Friday, December 5, 2025
Friday, December 5, 2025

Kateel Ashok Pai Memorial College ಯೋಗವಿದ್ದಲ್ಲಿ ರೋಗವಿಲ್ಲ : ಡಾಕ್ಟರ್ ಮಲ್ಲಿಕಾರ್ಜುನ್

Date:

Kateel Ashok Pai Memorial College ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕಟೀಲ್ ಅಶೋಕ್ ಪೈಸ್ಮಾರಕ ನರ್ಸಿಂಗ್ ಸಂಸ್ಥೆಯ ಪ್ರಾಂಶುಪಾಲರಾದ ಡಾಕ್ಟರ್ ಮಲ್ಲಿಕಾರ್ಜುನರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಯೋಗ ಮತ್ತು ಮಾನಸಿಕ ಆರೋಗ್ಯದ ಮಹತ್ವವನ್ನು ತಿಳಿಸಿದರು . ಯೋಗ ಗೊತ್ತಿರುವವನಿಗೆ ರೋಗವಿಲ್ಲ ಯೋಗ ಗೊತ್ತಿರುವವನಿಗೆ ನಿದ್ದೆಯ ಭಂಗವಿಲ್ಲ, ಯೋಗ ಗೊತ್ತಿರುವವನಿಗೆ ಆಯಾಸವಿಲ್ಲ ಎಂದು ತಿಳಿಸಿದರು. ಯೋಗವೆಂಬುದು ಶರೀರ ಮತ್ತು ಮನಸುಗಳನ್ನು ಉಲ್ಲಾಸ ಉತ್ಸಾಹ ಹಾಗೂ ಆರೋಗ್ಯ ಪೂರ್ಣವಾಗಿಡಲು ಇರುವ ಮಾಧ್ಯಮ ಎಂದು ಅವರು ಹೇಳಿದರು .ವಿಶ್ವ ಆರೋಗ್ಯ ದಿನಾಚರಣೆಯ ಪ್ರಯುಕ್ತ ಮಾನಸ ಸಂಸ್ಥೆಯ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಎನ್ಎಸ್ಎಸ್ ರೆಡ್ ಕ್ರಾಸ್ ಐ ಕ್ಯೂಎಸ್‌ಸಿ ಘಟಕ ,ಕಟೀಲ್ ಅಶೋಕ್ ಪೈ ಸ್ಮಾರಕ ಪೂರಕ ಆರೋಗ್ಯ ವಿಜ್ಞಾನಗಳ ಸಂಸ್ಥೆ, ಕಟೀಲ ಅಶೋಕ್ ಪೈಸ್ಮಾರಕ ನರ್ಸಿಂಗ್ ಸಂಸ್ಥೆ ಹಾಗೂ ಮಾನಸ ಒಕೇಶನಲ್ ಟ್ರೈನಿಂಗ್ ಸೆಂಟರ್ ಸಹಯೋಗದಲ್ಲಿ ಯೋಗ ಹಾಗೂ ಮಾನಸಿಕ ಆರೋಗ್ಯ ವಿಷಯದ ಕುರಿತು ಅರಿವು ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಂ ಎಸ್ ಸಿ ಸೈಕಾಲಜಿ ವಿದ್ಯಾರ್ಥಿಗಳಾದ ಕುಮಾರಿ ಕೀರ್ತನ ,ಕುಮಾರಿ ರಕ್ಷಾ ಹಾಗೂ ಕುಮಾರಿ ಪ್ರಜ್ಞ ಮಾನಸಿಕ ಆರೋಗ್ಯಕ್ಕೆ ಅನುಕೂಲವಾಗುವ ವಿವಿಧ ಯೋಗಾಸನ ಹಾಗೂ ಮುದ್ರೆಗಳ ಪ್ರಾತ್ಯಕ್ಷಿಕೆಯನ್ನು ನೀಡಿದರು. ಯೋಗ ಮತ್ತು ಮಾನಸಿಕ ಆರೋಗ್ಯ ಸರ್ಟಿಫಿಕೇಟ್ ಕೋರ್ಸ್ಗಳ ಮೂಲಕ ವಿಶೇಷ ತರಬೇತಿಯನ್ನು ಪಡೆದ ಈ ವಿದ್ಯಾರ್ಥಿಗಳು ಸಮರ್ಥವಾಗಿ ಪ್ರತಿ ಅಸನ ನಮ್ಮ ಮಾನಸ ಮಾನಸಿಕ ಆರೋಗ್ಯಕ್ಕೆ ಹೇಗೆ ಅನುಕೂಲವಾಗಬಲ್ಲದು ಎಂಬ ವಿವರಣೆಯನ್ನು ನೀಡಿದರು. Kateel Ashok Pai Memorial College ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ಯೋಗ ಎಂಬುದು ಮನಸ್ಸು ಮತ್ತು ಶರೀರಗಳ ಮಧ್ಯೆ ಒಂದು ಆರೋಗ್ಯಪೂರ್ಣವಾದ ಸಂಪರ್ಕ ಹಾಗೂ ಸಂಬಂಧವನ್ನು ಏರ್ಪಡಿಸಬಲ್ಲದು ಎಂದು ಉದಾಹರಣೆಗಳ ಮೂಲಕ ತಿಳಿಸಿದರು. ಯೋಗವು ವ್ಯಾಯಾಮದಿಂದ ಪ್ರಾರಂಭವಾಗಿ ಸಂಕೀರ್ಣ ಆಸನಗಳು ಪ್ರಾಣಾಯಾಮ ಹಾಗೂ ಕೊನೆಗೆ ಸಮಾಧಿ ಎಂಬ ಅಷ್ಟಾಂಗ ಹಂತಗಳನ್ನು ಒಳಗೊಂಡಿದೆ ಆದರೆ ಮನುಷ್ಯನ ದಿನನಿತ್ಯದ ಜೀವನಕ್ಕೆ ಯೋಗ ಪ್ರಾಣಾಯಾಮ ಹಾಗೂ ವ್ಯಾಯಾಮದಂತಹ ಅಭ್ಯಾಸಗಳು ಪ್ರತಿಯೊಬ್ಬರಿಗೂ ಅಗತ್ಯ ಎಂಬುದನ್ನು ತಿಳಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಎಂ ಎಸ್ ಸಿ ಕ್ಲಿನಿಕಲ್ ಸೈಕಾಲಜಿ ವಿದ್ಯಾರ್ಥಿನಿ ಕುಮಾರಿ ರಾಜೇಶ್ವರಿ ನಡೆಸಿಕೊಟ್ಟರು. ಮಾನಸ ಟ್ರಸ್ಟಿನಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು ಉಪನ್ಯಾಸಕರು ಹಾಗೂ ವಿವಿಧ ಸಿಬ್ಬಂದಿಗಳು ವಿಶ್ವ ಯೋಗ ದಿನಾಚರಣೆಯ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು. ಹಾಗೂ ಯೋಗ ಮತ್ತು ಮಾನಸಿಕ ಆರೋಗ್ಯದ ಕುರಿತು ಸಮುದಾಯದಲ್ಲಿ ಜನರಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಮಾಡುವುದಾಗಿ ಪ್ರತಿಜ್ಞೆ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...