Thursday, March 19, 2026
Thursday, March 19, 2026

JCI Shivamogga ಜೆಸಿಐ ಶಿವಮೊಗ್ಗ ಸಮೃದ್ಧಿ ಘಟಕದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನ ಆಚರಣೆ

Date:

JCI Shivamogga ಶಿವಮೊಗ್ಗ ನಗರದ ಸೋಗಾನೆಯಲ್ಲಿರುವ ಕಾರಾಗೃಹ ಇಲಾಖೆ ಮತ್ತು ಸುಧಾರಣಾ ಸೇವಾ ಇಲಾಖೆ, ಮಹಿಳಾ ಕೇಂದ್ರ ಕಾರಾಗೃಹ ಶಿವಮೊಗ್ಗದ ಆವರಣದಲ್ಲಿ ಜೆಸಿಐ ಶಿವಮೊಗ್ಗ ಸಮೃದ್ಧಿ ಘಟಕದ ಜೆಸಿ ನರಸಿಂಹಮೂರ್ತಿಯವರು ಎಲ್ಲಾ ಪದಾಧಿಕಾರಿಗಳೊಂದಿಗೆ ಸಿಬ್ಬಂದಿ ವರ್ಗದವರೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಯೋಗ ಒಂದು ಭೂಮಿ ಒಂದು ಆರೋಗ್ಯ “ಎನ್ನುವ ನುಡಿಯೊಂದಿಗೆ ಉದ್ಘಾಟನೆ ಮಾಡಿರುತ್ತಾರೆ.

ಕಾರಾಗೃಹದ ಎಲ್ಲಾ ಮಹಿಳಾ ಸಿಬ್ಬಂದಿಗಳಿಗೆ ಹಾಗೂ ಕಾರಾಗೃಹದ ಮಹಿಳಾ ಕೈದಿಗಳಿಗೆ ಯೋಗ ಹಾಗೂ ಪ್ರಾಣಯಾಮಗಳನ್ನು ಪತಾಂಜಲಿ ಯೋಗ ಕೇಂದ್ರದ ಶಿಕ್ಷಕಿಯಾದ ಜೆಸಿ ಸರಳಾ ವಾಸನ್, ಸಮೃದ್ಧಿ ಘಟಕದ ಕಾರ್ಯದರ್ಶಿಯಾದ ಜೆಸಿ ಗಾಯತ್ರಿ ಯಲ್ಲಪ್ಪಗೌಡ, ಪದಾಧಿಕಾರಿಯಾದ ಜೆಸಿ ಕವಿತಾ ಥೋರತ್, ಜೆಸಿ ಅನ್ನಪೂರ್ಣ ರವರೊಂದಿಗೆ ಯೋಗ ಮತ್ತು ಪ್ರಾಣಾಯಾಮಗಳನ್ನು ಕಲಿಸಿ ಕೊಟ್ಟರು.

ಇದೇ ರೀತಿ ಇನ್ನೂ ಐದು ದಿನಗಳವರೆಗೆ ಬೆಳಗ್ಗೆ 8.00 ಗಂಟೆಯಿಂದ 10.00 ಗಂಟೆಯವರೆಗೆ ಯೋಗ ಹಾಗೂ ಪ್ರಾಣಾಯಾಮವನ್ನು ಕಲಿಸಿಕೊಡುವವರಿದ್ದಾರೆ.

JCI Shivamogga ಜೆಸಿ ನರಸಿಂಹಮೂರ್ತಿ, ಜೆಸಿ ಮೋಹನ್ ಮತ್ತು ಪತಾಂಜಲಿ ಯೋಗ ಶಿಕ್ಷಕರಾದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಯೋಗಾಚಾರ್ಯ ಜೆ. ನಾಗರಾಜ ರವರೊಂದಿಗೆ ಕಾರಾಗೃಹದ ಪುರುಷ ಸಿಬ್ಬಂದಿ ವರ್ಗದವರಿಗೂ ಮತ್ತು ಕೈದಿಗಳಿಗೂ ಯೋಗ ಮತ್ತು ಪ್ರಾಣಾಯಾಮವನ್ನು ಕಲಿಸಿಕೊಟ್ಟರು. ಈ ದಿನದ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಂತಹ ಕಾರಾಗೃಹದ ಸಿಬ್ಬಂದಿ ವರ್ಗದವರಿಗೆ ಈ ಮೂಲಕ ವಂದನೆಗಳನ್ನು ಸಮೃದ್ಧಿ ಘಟಕದ ವತಿಯಿಂದ ಅರ್ಪಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...