Saturday, December 6, 2025
Saturday, December 6, 2025

Madhu Bangarappa ನಿರಂತರ ವಿದ್ಯುತ್‌ ನಮ್ಮ ಸಂಕಲ್ಪ : ಎಸ್.ಮಧು ಬಂಗಾರಪ್ಪ

Date:

Madhu Bangarappa ಶಿವಮೊಗ್ಗ ಜಿಲ್ಲೆಯಲ್ಲಿನ ರೈತರ ಕೃಷಿ ಚಟುವಟಿಕೆ ಹಾಗೂ ಜನರ ಅನುಕೂಲಕ್ಕೆ ತಕ್ಕಂತೆ ಯಾವುದೇ ಅಡತಡೆಯಿಲ್ಲದೆ ನಿರಂತರ ವಿದ್ಯುತ್‌ಒದಗಿಸುವ ಸಂಕಲ್ಪ ನಮ್ಮದಾಗಿದ್ದು, ಅದಕ್ಕಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಕರ್ನಾಟಕ ವಿದ್ಯುತ್‌ಪ್ರಸರಣ ನಿಗಮವು ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯಲ್ಲಿ 110/11ಕೆ.ವಿ. ವಿದ್ಯುತ್‌ಉಪಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ವಿದ್ಯುತ್‌ಉಪಕೇಂದ್ರದ ಆರಂಭದಿಂದಾಗಿ ವಿದ್ಯುತ್‌ವ್ಯತ್ಯಯದಲ್ಲಿ ಗಣನೀಯ ಸುಧಾರಣೆ ಕಂಡುಬರಲಿದೆ ಅಲ್ಲದೇ ಮಲೆನಾಡಿನ ಜನರ ವಿದ್ಯುತ್‌ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಂಜೂರಾಗಿರುವ ಎಂ.ಕೆ.ಬೈಲು ಮತ್ತು ಅಮೃತ ಗ್ರಾಮಗಳಲ್ಲಿ 110ಕೆ.ವಿ. ವಿದ್ಯುತ್‌ ಉಪಕೇಂದ್ರಗಳ ನಿರ್ಮಾಣ ಕಾರ್ಯ ಮುಂದಿನ ಕೆಲವೇ ದಿನಗಳಲ್ಲಿ ಆರಂಭಗೊಂಡು ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿವೆ. ಅದರ ಆರಂಭಕ್ಕೆ ಇರುವ ಅಡತಡೆಗಳನ್ನು ಇತ್ಯರ್ಥಪಡಿಸಲು ವಿಶೇಷ ಗಮನಹರಿಸುವುದಾಗಿ ಅವರು ನುಡಿದರು.
ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಅಧಿಕಾರಾವಧಿಯಲ್ಲಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್‌ನೀಡಿದ್ದರಿಂದಾಗಿ ರಾಜ್ಯದಾದ್ಯಂತ ಇಂದು ಅನೇಕ ರೈತರು ಸಂತೋಷದ ದಿನಗಳನ್ನು ಕಳೆಯುವಂತಾಗಿದೆ. ಉಚಿತ ವಿದ್ಯುತ್‌ಯೋಜನೆ ಇಂದಿಗೂ ಮುಂದುವರೆದಿರುವುದು ದಿ.ಎಸ್.ಬಂಗಾರಪ್ಪ ಅವರ ದೂರದೃಷ್ಠಿಯ ದ್ಯೋತಕವಾಗಿದೆ ಎಂದ ಅವರು, ದೇಶದ ಅರ್ಥ ವ್ಯವಸ್ಥೆಯ ಮೇಲೆ ಇದು ಪೂರಕ ಪರಿಣಾಮ ಬೀರಿದೆ ಎಂದರು.
Madhu Bangarappa ಪ್ರಸ್ತುತ ಆಡಳಿತಾರೂಢ ಸರ್ಕಾರವು ಪ್ರತಿ ವರ್ಷ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ಒದಗಿಸಲು ವಾರ್ಷಿಕವಾಗಿ ರೂ.20,000ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ ಎಂದ ಅವರು, ಅತಿ ಹೆಚ್ಚು ವಿದ್ಯುತ್‌ಉತ್ಪಾದಿಸಿ ರಾಜ್ಯಕ್ಕೆ ವಿತರಿಸುವ ಜಿಲ್ಲೆ ನಮ್ಮದಾಗಿದ್ದು, ಇಲ್ಲಿನ ಜನರ ಅಗತ್ಯಗಳಿಗೆ ವಿದ್ಯುತ್‌ಒದಗಿಸುವುದು, ಅವರ ಹಿತಕಾಯುವುದು ಕೂಡ ಸರ್ಕಾರದ ಕಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ, ನಿರಂತರ ವಿದ್ಯುತ್‌ಕಣ್ಣುಮುಚ್ಚಾಲೆಯಿಂದ ಈ ಭಾಗದ ಜನರ ವಿದ್ಯುತ್‌ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸವಾಲು ಎನಿಸಿತ್ತು. ವಾಸ್ತವ ಸಂಗತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ಪರಿಣಾಮವಾಗಿ ಅತ್ಯಲ್ಪ ಅವಧಿಯಲ್ಲಿ ಸದರಿ ವಿದ್ಯುತ್‌ಉಪಕೇಂದ್ರವು ಸಿದ್ಧಗೊಂಡು ಲೋಕಾರ್ಪಣೆ ಮಾಡಿರುವುದು ಹರ್ಷದ ಸಂಗತಿಯಾಗಿದೆ ಎಂದರು.
ಈಗಾಗಲೇ ತಾಲೂಕಿನ ಮೂರು ಭಾಗಗಳಲ್ಲಿ 110/11 ಕೆ.ವಿ. ವಿದ್ಯುತ್‌ಸಂಗ್ರಹಾಗಾರಗಳನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಘಟಕವು ಸುಮಾರು 8ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಿವಿಧ ಕಾರಣಗಳಿಂದ ಇನ್ನೂ ಕಾರ್ಯಾರಂಭಗೊಳ್ಳದಿರುವ ಎಂ.ಕೆ.ಬೈಲು ಮತ್ತು ಅಮೃತ ಗ್ರಾಮಗಳ ವಿದ್ಯುತ್‌ಉಪಕೇಂದ್ರಗಳನ್ನು ಅಗತ್ಯವಿರುವ ಎಲ್ಲಾ ಪ್ರಯತ್ನ ಮಾಡಿ, ಜನರಿಗೆ ವಿದ್ಯುತ್‌ಒದಗಿಸಲು ಪ್ರಾಮಾಣಿಕವಾಗಿ ಯತ್ನಿಸಲಾಗುವುದು. ನಿರಂತರ ವಿದ್ಯುತ್‌ಸರಬರಾಜಿನಿಂದಾಗಿ ರೈತರ ಪಂಪ್‌ಸೆಟ್‌ಗಳಿಗೆ ಮಾತ್ರವಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗಿದೆ ಎಂದರು.
Madhu Bangarappa ಎಲ್ಲರ ದೈನಂದಿನ ಬದುಕು ವಿದ್ಯುತ್‌ನ್ನೇ ಅವಲಂಬಿಸಿದೆ. ಆದ್ದರಿಂದ ಬೇಡಿಕೆಯೂ ಹೆಚ್ಚಾಗಿದೆ. ಇಂದಿನ ಜನರ ಅಗತ್ಯಗಳಿಗೆ ಪೂರಕವಾಗಿ ವಿದ್ಯುತ್‌ನ್ನು ಪೂರೈಸಬೇಕಾದ ಹೊಣೆಗಾರಿಕೆಯೂ ಜನಪ್ರತಿನಿಧಿಗಳ ಮೇಲಿದೆ ಎಂದ ಅವರು, ಎಲ್ಲರಿಗೂ ಎಲ್ಲಾ ಕಾಲಕ್ಕೂ ಗುಣಮಟ್ಟದ ವಿದ್ಯುತ್‌ಪೂರೈಕೆಯಾಗಬೇಕು. ವಿದ್ಯುತ್‌ಬಳಸುವ ಗ್ರಾಹಕರು ಮಿತವಾಗಿ ಬಳಸಬೇಕು. ನಿರಂತರವಾಗಿ ತಾಲೂಕಿನಲ್ಲಿ ವಿದ್ಯುತ್‌ಒದಗಿಸುವ ಸಂಬಂಧ ದುರಸ್ತಿಗೊಳ್ಳಬೇಕಾದ ಟಿ.ಸಿ.ಗಳನ್ನು ದುರಸ್ತಿ ಮಾಡಿಸಲಾಗಿದೆ. ಈ ಉಪಕೇಂದ್ರದ ಆರಂಭದಿಂದಾಗಿ ತೂದೂರು, ಮಂಡಗದ್ದೆ ಮತ್ತು ಬೆಜ್ಜವಳ್ಳಿಯ ಬಹುತೇಕ ಗ್ರಾಮಗಳಿಗೆ ನಿರಂತರ ವಿದ್ಯುತ್‌ದೊರೆಯಲಿದೆ ಎಂದರು.
ಸದಾ ಅಪಾಯದಲ್ಲಿಯೇ ಕಾರ್ಯನಿರ್ವಹಿಸುವ ನಿಗಮದ ಅಧಿಕಾರಿ-ಸಿಬ್ಬಂಧಿಗಳ ಸೇವೆ ಸ್ಮರಣೀಯವಾದುದು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಪಲ್ಲವಿಯವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೆಸ್ಕಾಂ ಅಧೀಕ್ಷಕ ಇಂಜನಿಯರ್‌ಸುರೇಶ್‌, ಗ್ರಾಮ ಪಂಚಾಯಿತಿಯ ಸುನಿತಾನಾಯಕ್‌ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...