Sagar Jambagaru Railway Station ಶಿವಮೊಗ್ಗ ತಾಲೂಕು ಸಾಗರ ಜಂಬಗಾರು ರೈಲ್ವೆ ಟ್ರಾಕ್ಷನ್ ವಿದ್ಯುತ್ ಕೇಂದ್ರಕ್ಕೆ 5 ಎಂ.ವಿ.ಎ. ವಿದ್ಯುತ್ ಹೊರೆಯನ್ನು 110 ಕೆ.ವಿ. ವೋಲ್ಟೇಜ್ ರೆಫ್ರೆನ್ಸ್ನಲ್ಲಿ 110/33/11 ಕೆವಿ ಸಾಗರ ವಿದ್ಯುತ್ ಉಪಕೇಂದ್ರದಿಂದ ಮಂಡಕಳಲೆ ಗ್ರಾಮದ ಮುಖಾಂತರ 0.215 ಕಿ.ಮೀ. 110 ಕೆವಿ 400ಚ.ಮೀ.ಮೀ. ಭೂಗತ ಕೇಬಲ್ ಮುಖಾಂತರ ವಿದ್ಯುತ್ ಸರಬರಾಜು ಪೂರೈಸುವ ಕಾಮಗಾರಿಯು ಪೂರ್ಣಗೊಂಡಿದ್ದು, ಜೂ.13 ರಂದು ಅಥವಾ ನಂತರದ ದಿನಗಳಲ್ಲಿ ಯಾವುದೇ ಕ್ಷಣದಲ್ಲಿಯಾದರೂ ವಿದ್ಯುತ್ ಸರಬರಾಜು ಮಾಡಲಾಗುತಿದೆ. ಸಾರ್ವಜನಿಕರು ಈ ಮಾರ್ಗದಲ್ಲಿ ಕೆಪಿಟಿಸಿಎಲ್ 110 ಕೆವಿ ಭೂಗತ ಕೇಬಲ್ ಎಂದು ಕಲ್ಲಿನ ಫಲಕ ನೆಡಲಾಗಿರುವ ಕಡೆ ಯಾವುದೇ ಕಾಮಗಾರಿಗಳಿಗೆ ಗುಂಡಿಯನ್ನು ತೆಗೆಯುವುದನ್ನು ನಿಷೇಧಿಸಲಾಗಿದ್ದು, ಈ ಕೃತ್ಯದಿಂದ ಉಂಟಾಗುವ ವಿದ್ಯುತ್ ಅಪಘಾತಗಳ ಪರಿಣಾಮಗಳಿಗೆ ನೇರ ಹೊಣೆಗಾರರಾಗಿರುತ್ತಾರೆ ಮತ್ತು ಒಂದು ವೇಳೆ ಭೂಮಿ ಅಗಿಯುವ ಕೃತ್ಯದಿಂದ ಕೇಬಲ್‌ಗೆ ಹಾನಿಯಾದಲ್ಲಿ ಇದರ ರಿಪೇರಿಯ/ಹೊಸ ಕೇಬಲ್‌ನ ಸಂಪೂರ್ಣ ವೆಚ್ಚವನ್ನೂ ಭರಿಸಬೇಕಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಈ ಪ್ರದೇಶಗಳಲ್ಲಿ ಇನ್ನಿತರ ಇಲಾಖೆಗಳು ಅಥವಾ ಸಾರ್ವಜನಿಕರು ಕೆಲಸ ಮಾಡಬೇಕಾದಲ್ಲಿ ನಿಗಮದ ವತಿಯಿಂದ ನಿರಾಕ್ಷೇಪಣೆ ಪತ್ರ ಪಡೆದು ಸಂಬAಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಮ್ಮುಖದಲ್ಲಿಯೇ ಕೆಲಸ ನಿರ್ವಹಿಸಲು ಸೂಚಿಸಿದೆ.
Sagar Jambagaru Railway Station ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕೆಲಸ ನಿರ್ವಹಿಸಿದವರೇ ನೇರ ಹೊಣೆಗಾರರಾಗಿದ್ದು, ನಿಗಮವು ಜವಾಬ್ಧಾರಿಯಾಗಿರುವುದಿಲ್ಲ ಹಾಗೂ ಯಾವುದೇ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಯೋಜನೆ ವಿಭಾಗ, ಕವಿಪ್ರನಿನಿ ಶಿವಮೊಗ್ಗ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Sagar Jambagaru Railway Station ಸಾಗರ ಜಂಬಗಾರು ರೈಲ್ವೆ ಟ್ರಾಕ್ಷನ್‌ಗೆ ವಿದ್ಯುತ್ ಸಂಪರ್ಕ : ಎಚ್ಚರಿಕೆ
Date:
