World Environment Day ರಾಷ್ಟ್ರ ರಕ್ಷಣೆಯ ಮಹತ್ತರ ಕಾರ್ಯದಲ್ಲಿ ಸೈನಿಕರಾಗಲು ಎಲ್ಲರಿಗೂ ಸಾಧ್ಯವಾಗದಿದ್ದರೂ ಪರಿಸರ ರಕ್ಷಣೆಯ ಪವಿತ್ರ ಕಾರ್ಯದಲ್ಲಿ ಸೇವಕರಂತೂ ಆಗಬಹುದು ಎಂದು ಹಿರಿಯ ಪತ್ರಕರ್ತ ಪರಿಸರವಾದಿ ಡಾ. ಎಚ್ ಬಿ ಮಂಜುನಾಥ ಹೇಳಿದರು. ಜೆ ಹೆಚ್ ಪಟೇಲ್ ಬಡಾವಣೆಯ ಶಬರಿ ಮಹಿಳಾ ಸಂಘದ ವತಿಯಿಂದ ಉದ್ಯಾನವನದಲ್ಲಿ ಏರ್ಪಾಡಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನಂತರ ಮಾತನಾಡುತ್ತಾ 20 ಮಾನದಂಡದಲ್ಲಿ ಇರಬೇಕಾದ ವಾಯುಗುಣಮಟ್ಟ ಸೂಚ್ಯಂಕವು ಬೆಂಗಳೂರಿನಂತ ಮಹಾನಗರದಲ್ಲಿ ಅಪಾಯಕಾರಿಯಾದ 153ಕ್ಕೆ ಹೋಗಿದೆ ದೆಹಲಿ ಈ ಮಟ್ಟವನ್ನೂ ಮೀರಿದೆ, ಇದಕ್ಕೆಲ್ಲಾ ಕಾರಣ ವಾಯುಮಾಲಿನ್ಯವೂ ಆಗಿದ್ದು ಸಸಿ ನೆಟ್ಟು ಮರಗಳನ್ನು ಬೆಳೆಸುವ ಮೂಲಕ ವಾಯುವಿನ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದಾಗಿದೆ. World Environment Day ಉಪಕಾರಿಯಾಗಬೇಕಾದ ಮಳೆಯು ಪರಿಸರ ಅಸಮತೋಲನದಿಂದಾಗ ಅಪಾಯಕಾರಿಯಾಗಿ ಸುರಿಯುವ ಪರಿಸ್ಥಿತಿ ಬಂದಿದೆ. ವರ್ಷವೊಂದಕ್ಕೆ ಪ್ರಪಂಚದಲ್ಲಿ 420 ಲಕ್ಷ ಎಕರೆಯ ಪ್ರಮಾಣದ ಮರಗಳು ನಾಶವಾಗುತ್ತಿದ್ದು ಭಾರತದಲ್ಲಿ ವಾರ್ಷಿಕ 40 ಲಕ್ಷ ಎಕರೆಯಷ್ಟು ಪ್ರದೇಶದ ಮರಗಳು ನಾಶವಾಗುತ್ತಿವೆ, ಇದೆಲ್ಲಾ ಅನಿವಾರ್ಯವೆನಿಸಿದರೂ ಪರ್ಯಾಯವಾಗಿ ಮರಗಳನ್ನು ಬೆಳೆಸಲೇಬೇಕು ಇಲ್ಲವಾದಲ್ಲಿ ಮುಂದೆ ನಮಗೆ ಉಸಿರಾಡಲೂ ಆಮ್ಲಜನಕ ಸಿಗಲಾರದು ಎಂದರು. ಶಬರಿ ಮಹಿಳಾ ಸಂಘದ ಸಂಸ್ಥಾಪಕಿ ವಸಂತಾ ಚಂದ್ರಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷೆ ಶಿವಗಂಗಾ, ಪುಷ್ಪಲತಾ ಅಜ್ಜಯ್ಯ, ಮುಂತಾದವರು ಉಪಸ್ಥಿತರಿದ್ದು ವಿಜಯ ವೀರೇಂದ್ರ ಕಾರ್ಯಕ್ರಮ ಪ್ರಸ್ತುತ ಪಡಿಸುತ್ತಾ ಅತಿಥಿಗಳ ಪರಿಚಯ ಮಾಡಿದರು. ಶೋಭಾ ಸುರೇಶ್ ಹಾಗೂ ಪ್ರಮೀಳಾ ಪ್ರಾರ್ಥನೆ ಹಾಡಿದರು. ವಿಜಯಲಕ್ಷ್ಮೀ ಸ್ವಾಗತ ಕೋರಿದರು. ಲಲಿತಾ ಪರಿಸರ ದಿನಾಚರಣೆಯ ಅನುಭವ ಹಂಚಿಕೊಂಡರು. ವಿಜಯ ವಂದನೆಗಳನ್ನು ಸಮರ್ಪಿಸಿದರು. ಶಬರಿ ಮಹಿಳಾ ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು ಭಾಗವಹಿಸಿದ್ದರು.
World Environment Day ರಾಷ್ಟ್ರ ರಕ್ಷಣೆಯ ಸೈನಿಕರಾಗದಿದ್ದರೂ ಪರಿಸರ ರಕ್ಷಣೆಯ ಸೇವಕರಾದರೂ ಆಗಬಹುದು: ಡಾ ಎಚ್ ಬಿ ಮಂಜುನಾಥ
Date:
