Blood donation camp ಪ್ರಕೃತಿ ನಿಸ್ವಾರ್ಥದಿಂದ ತನ್ನ ಕಾರ್ಯ ಮಾಡುತ್ತದೆ. ಅದಕ್ಕೆ ಕೊಡುವುದು ಮಾತ್ರ ಗೊತ್ತು, ಅದನ್ನು ತಮ್ಮ ಪಂಚೇಂದ್ರಿಯದಿಂದ ಆಸ್ವಾದಿಸಿ ಎಂದು ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ, ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ, ಜೆ.ಎನ್.ಎನ್.ಸಿ.ಇ.ಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಬೂಮರೆಡ್ಡಿ ಮಾತನಾಡುತ್ತಿದ್ದರು.
ಪಂಚಭೂತದಿಂದ ಬಂದ ಈ ಶರೀರ ಇನ್ನೊಂದು ಬದುಕಿಗೆ ಜ್ಯೋತಿಯಾಯಿತು ಎನ್ನುವುದು ನಾವು ರಕ್ತದಾನ ಮಾಡಿದಾಗ ಮಾತ್ರ. ರಕ್ತದಾನದಿಂದ ಜೀವ ಉಳಿಸ ಬಹುದು. ಸಾವಿರಾರು ಜನ ರಸ್ತೆ ನಿಯಮ ಪಾಲಿಸದೆ ಅಪಘಾತ ಮಾಡಿಕೊಂಡು ರಸ್ತೆಗೆ ರಕ್ತ ಚಲ್ಲಿದರೆ ಏನು ಬಂತು? ಈ ಜನವರಿ ಯಿಂದ ಶಿವಮೊಗ್ಗ ಒಂದರಲ್ಲೆ ನೂರ ಐವತ್ತಕ್ಕಿಂತ ಹೆಚ್ಚ ಅಪಘಾತ ಸಂಭವಿಸಿವೆ. ,ಪ್ರಾಣಿ ಹಸಿದಾಗ ಬೇಟಿ ಆಡುತ್ತೆ, ಮಾನವ ಎಲ್ಲಾ ಬೇಕು ಎನ್ನುತ್ತಾನೆ. ನಮ್ಮ ಒಬ್ಬರ ರಕ್ತದಿಂದ ಏನಾಗುತ್ತೆ ಎನ್ನುವ ಮನೋಭಾವ ಬಿಡಿ. ಹನಿ ಹನಿ ಗೂಡಿದರೆ ಹಳ್ಳ. ನಾನು ರಕ್ತದಾನ ಶಿಬಿರ ದಾನ ಮಾಡುವ ಮೂಲಕ ಉದ್ಘಾಟಿಸುತ್ತೇನೆ ಎಂದರು.
Blood donation camp ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಾ.ಶಿವರಾಮಕೃಷ್ಣ ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಕನಿಷ್ಟ ವರ್ಷದಲ್ಲಿ ಎರಡು ಬಾರಿ ರಕ್ತದಾನ ಮಾಡಿ. ಹುಟ್ಡಿದ ಹಬ್ಬಕ್ಕೆ, ವ್ಯಾಲೆನ್ಸೆಡೇಗೆ, ನಂತರ ವಿವಾಹ ಮಹೋತ್ಸಕ್ಕೆ. ರಕ್ತದಾನ ಶಿಬಿರದಲ್ಲಿ ಏಕೆ ಕೊಡಬೇಕು, ರಕ್ತಬೇಕಾದಗ ಕೊಡಬಹುದಲ್ಲ ಎನ್ನುತ್ತಾರೆ. ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆಗೆ ಅಗತ್ಯ ರಕ್ತ ಬೇಕಾಗುತ್ತದೆ. ಆಗ ಪರೀಕ್ಷೆ ಮಾಡಿದ ಶುದ್ದರಕ್ತವನ್ನು ಮಾತ್ರ ಕೊಡಬೇಕು ತಕ್ಷಣಕ್ಕೆ ಶುದ್ದ ಎರಡು ಮೂರು ಪರಿಕ್ಷೆ ಮಾಡಿದ ರಕ್ತ ಒದಗಿಸುವುದು ಕಷ್ಟ. ಆದ್ದರಿಂದ ಶುದ್ದರಕ್ತ ಕೇಂದ್ರಗಳಲ್ಲಿ ಸಂಗ್ರಹಿಸಿ ಇಟ್ಟು ಕೊಂಡಿರುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾತನಾಡುತ್ತಾ ನಮ್ಮ ಕಾಲೇಜಿನಲ್ಲಿ ಒಟ್ಟು ನಾಲ್ಕು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಪ್ರತಿ ಸೆಮಿಸ್ಟರ್ ಗೆ ಒಂದು ಬಾರಿ ಎಲ್ಲರೂ ರಕ್ತದಾನ ಮಾಡಿದರೆ ವರ್ಷಕ್ಕೆ ನಮ್ಮ ಕಾಲೇಜಿನಿಂದ ಒಂಬತ್ತು ಸಾವಿರ ಯುನಿಟ್ ರಕ್ತದಾನ ಮಾಡಬಹುದು, ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ದೇಶದಲ್ಲೆ ಒಂದು ದಾಖಲೆ ಮಾಡಬಹುದು. ವಿದ್ಯಾರ್ಥಿಗಳು ಕಾಲೇಜು ಬಸ್ ಗಳನ್ನೇ ಉಪಯೋಗಿಸಿ. ನಾನು ರಕ್ತದಾನ ಮಾಡುತ್ತೆನೆ, ತಾವೆಲ್ಲರೂ ರಕ್ತದಾನ ಮಾಡಿ ಎಂದರು.
ವೇದಿಕೆಯಲ್ಲಿ ಕಾಂತೇಶ್ ಮೂರ್ತಿ, ಧರಣೇಂದ್ರದಿನಕರ್, ಅರುಣ್ ಕುಮಾರ್, ಛಾಯ, ಕುಮಾರ್ ಶಾಸ್ತ್ರಿ ಇದ್ದರು. ಭಾರತಿ ಪ್ರಾರ್ಥನೆ ಮಾಡಿ, ಧನ್ಯ ಸ್ವಾಗತಿಸಿದರು, ಗಿರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಚೈತ್ರ ನಿರೂಪಿಸಿ ಪಲ್ಲವಿ ವಂದಿಸಿದರು. ಬಸವರಾಜ್, ವಾಗೇಶ್, ಜಿ.ವಿಜಯಕುಮಾರ್, ಬಾಲಕೃಷ್ಣ,
ಸುರೇಶ್, ಭಾಪಟ್ ಇತರು ಇದ್ದರು.
Blood donation camp ನಮ್ಮ ಒಬ್ಬರ ರಕ್ತದಿಂದ ಏನಾಗುತ್ತೆ? ಎಂಬ ಭಾವನೆ ಬಿಡಿ- ಅನಿಲ್ ಭೂಮರೆಡ್ಡಿ
Date:
