S.N.Chennabasappa ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸ್ಕೌಟ್ ಮತ್ತು ಗೈಡ್ಸ್ ಚಳುವಳಿ ಅತ್ಯಂತ ಪರಿಣಾಮಕಾರಿಯಾಗಿ ಪೂರಕವಾಗಿದೆ ಎಂದು ಶಾಸಕ ಚನ್ನಬಸಪ್ಪನವರು ನುಡಿದರು ಅವರು ಇಂದು ಬೆಳಿಗ್ಗೆ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಕಚೇರಿಯ ಆವರಣದಲ್ಲಿ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾದ ಜಸ್ಟಿಸ್ ಕೆ ಶಂಕರನಾರಾಯಣ ರಾವ್ ಸ್ಮಾರಕ ರಾಜ್ಯಮಟ್ಟದ ಮುಕ್ತ ದಳಗಳ ರ್ಯಾಲಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಇಂತಹ ಸೇವಾ ಮನೋಭಾವದ ಅಂತರಾಷ್ಟ್ರೀಯ ಸಂಸ್ಥೆಯ ಚಟುವಟಿಕೆಗಳು ತುಂಬಾ ಅಗತ್ಯವಾಗಿದೆ ಮಕ್ಕಳಲ್ಲಿ ಸಂಸ್ಕಾರದ ಜೊತೆಗೆ ಕ್ರಿಯಾಶೀಲತೆ ಹಾಗೂ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸ್ಕೌಟ್ಸ್ ಅಂಡ್ ಗೈಡ್ಸ್ ಇಂದು ತುಂಬಾ ಅಗತ್ಯವಾಗಿದೆ.
ಈ ಚಳುವಳಿಯೂ ಮನೆ ಮನೆಗಳಲ್ಲಿ ತಲುಪಬೇಕು ಇದರಿಂದ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಅವಕಾಶದ ಜೊತೆಗೆ ಪರಸ್ಪರರಲ್ಲಿ ಒಡನಾಟ ಹೆಚ್ಚುತ್ತದೆ ಎಂದು ನುಡಿದರು ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಕೆ ಗಂಗಪ್ಪ ಗೌಡ ಮಾತನಾಡುತ್ತಾ 13 ವರ್ಷಗಳ ನಂತರ ಈ ರಾಜ್ಯ ಮಟ್ಟದ ರ್ಯಾಲಿಯನ್ನು ಶಿವಮೊಗ್ಗ ಜಿಲ್ಲಾ ಸಂಸ್ಥೆಯವರು ತುಂಬಾ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದು ಇದರಲ್ಲಿ ರಾಜ್ಯದ 10 ಜಿಲ್ಲೆಗಳಿಂದ. ಕಬ್ ಬುಲ್ ಬುಲ್ ಮತ್ತು ಸ್ಕೌಟ್ಸ್ ಗೈಡ್ಸ್ ಹಾಗು ರೋವರ್ಸ್ ರೆಂಜರ್ಸ್ ವಿಭಾಗದ ಮಕ್ಕಳು ಭಾಗವಹಿಸಿದ್ದು ಈ ಮೂರು ದಿನದ ರ್ಯಾಲಿಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಲಿದ್ದಾರೆ ಎಂದು ಜಿಲ್ಲಾ ಸಂಸ್ಥೆಯ ಆಯೋಜಕರನ್ನು ಅಭಿನಂದಿಸಿದರು.
S.N.Chennabasappa ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಿವಮೊಗ್ಗ ಜಿಲ್ಲಾ ಸಂಸ್ಥೆಯ ಅಧ್ಯಕ್ಷರಾದ ಶಕುಂತಲಾ ಚಂದ್ರಶೇಖರ್ ಅವರು ವಹಿಸಿ ಮಾತನಾಡುತ್ತಾ ಈ ಮೂರು ದಿನಗಳ ರ್ಯಾಲಿಯಲ್ಲಿ ಚಾರಣ ಸಾಹಸ ಕ್ರೀಡೆಗಳು ಮಕ್ಕಳಿಗೆ ಬೌದ್ಧಿಕ ಪರೀಕ್ಷೆ ಹಾಗೂ ವಿವಿಧ ರೀತಿಯ ಆಟಗಳು ಜೊತೆಗೆ ಮಾನವೀಯ ಮೌಲ್ಯಗಳನ್ನು ಕಳಿಸಿಕೊಡುವಂತಹ ಕಾರ್ಯಕ್ರಮವಾಗಿದೆ ಎಂದು ನುಡಿದರು.
ಈ ರಾಜ್ಯಮಟ್ಟದ ರ್ಯಾಲಿಯಲ್ಲಿ ವೇದಿಕೆಯಲ್ಲಿ. ಆಯುಕ್ತರಾದ ಎಸ್ ಜಿ ಆನಂದ್. ಕೇಂದ್ರ ಸ್ಥಾನಿಕ ಆಯುಕ್ತರಾದ ಜಿ ವಿಜಯಕುಮಾರ್. ಜಿಲ್ಲಾ ಕಾರ್ಯದರ್ಶಿ ಕೆ ವಿ ಚಂದ್ರಶೇಖರ್. ಆಯುಕ್ತರಾದ ಕೆ ರವಿ. ಸರಸ್ವತಿ ನಾಗರಾಜ್. ಶಿವಶಂಕರ್. ರಾಜೇಶ್ ಅವಲಕ್ಕಿ. ಮೀನಾಕ್ಷಮ್ಮ. ಗೀತಾ ಚಿಕ್ ಮಠ. ಜ್ಯೋತಿ. ಮಲ್ಲಿಕಾರ್ಜುನ್ ಖಾನೂರ್. ಲಕ್ಷ್ಮಿ ಕೆ ರವಿ. ವೈ ಆರ್ ವೀರೇಶಪ್ಪ. ಪವನ್ ಕುಮಾರ್. ಚುಡಮಣಿ ಈ ಪವಾರ್ ದೊರೆ. ಬಿಸಿ ವೇಣುಗೋಪಾಲ್ ಕಾತ್ಯಾಯಿನಿ. ಏನ್ ಆರ್ ಚಂದ್ರಶೇಖರ್ ರುದ್ರಪ್ಪ. ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ದಳ ನಾಯಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.
