Dr. H.B. Manjunath “ಮಾನಸಿಕ ಅಸ್ವಾಸ್ಥ್ಯವೂ ಜಾಗತಿಕ ಸಮಸ್ಯೆಗಳಿಗೆ ಕಾರಣವಾಗುತ್ತಿವೆ” -ನಿರಂತರ ಯೋಗ ಕೇಂದ್ರದಲ್ಲಿ ಡಾ. ಎಚ್ ಬಿ ಮಂಜುನಾಥ– ದಾವಣಗೆರೆ.ಜೂ.23. ಮಾನಸಿಕ ಅಸ್ವಾಸ್ಥ್ಯವು ಕೇವಲ ವೈಯಕ್ತಿಕ ಸಮಸ್ಯೆಗಳಿಗಷ್ಟೇ ಅಲ್ಲ ಜಾಗತಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ, ಭಯೋತ್ಪಾದನೆಯಿಂದ ಮೊದಲುಗೊಂಡು ಯುದ್ಧದವರೆಗೂ ಎಲ್ಲ ಸಮಸ್ಯೆಗಳಿಗೂ ಮಾನಸಿಕ ಅಸ್ವಾಸ್ಥ್ಯವೂ ಒಂದು ಕಾರಣವಾಗಿರುತ್ತದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು. ಅವರು ನಗರದ ವಿವೇಕಾನಂದ ಬಡಾವಣೆಯಲ್ಲಿನ ನಿರಂತರ ಯೋಗ ಕೇಂದ್ರದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಇಂದಿನ ದಿನಮಾನಗಳಲ್ಲಿ ಜನರು ದೈಹಿಕ ಆರೋಗ್ಯಕ್ಕೆ ಕೊಟ್ಟಷ್ಟು ಗಮನವನ್ನು ಮಾನಸಿಕ ಆರೋಗ್ಯದ ಕಡೆಗೆ ಕೊಡುತ್ತಿಲ್ಲ, ಮಾನಸಿಕ ಅಸ್ವಾಸ್ಥ್ಯತೆಯು ಗೃಹ ಕಲಹದಿಂದ ಮೊದಲ್ಗೊಂಡು ಜಾಗತಿಕ ಯುದ್ಧದವರೆಗೂ ಕೊಂಡೊಯ್ಯುತ್ತದೆ, ಮನೋನಿಗ್ರಹವು ಇದಕ್ಕೆಲ್ಲ ಪರಿಹಾರವಾಗಲಿದ್ದು ಅಷ್ಟಾಂಗ ಯೋಗದಲ್ಲಿ ಹೇಳಿರುವ ಯಮ ನಿಯಮಾದಿಗಳ ಸಹಿತವಾದ ಪ್ರತ್ಯಾಹಾರ ಧಾರಣಾದಿಗಳ ಅನುಷ್ಠಾನದಿಂದ ಮಾನಸಿಕ ಆರೋಗ್ಯದ ಪ್ರಾಪ್ತಿ ಇದೆ. ಕೇವಲ ಆಸನಗಳಿಗಷ್ಟೇ ಪ್ರಾಧಾನ್ಯತೆ ಕೊಟ್ಟಲ್ಲಿ Dr. H.B. Manjunath ಅಷ್ಟಾಂಗ ಯೋಗದ ಮಹತ್ವ ಗೌಣವಾಗುತ್ತದೆ, ಬಹಿರೇಂದ್ರಿಯ ನಿಗ್ರಹಕ್ಕೆ ಯಮವೂ, ಅಂತರೇಂದ್ರಿಯ ನಿಗ್ರಹಕ್ಕೆ ನಿಯಮವೂ, ವ್ಯವಸ್ಥಿತ ಉಸಿರಾಟಕ್ಕೆ ಪ್ರಾಣಾಯಾಮವೂ, ಮನೋ ನಿಗ್ರಹಕ್ಕೆ ಪ್ರತ್ಯಾಹಾರ,ಧಾರಣ, ಧ್ಯಾನವು ಸಾಧನವಾಗಿದ್ದು ಅಷ್ಟಾಂಗ ಯೋಗದಲ್ಲಿನ ಇವುಗಳ ಪಾಲನೆಯಿಂದ ಮಾನಸಿಕ ಆರೋಗ್ಯ ಸಾಧಿಸಬಹುದು, ತನ್ಮೂಲಕ ಪ್ರಾಪ್ತವಾಗುವ ಮಾನಸಿಕ ಶಾಂತಿಯೇ ಸಮಾಧಿ ಸ್ಥಿತಿ ಎಂದರು. ಚಂದ್ರಶೇಖರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ನಾಗರಾಜ್ ಪ್ರಾರ್ಥನೆ ಮಾಡಿದರು. ಸುರೇಶ್, ಭೀಮಣ್ಣ, ಚಂದ್ರಣ್ಣ ಮುಂತಾದವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ರವರು ವಂದನೆ ಸಲ್ಲಿಸಿದರು.
Dr. H.B. Manjunath ಜಾಗತಿಕ ಸಮಸ್ಯೆಗಳಿಗೂ ಮಾನಸಿಕ ಅಸ್ವಾಸ್ಥ್ಯಕಾರಣವಾಗುತ್ತದೆ- ಡಾ.ಎಚ್.ಬಿ.ಮಂಜುನಾಥ್
Date:
