಕಾರಿ ಮತ್ತು ತೋಟದ ಬೆಳೆಗಳಿಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಸಿಕೊಳ್ಳಲು ಆಸಕ್ತ ರೈತರಿಗೆ ಸಹಾಯಧನ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಕಾಳುಮೆಣಸು ಪ್ರದೇಶ ವಿಸ್ತರಣೆ ಕೈಗೊಳ್ಳಲು ಆಸಕ್ತ ರೈತರಿಗೆ ಸಹಾಯಧನ, ಕೇಂದ್ರ ಪುರಸ್ಕೃತ ಯೋಜನೆಯಾದ ಕೃಷಿ ವಿಸ್ತರಣೆ ಮತ್ತು ತರಬೇತಿ ಅಭಿಯಾನ ಯೋಜನೆಯಡಿ ಮತ್ತು ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಮತ್ತು ಯಾಂತ್ರೀಕರಣ ಯೋಜನೆಯಡಿ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ, ತೆಂಗಿನ ಮರ Department of Horticulture,Shimoga ಹತ್ತುವ ಯಂತ್ರ, ಕಳೆ ಕೊಚ್ಚುವ ಯಂತ್ರ, ಟ್ರಾಕ್ಟರ್ ಟ್ರೆöÊಲರ್ ಮತ್ತು ಇನ್ನಿತರೆ ಯಂತ್ರೋಪಕರಣಗಳಿಗೆ ಸಹಾಯಧನ, ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿ ನೀರು ಸಂಗ್ರಹಣಾ ಘಟಕ, ಪ್ಲಾಸ್ಟಿಕ್ ಕ್ರೇಟ್ಸ್, ಸೋಲಾರ್ ಪಂಪ್ ಸೆಟ್, ಅಳವಡಿಸಿಕೊಳ್ಳಲು ಸಹಾಯಧನ, ಮಧುವನ ಮತ್ತು ಜೇನು ಸಾಕಾಣೆ ಅಭಿವೃದ್ಧಿ ಯೋಜನೆಯಡಿ ಜೇನು ಪೆಟ್ಟಿಗೆ ಹಾಗೂ ಕುಟುಂಬ, ತರಬೇತಿ ಹಾಗೂ ಖಾಸಗಿ ಮಧುವನ ಸ್ಥಾಪಿಸಲು ಸಹಾಯಧನ, ಹೀಗೆ ಮೇಲಿನ ಎಲ್ಲಾ ಯೋಜನೆಗಳಿಗೆ ಸಹಾಯಧನ ಕೋರಿ ಆಸಕ್ತ ರೈತರು ಅರ್ಜಿಯನ್ನು ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಮತ್ತು ಹಿರಿಯ ಸಹಾಯಕ ನಿರ್ದೇಶಕರ ಕಛೇರಿ ದೂ.ಸಂ.08187-223544 ನ್ನು ಸಂಪರ್ಕಿಸಬಹುದು ಎಂದು ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Department of Horticulture,Shimoga ತೋಟಗಾರಿಕೆ ಇಲಾಖೆ ವಿವಿಧ ಯೋಜನೆಯಡಿ ಸೌಲಭ್ಯ ಪಡೆಯಲು ಶಿಕಾರಿಪುರ ಕಾರ್ಯಾಲಯದಿಂದ ಪ್ರಕಟಣೆ
Date:
