Sainik Rehabilitation office Shimoga ಜಿಲ್ಲೆಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಅಧೀನದಲ್ಲಿರುವ ಸೈನಿಕ ಆರಾಮ ಗೃಹಕ್ಕೆ ಒರ್ವ ಮೇಟಿ ಕಂ ವಾಚ್‌ಮನ್ ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಆಸಕ್ತ ಅರ್ಹ ಮಾಜಿ ಸೈನಿಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಯು “ಸ್ವಯಂ ಲಿಖಿತ ಅರ್ಜಿ ಮತ್ತು ಸ್ವವಿವರ” ದೊಂದಿಗೆ ಅರ್ಜಿಯನ್ನು ಜೂನ್ 30 ಸಂಜೆ 5.00 ಗಂಟೆಯೊಳಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಛೇರಿ, ಶಿವಮೊಗ್ಗ ಇಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಅರ್ಜಿ ಸಲ್ಲಿಸಲು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಸ್ಥಳೀಯರಾಗಿರಬೇಕು. ಸೈನ್ಯದಲ್ಲಿ ದುರ್ನಡೆತೆ ಸಲುವಾಗಿ/ಕಾರಣಗಳಿಂದ ಸೈನ್ಯದಿಂದ ಬಿಡುಗಡೆಗೊಂಡಿರಬಾರದು. ಅರ್ಜಿ ಸಲ್ಲಿಸಿದ ನಂತರ ಜುಲೈ 02 ರ ಮಧ್ಯಾಹ್ನ 3.00 ಗಂಟೆಯೊಳಗೆ ನಿಗದಿಪಡಿಸಲಾದ ಸಂದರ್ಶನಕ್ಕೆ ಹಾಜರಾಗದ ಅಭ್ಯರ್ಥಿಗಳ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
Sainik Rehabilitation office Shimoga ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳು ಜುಲೈ 02 ರಂದು ಮಧ್ಯಾಹ್ನ 3.00 ಗಂಟೆಗೆ ಅಗತ್ಯ ಮೂಲ ದಾಖಲೆಗಳೊಂದಿಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಶಿವಮೊಗ್ಗ ಕಛೇರಿ ಇಲ್ಲಿ ಸಂದರ್ಶನಕ್ಕೆ ಹಾಜರಿರತಕ್ಕದ್ದು. ಕೆಲಸದ ವಿವರ, ನಿಯಮ ಮತ್ತು ನಿಬಂಧನೆಗಳನ್ನು ಕಛೇರಿಯಿಂದ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಕಛೇರಿ, ದೂ.ಸಂ: 08182-220925 ನ್ನು ಸಂಪರ್ಕಿಸಬೇಕೆAದು ಸೈನಿಕ ಮತ್ತು ಪುನರ್ವಸತಿ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ(ಪ್ರ) ಡಾ.ಸಿ.ಎ.ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Sainik Rehabilitation office Shimoga ಮೇಟಿ ಕಂ ವಾಚ್ ಮನ್ ಹುದ್ದೆಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ
Date:
