Monday, December 15, 2025
Monday, December 15, 2025

District Consumer Disputes Redressal Commission ಸೇವಾ ನ್ಯೂನತೆ ರುಜುವಾತು : ವಿಮಾ ಮೊತ್ತ ನೀಡುವಂತೆ ಆಯೋಗ ಆದೇಶ

Date:

District Consumer Disputes Redressal Commission ಭದ್ರಾವತಿ ತಾಲ್ಲೂಕಿನ ಯಡೇಹಳ್ಳಿಯ ಮೊಹಮ್ಮದ್ ಅಫ್‌ನಾನ್ ಎಸ್ ಇವರು ಚೋಳಮಂಡಳ ಎಂ ಎಸ್ ಜನರಲ್ ಇನ್ಶೂರೆನ್ಸ್ ಕಂಪೆನಿ ಲಿ., ಬೆಂಗಳೂರು, ಇಂಡಸ್ ಬ್ಯಾಂಕ್ ಲಿ. ಚೆನ್ನೈ, ತಮಿಳುನಾಡು, ಇಂಡಸ್ ಬ್ಯಾಂಕ್ ಲಿ, ಶಿವಮೊಗ್ಗ ಇವರ ವಿರುದ್ದ ವಿಮಾ ಕ್ಲೇಂ ನೀಡದಿರುವ ಬಗ್ಗೆ ದಾಖಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರು ಸೇವಾ ನ್ಯೂನತೆ ಎಸಗಿದ್ದು ಸೂಕ್ತ ಪರಿಹಾರ ನೀಡುವಂತೆ ಅದೇಶ ನೀಡಿದೆ.
ದೂರುದಾರ ಮೊಹಮ್ಮದ್ ಅಫ್‌ನಾನ್ 2ನೇ ಎದುರುದಾರಿಂದ ವಾಹನ ಸಾಲ ಪಡೆದು ಒಂದು ಸರಕು ಸಾಗಾಣಿಕೆ ವಾಹನ ಖರೀದಿಸಿದ್ದು, 1ನೇ ಎದುರುದಾರರಿಂದ ವಾಹನಕ್ಕೆ ವಿಮೆ ಮಾಡಿಸಿರುತ್ತಾರೆ. ದಿ: 30-06-2022 ರಿಂದ 29-06-2023 ರವರೆಗೆ ವಿಮೆಯು ಚಾಲ್ತಿಯಲ್ಲಿದ್ದು ವಾಹನದ ಐಡಿವಿ ಮೊತ್ತ ರೂ.7,30,550 ಗಳಾಗಿರುತ್ತವೆ. ದಿ: 24-06-2023 ರಂದು ಆಂಧ್ರದ ಅನಂತಪುರ ಜಿಲ್ಲೆಯ ಹನಿರೆಡ್ಡಿಪಲ್ಲಿ ಬಳಿ ವಾಹನ ಅಪಘಾತಕ್ಕೀಡಾಗಿ ದೂರುದಾರರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಕ್ರಿಮಿನಲ್ ಕೇಸ್ ದಾಖಲಿಸಲಾಗಿರುತ್ತದೆ. ನಂತರ ಈ ಅಪಘಾತದ ವಿಷಯವನ್ನು 1ನೇ ಎದುರುದಾರರಿಗೆ ತಿಳಿಸಿ, ವಿಮಾ ಮೊತ್ತವನ್ನು ನೀಡಲು ಕೇಳಿಕೊಂಡಿರುವನ್ವಯ ಎದುರುದಾರರು ಸರ್ವೇಯರ್‌ನ್ನು ನೇಮಿಸಿ ಅಪಘಾತವಾದ ವಾಹನವನ್ನು ಪರಿಶೀಲಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಅಪಘಾತಕ್ಕೀಡಾದ ವಾಹನ ಇದ್ದ ಪೊಲೀಸ್ ಠಾಣೆಯಿಂದ ತಪಾಸಣೆ ಮಾಡಿರುತ್ತಾರೆ. ತದನಂತರ 1ನೇ ಎದುರುದಾರರು ದೂರುದಾರರಿಗೆ ಪತ್ರ ಬರೆದು ಅಪಘಾತವಾಗಿರುವ ವಾಹನದ ದಾಖಲಾತಿಗಳನ್ನು ಸಲ್ಲಿಸಲು ಕೇಳಿರುತ್ತಾರೆ. ಆಗ ದೂರುದಾರರು ಅಪಘಾತವಾಗಿರುವ ವಾಹನ ಪೊಲೀಸ್ ಠಾಣೆಯಲ್ಲಿರುವುದರಿಂದ ದಾಖಲಾತಿಗಳನ್ನು ಸಲ್ಲಿಸಲು ಆಗುತ್ತಿಲ್ಲವೆಂದು ತಿಳಿಸಿರುತ್ತಾರೆ. ಆದರೆ ಎದುರುದಾರರು ಈಗಾಗಲೇ ಸರ್ವೇ ನಡೆಸುವಾಗ ಮತ್ತು ಕ್ಲೇಂ ಫಾರಂ ನೀಡುವ ಸಮಯದಲ್ಲಿ ದಾಖಲೆಗಳನ್ನು ಪಡೆದಿರುತ್ತಾರೆಂದು ತಿಳಿಸಿರುತ್ತಾರೆ.
District Consumer Disputes Redressal Commission ದಿ: 01-02-2024 ರಂದು ನ್ಯಾಯಾಲಯದ ಆದೇಶದಂತೆ ವಾಹನವನ್ನು ಬಿಡುಗಡೆಗೊಳಿಸಿಕೊಂಡು ಶಿವಮೊಗ್ಗದಲ್ಲಿರುವ ಗ್ಯಾರೇಜ್‌ಗೆ ರಿಪೇರಿಗಾಗಿ ಬಿಟ್ಟಿದ್ದು, ವಾಹನ ರಿಪೇರಿಗೆ ರೂ.6,01,482 ಗಳಾಗುತ್ತದೆಂದು ತಿಳಿಸಿರುತ್ತಾರೆ. ದೂರುದಾರರು ಎದುರುದಾರರ ಬಳಿ ಹೋಗಿ ವಾಹನದ ರಿಪೇರಿ ಮೊತ್ತ ಐಡಿವಿ ಮೊತ್ತದ ಶೇ.75 ಕ್ಕಿಂತ ಹೆಚ್ಚಿರುವುದರಿಂದ ಒಟ್ಟು ನಷ್ಟದ ವಿಮಾ ಕ್ಲೇಮು ಮಾಡಿಕೊಡಲು ಕೇಳಿಕೊಂಡಾಗ, ಅವರು ನೀವು ಸರಿಯಾದ ಸಮಯಕ್ಕೆ ದಾಖಲೆಗಳನ್ನು ನೀಡದೇ ಇರುವ ಕಾರಣ ನಿಮ್ಮ ವಿಮಾ ಕ್ಲೇಮನ್ನು ಮುಕ್ತಾಯಗೊಳಿಸಿರುವುದಾಗಿ ತಿಳಿಸಿರುತ್ತಾರೆ.
2ನೇ ಎದುರುದಾರರಿಂದ ಸಾಲ ಪಡೆದಿದ್ದು, ಇಎಂಐ ಕಟ್ಟದಿದ್ದರಿಂದ ಅಪಘಾತ ವಾಹನವನ್ನು ದೂರುದಾರರಿಂದ ವಶಕ್ಕೆ ಪಡೆದಿರುತ್ತಾರೆ. ಎದುರುದಾರರು ವಿಮಾ ಕ್ಲೇಮು ನೀಡದೇ ಸೇವಾ ನ್ಯೂನತೆ ಎಸಗಿದ್ದಾರೆಂದು ಆಯೋಗದ ಮುಂದೆ ದೂರು ಸಲ್ಲಿಸಿದ್ದು, ಆಯೋಗವು ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ, ದಾಖಲಾತಿಗಳನ್ನು ಪರಿಶೀಲಿಸಿ, ಉಭಯ ಪಕ್ಷದವರ ವಾದ-ವಿವಾದ ಆಲಿಸಿ, 2 ಮತ್ತು 3ನೇ ಎದುರುದಾರರು ವಾಹನ ಖರೀದಿಸಲು ಸಾಲ ನೀಡಿದವರಾಗಿದ್ದು, ವಿಮಾ ಕ್ಲೇಮು ನೀಡುವಲ್ಲಿ ಇವರ ಪಾತ್ರವಿಲ್ಲವೆಂದು ಮತ್ತು ದೂರುದಾರರ ವಿಮಾ ಕ್ಲೇ ಸರಿಯಾಗಿದ್ದರೂ ತಿರಸ್ಕರಿಸಿರುವುದು ದಾಖಲೆಗಳೆಂದ ರುಜುವಾತಾಗಿರುವುದರಿಂದ ಎದುರುದಾರ ವಿಮಾ ಕಂಪೆನಿ ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ, ಈ ಆದೇಶವಾದ ದಿನಾಂಕದಿAದ 45 ದಿನಗಳ ಒಳಗಾಗಿ 2 ಮತ್ತು 3ನೇ ಎದುರುದಾರರಿಂದ ಅಪಘಾತವಾದ ವಾಹನವನ್ನು ಪಡೆದು 1ನೇ ಎದುರುದಾರರು ದೂರುದಾರರಿಗೆ ವಾಹನದ ಐಡಿವಿ ಮೊತ್ತ ರೂ.7,30,550/- ಗಳನ್ನು ಶೇ.9 ಬಡ್ಡಿಯೊಂದಿಗೆ 08-05-2024 ರಿಂದ ಪೂರ್ತಿ ಹಣ ನೀಡುವವರೆಗೂ ಪಾವತಿಸಬೇಕೆಂದು, ತಪ್ಪಿದಲ್ಲಿ ಈ ಮೊತ್ತಕ್ಕೆ ಶೇ.10 ರಂತೆ ಬಡ್ಡಿಯನ್ನು ಈ ಆದೇಶವಾದ ದಿನಾಂಕದಿಂದ ಪೂರ್ತಿ ಹಣ ಪಾವತಿಸುವರೆಗೂ ನೀಡಬೇಕೆಂದು ಹಾಗೂ ದೂರುದಾರರು 2 ಮತ್ತು 3 ನೇ ಎದುರುದಾರರು ಸಬಂಧಿಸಿದ ಪ್ರಾಧಿಕಾರದಲ್ಲಿ ವಾಹನದ ದಾಖಲಾತಿಗಳನ್ನು ಬದಲಾವಣೆ ಮಾಡಿಕೊಡುವ ಸಂದರ್ಭದಲ್ಲಿ 1ನೇ ಎದುರುದಾರರಿಗೆ ಸಹಕರಿಸಬೇಕಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮೇ 23 ರಂದು ಆದೇಶಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...