Prisons and Correctional Services ಶಿವಮೊಗ್ಗ ನಗರದ ಸೋಗಾನೆಯಲ್ಲಿರುವ ಕಾರಾಗೃಹ ಇಲಾಖೆ ಮತ್ತು ಸುಧಾರಣಾ ಸೇವಾ ಇಲಾಖೆ, ಮಹಿಳಾ ಕೇಂದ್ರ ಕಾರಾಗೃಹ ಶಿವಮೊಗ್ಗದ ಆವರಣದಲ್ಲಿ ಜೆಸಿಐ ಶಿವಮೊಗ್ಗ ಸಮೃದ್ಧಿ ಘಟಕದ ಜೆಸಿ ನರಸಿಂಹಮೂರ್ತಿಯವರು ಎಲ್ಲಾ ಪದಾಧಿಕಾರಿಗಳೊಂದಿಗೆ ಸಿಬ್ಬಂದಿ ವರ್ಗದವರೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಯೋಗ ಒಂದು ಭೂಮಿ ಒಂದು ಆರೋಗ್ಯ “ಎನ್ನುವ ನುಡಿಯೊಂದಿಗೆ ಉದ್ಘಾಟನೆ ಮಾಡಿರುತ್ತಾರೆ.
ಕಾರಾಗೃಹದ ಎಲ್ಲಾ ಮಹಿಳಾ ಸಿಬ್ಬಂದಿಗಳಿಗೆ ಹಾಗೂ ಕಾರಾಗೃಹದ ಮಹಿಳಾ ಕೈದಿಗಳಿಗೆ ಯೋಗ ಹಾಗೂ ಪ್ರಾಣಯಾಮಗಳನ್ನು ಪತಾಂಜಲಿ ಯೋಗ ಕೇಂದ್ರದ ಶಿಕ್ಷಕಿಯಾದ ಜೆಸಿ ಸರಳಾ ವಾಸನ್, ಸಮೃದ್ಧಿ ಘಟಕದ ಕಾರ್ಯದರ್ಶಿಯಾದ ಜೆಸಿ ಗಾಯತ್ರಿ ಯಲ್ಲಪ್ಪಗೌಡ, ಪದಾಧಿಕಾರಿಯಾದ ಜೆಸಿ ಕವಿತಾ ಥೋರತ್, ಜೆಸಿ ಅನ್ನಪೂರ್ಣ ರವರೊಂದಿಗೆ ಯೋಗ ಮತ್ತು ಪ್ರಾಣಾಯಾಮಗಳನ್ನು ಕಲಿಸಿ ಕೊಟ್ಟರು.
ಇದೇ ರೀತಿ ಇನ್ನೂ ಐದು ದಿನಗಳವರೆಗೆ ಬೆಳಗ್ಗೆ 8.00 ಗಂಟೆಯಿಂದ 10.00 ಗಂಟೆಯವರೆಗೆ ಯೋಗ ಹಾಗೂ ಪ್ರಾಣಾಯಾಮವನ್ನು ಕಲಿಸಿಕೊಡುವವರಿದ್ದಾರೆ.
Prisons and Correctional Services ಜೆಸಿ ನರಸಿಂಹಮೂರ್ತಿ, ಜೆಸಿ ಮೋಹನ್ ಮತ್ತು ಪತಾಂಜಲಿ ಯೋಗ ಶಿಕ್ಷಕರಾದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಯೋಗಾಚಾರ್ಯ ಜೆ. ನಾಗರಾಜ ರವರೊಂದಿಗೆ ಕಾರಾಗೃಹದ ಪುರುಷ ಸಿಬ್ಬಂದಿ ವರ್ಗದವರಿಗೂ ಮತ್ತು ಕೈದಿಗಳಿಗೂ ಯೋಗ ಮತ್ತು ಪ್ರಾಣಾಯಾಮವನ್ನು ಕಲಿಸಿಕೊಟ್ಟರು. ಈ ದಿನದ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಂತಹ ಕಾರಾಗೃಹದ ಸಿಬ್ಬಂದಿ ವರ್ಗದವರಿಗೆ ಈ ಮೂಲಕ ವಂದನೆಗಳನ್ನು ಸಮೃದ್ಧಿ ಘಟಕದ ವತಿಯಿಂದ ಅರ್ಪಿಸಲಾಯಿತು.
