Global High School ಸೋಮಿನಕೊಪ್ಪ ರಸ್ತೆಯ ಕನಕನಗರ ಮುಖ್ಯ ರಸ್ತೆಯ ಲ್ಲಿರುವ ಗ್ಲೋಬಲ್ ಇಂಗ್ಲೀಷ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಮಾಂಟೆಸರಿ ಫ್ರೀ ಸ್ಕೂಲ್‌ಗೆ ಈ ಭಾರಿಯೂ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ. ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸಚಿನ್ ಎಂ.ಎಸ್., ಸಂಗೀತ ವಿ., ಶಿವಾನಿ ವಿ. ಮತ್ತು ಸಲ್ಮಾನ್ ಖಾನ್ ಅತೀ ಹೆಚ್ಚು ಅಂಕ ಪಡೆದಿದ್ದು, ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
ಪ್ರತೀ ಭಾರಿ ನೂರರಷ್ಟು ಫಲಿತಾಂಸ ಈ ಶಾಲೆಗೆ ಬರುತ್ತಿರುವುದಕ್ಕೆ ಆಡಳಿತ ಮಂಡಳಿಯ ಶ್ರಮ ಮತ್ತು ಶಿಕ್ಷಕ ವೃಂದದವರ ಪರೀಶ್ರಮ ಕಾರಣವಾಗಿದೆ.
Global High School ಶಾಲೆಯಲ್ಲಿ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ವಾತಾವರಣವಿದೆ. ಓದಿನ ಜೊತೆಗೆ ಇತರೆ ಚಟುವಟಿಕೆಗಳಿಗೂ ಇಲ್ಲಿ ಹೆಚ್ಚು ಒತ್ತು ನೀಡಲಾಗುವುದು.
ಅದರಲ್ಲೂ ಇಲ್ಲಿ ಹೆಚ್ಚಾಗಿ ಆಟೋಟ ಸ್ಪರ್ಧೆಗಳು, ಚಿತ್ರಕಲೆ, ಸ್ಪೆಷಲ್ ಕ್ಲಾಸ್ ಹಾಗೂ ಮಕ್ಕಳಿಗೆ ಓದಲು ಅನುಕೂಲವಾಗುವಂತಹ ಎಲ್ಲಾ ವಾತಾವರಣ ಇಲ್ಲಿದೆ ಎಂದು ಕಾರ್ಯದರ್ಶಿ ಬಾಲಪ್ಪ ತಿಳಿಸಿದ್ದಾರೆ. ಈಗಾಗಲೆ ಪ್ರವೇಶಾತಿ ಪ್ರಾರಂಭ ವಾಗಿದ್ದುö, ಯಾವುದೇ ಶೂಲ್ಕ ಇರುವುದಿಲ್ಲ ಎಂದು ತಿಳಿಸಿದ್ದಾರೆ.
