Saturday, December 6, 2025
Saturday, December 6, 2025

Shivamogga Rotary Club ರೋಟರಿ ಮಲೆನಾಡು ಕ್ಲಬ್ಬಿನಲ್ಲಿ ʼಜಾಲಿ ಬಾರಿನ ಪೋಲಿ ಕವಿʼ

Date:

Shivamogga Rotary Club ʼಜಾಲಿ ಬಾರಿನಲ್ಲಿ ಕೂತ ಪೋಲಿ ಗೆಳೆಯರುʼ ಎಂಬ ಹಾಡು ಕೇಳದವರಿಲ್ಲ. ಕನ್ನಡ ಸಾಹಿತ್ಯದ ಮಡಿವಂತಿಕೆಗಳನ್ನು ಮೀರಿ ರಚಿಸಲಾದ ಈ ಹಾಡು ಸಾಹಿತ್ಯಪ್ರಿಯರ ವಿಶೇಷವಾಗಿ ಮದ್ಯಪ್ರಿಯರ ನೆಚ್ಚಿನ ಗೀತೆ. ಈ ಸುಪ್ರಸಿದ್ಧ ಕವಿತೆಯ ರಚನಕಾರ ಶ್ರೀ ಬಿ,ಆರ್. ಲಕ್ಷ್ಮಣ್‌ ರಾವ್‌ ರವರು ಶಿವಮೊಗ್ಗದ ರೋಟರಿ ಕ್ಲಬ್‌ ಮಲೆನಾಡುವಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮೂಲತಃ ಚಿಕ್ಕಬಳ್ಳಾಪುರದವರಾದ ಲಕ್ಷ್ಮಣರಾಯರು ಶಿವಮೊಗ್ಗದ ಅಳಿಯ. ತಮ್ಮ ಶ್ರೀಮತಿಗಾಗಿ ರಚಿಸಿದ ʼಸುಬ್ಬಾಭಟ್ಟರ ಮಗಳೇ, ನಂದೆಲ್ಲಾ ನಿಂದೆ ತಗೊಳ್ಳೆʼ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಮತ್ತೊಂದು ಹಾಡು. ಭಾವಗೀತೆಗಳ ಕವಿ, ಪ್ರೇಮ ಕವಿ, ವಿಕಟ ಕವಿ ಹೀಗೆ ಹಲವಾರು ಬಿರುದುಗಳನ್ನು ಪಡೆದಿರುವ ಲಕ್ಷ್ಮಣರಾಯರ ಅತ್ಯಂತ ಶ್ರೇಷ್ಟ ರಚನೆ ʼಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನುʼ ಕೇಳುಗರ ಕಣ್ಣಂಚಲ್ಲಿ ನೀರು ತರಿಸುವಷ್ಟು ಭಾವನಾತ್ಮಕವಾದುದು. ಸಮಾರಂಭದಲ್ಲಿ ಅತ್ಯಂತ ವಿನೋದಭರಿತವಾಗಿ ಮಾತನಾಡಿದ ಲಕ್ಷ್ಮಣರಾಯರು ತಮ್ಮದೇ ರಚನೆಯ ಎರಡು ಹಾಡುಗಳನ್ನು ತಮ್ಮ ಕಂಚಿನ ಕಂಠದಲ್ಲಿ ಸುಶ್ರಾವ್ಯವಾಗಿ ಹಾಡಿ ಸಭಿಕರ ಮನ ಗೆದ್ದರು. ಅವರ ಮಾತುಗಳು ಬಹುತೇಕ ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸುವತ್ತ ಕೇಂದ್ರಿತವಾಗಿದ್ದವು. ಲಕ್ಷ್ಮಣರಾಯರ ಜೊತೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಎಂ.ಎನ್.ಸುಂದರ್‌ ರಾಜ್‌ ರವರು ಮಾತನಾಡಿ ಲಕ್ಷ್ಮಣರಾಯರ ಯಶಸ್ಸಿನ ಬಹು ದೊಡ್ಡ ಪಾಲು ಅವರ ಅರ್ಧಾಂಗಿಯಾದ ಶಿವಮೊಗ್ಗದ ಹೆಣ್ಣು ಮಗಳಿಗೆ ಸಲ್ಲುತ್ತದೆ ಎಂದರು.
Shivamogga Rotary Club ಇದೇ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚಿನ ಅಂಕ ಗಳಿಸಿದ ಮೊರಾರ್ಜಿ ಶಾಲೆ ವಿದ್ಯಾರ್ಥಿನಿ ಕು. ಧನುಶ್ರೀ ರವರನ್ನು ಅಭಿನಂದಿಸಿ ಪ್ರೋತ್ಸಾಹ ಧನವನ್ನು ರೊ.ರಾಜು ವಿತರಿಸಿದರು. ಕ್ಲಬ್‌ ಸದಸ್ಯರಾದ ರೊ.ಡಾ.ಸಿದ್ದಲಿಂಗ ಮೂರ್ತಿ ಹಾಗೂ ರೊ.ಅನುಸೂಯ ರವರು ತಮ್ಮ ಜನ್ಮ ದಿನದ ಹಿನ್ನೆಲೆಯಲ್ಲಿ ಸಮಾರಂಭದಲ್ಲಿ ಉಪಸ್ಥಿತರಿದ್ದವರಿಗೆಲ್ಲಾ ಔತಣಕೂಟವನ್ನು ಹಮ್ಮಿಕೊಂಡಿದ್ದರು.ಶಿವಮೊಗ್ಗದ ರೋಟರಿ ಬಯೋ ಡೈವರ್ಸಿಟಿ ಪಾರ್ಕಿನ ಸದಸ್ಯರೂ ಆಗಿರುವ ರೊ.ಡಾ.ಸಿದ್ದಲಿಂಗ ಮೂರ್ತಿ ಪಾರ್ಕಿನ ಅಭಿವೃದ್ಧಿಗಾಗಿ ಕೈ ಜೋಡಿಸುವಂತೆ ಕ್ಲಬ್ಬಿನ ಸದಸ್ಯರಲ್ಲಿ ಹಾಗೂ ಸಭಿಕರಲ್ಲಿ ಮನವಿ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ರೊ.ಮುಸ್ತಾಕ್‌ ವಹಿಸಿದ್ದರು. ಕಾರ್ಯದರ್ಶಿ ರೊ.ಶ್ರೀಕಾಂತ್‌ ಎ.ವಿ., ಸ್ವಾಗತಿಸಿದರು. ರೊ,ಮಂಜುಳಾರಾಜು ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಕಬ್‌ ಸದಸ್ಯರು ಹಾಗೂ ಅವರ ಕುಟುಂಬದವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಸಭಾಂಗಣ ಭರ್ತಿಯಾಗಿತ್ತು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...