Sri Adichunchanagiri Independent Pre-University College ಶಿವಮೊಗ್ಗ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಎಸ್. ಎನ್. ತೇಜಸ್ ದಾನೆಗೌಡ ಅವರು ಕೆ. ಸಿಇಟಿಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ದ್ವಿತೀಯ ಪಿಯು ಪರೀಕ್ಷೆಯಲ್ಲಿ 587 ಅಂಕಗಳಿಸಿದ್ದ ತೇಜಸ್ ಅವರು ಕೃಷಿ ವಿಶ್ವವಿದ್ಯಾಲಯ ಪ್ರವೇಶಾತಿ ಕೆಸಿಇಟಿಯಲ್ಲಿ 115ನೇ ರ‍್ಯಾಂಕ್ ಪಡೆದಿದ್ದು, ಎಂಜಿನಿಯರಿಂಗ್ ಕೆಸಿಇಟಿಯ ರ‍್ಯಾಂಕ್ ನಲ್ಲಿ 649ನೇ ಸ್ಥಾನ ಪಡೆದಿದ್ದಾರೆ. ಬಿ ಎನ್ ವೈ ನಲ್ಲಿ 499ನೇ ರ‍್ಯಾಂಕ್ ಪಡೆದಿದ್ದು, ಪಶುವೈದ್ಯಕೀಯದಲ್ಲಿ 936ನೇ ರ‍್ಯಾಂಕ್ ಗಳಿಸಿದ್ದಾರೆ.
Sri Adichunchanagiri Independent Pre-University College ಶಿವಮೊಗ್ಗ ವಿದ್ಯಾನಗರದ ಹೆಚ್. ಬಿ. ನಾಗರಾಜ್ ಹಾಗು ಸಂಧ್ಯಾ ಎಚ್. ಎಂ. ಅವರ ಪುತ್ರ ಎಸ್. ಎನ್. ತೇಜಸ್ ಅವರ ಸಾಧನೆಗೆ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಗುರುರಾಜ್, ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
