Wednesday, December 17, 2025
Wednesday, December 17, 2025

District Consumer Disputes Redressal Commission ಕಾರು ಸೂಕ್ತ ರಿಪೇರಿಯಲ್ಲಿ ಸೇವಾ ನ್ಯೂನತೆ. ಗ್ರಾಹಕರ ಪರ ತೀರ್ಪು ನೀಡಿದ ಜಿಲ್ಲಾ ಆಯೋಗ

Date:

District Consumer Disputes Redressal Commission ಶ್ರೀ ಗುರುವ ಭೋವಿ ಇವರು ಎದುರುದಾರರಾದ ದಿ ಮ್ಯಾನೇಜರ್ ಕಾವೇರಿ ಮೋಟರ‍್ಸ್ ಪ್ರೈ.ಲಿ, ಶಿವಮೊಗ್ಗ ಹಾಗೂ ಸುನೀಲ್ ಎ ವಿ, ಸರ್ವೀಸ್ ಅಡ್ವೆಂಸರ್, ಕಾವೇರಿ ಮೋಟರ‍್ಸ್ ಪ್ರೈ.ಲಿ, ಶಿವಮೊಗ್ಗ ಇವರುಗಳ ವಿರುದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ದೂರನ್ನು ಆಲಿಸಿದ ಆಯೋಗವು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.

ದೂರುದಾರರು 2015 ನೇ ಇಸವಿಯಲ್ಲಿ ತಾವು ಫೋರ್ಡ್ ಕಾರನ್ನು ಖರೀದಿಸಿದ್ದು, ಕಾರನ್ನು ಯಾವುದೇ ರಿಪೇರಿ ಇಲ್ಲದೇ ಓಡಿಸುತ್ತಿದ್ದು, ದಿ: 11-03-2024 ರಂದು ಕಾರಿನ ರಿಪೇರಿಗಾಗಿ ಎದುರುದಾರರ ಶೋ ರೂಮ್‌ನಲ್ಲಿ ಬಿಟ್ಟಿರುತ್ತಾರೆ. ಎದುರುದಾರರು ರೂ.1,67,532/- ಗಳ ಅಂದಾಜು ರಿಪೇರಿ ವೆಚ್ಚವನ್ನು ನೀಡಿದ್ದು ತದನಂತರ ಸರ್ವಿಸ್ ಚಾರ್ಜಸ್ ರೂ.1,17,935/- ಆಗುತ್ತದೆ ಎಂದು ಹೇಳಿರುತ್ತಾರೆ.

ಆದರೆ ಹಲವು ಬಾರಿ ವಿನಂತಿಸಿದರೂ ರಿಪೇರಿ ಮಾಡಿರುವುದಿಲ್ಲ.
ನಂತರ ಎದುರುದಾರರು ಕಾರ್ ರಿಪೇರಿಯಾಗಿದ್ದಾಗಿ ತಿಳಿಸಿದ್ದರ ಮೇರೆಗೆ ದಿ: 24-04-2024 ರಂದು ಕಾರನ್ನು ತೆಗೆದುಕೊಳ್ಳಲು ಹೋದಾಗ ಟೆಸ್ಟ್ ಡ್ರೈವ್ ಮಾಡಿ ನಂತರ ತೆಗೆದುಕೊಳ್ಳಲು ತಿಳಿಸಿದ್ದು, ಟೆಸ್ಟ್ ಡ್ರೆöÊವ್ ಮಾಡುವ ಸಮಯದಲ್ಲಿ ಕಾರಿನ ಮುಂಭಾಗದಲ್ಲಿ ಹೊಗೆ ಬರಲು ಶುರುವಾಗಿ, ಇಂಜಿನ್‌ಗೆ ಬೆಂಕಿ ತಗುಲಿರುತ್ತದೆ. ನಂತರ ಹಲವಾರು ಬಾರಿ ಕಾರನ್ನು ರಿಪೇರಿ ಮಾಡಿ ಕೊಡಲು ವಿನಂತಿಸಿದರೂ ಎದುರುದಾರರು ಕಾರನ್ನು ರಿಪೇರಿ ಮಾಡಿ ಕೊಡಲು ರೂ.2,00,000/- ಗಳಾಗುತ್ತದೆಂದು ತಿಳಿಸುತ್ತಾರೆ. ಆದರೆ ಕಾರನ್ನು ರಿಪೇರಿ ಮಾಡಿಕೊಟ್ಟಿರುವುದಿಲ್ಲ.

ಆದ ಕಾರಣ ದೂರುದಾರರು ಎದುರುದಾರರಿಗೆ ಲೀಗಲ್ ನೋಟಿಸ್ ಕಳುಹಿಸಿ ಕಾರನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡಿಕೊಡಲು ಕೋರಿದ್ದರು. ಎದುರುದಾರರು ಅಸಮರ್ಥನೀಯವಾದ ಉತ್ತರವನ್ನು ನೀಡಿದ್ದು, ಕಾರನ್ನು ಸಹ ರಿಪೇರಿ ಮಾಡಿಕೊಟ್ಟಿರುವುದಿಲ್ಲವೆಂದು ಆಯೋಗದ ಮೂದೆ ದೂರನ್ನು ಸಲ್ಲಿಸಿರುತ್ತಾರೆ.

District Consumer Disputes Redressal Commission ದೂರುದಾರರು ಮತ್ತು ಎದುರುದಾರರ ಸಾಕ್ಷಿ ಪ್ರಮಾಣ ಪತ್ರ, ದಾಖಲೆಗಳನ್ನು ಪರಿಶೀಲಿಸಿ, ಉಭಯ ಪಕ್ಷಗಾರರ ವಾದ-ವಿವಾದಗಳನ್ನು ಆಲಿಸಿ ಎದುರುದಾರರು ದೂರುದಾರರ ವಾಹನವನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡದೇ ಇರುವುದು ಘಟನೆಗೆ ಕಾರಣವೆಂದು ಆಯೋಗ ತೀರ್ಮಾನಿಸಿ, ದೂರುದಾರರು ಹಿಂದಿನ ರಿಪೇರಿ ಮೊತ್ತ ರೂ.1,17,000/- ಗಳನ್ನು ಈ ಆದೇಶವಾದ 15 ದಿನಗಳ ಒಳಗೆ ಎದುರುದಾರರಿಗೆ ನೀಡಲು ಮತ್ತು ಎದುರುದಾರರು ದೂರುದಾರರಿಂದ ಹಣ ಪಡೆದ 45 ದಿನಗಳ ಒಳಗೆ ದೂರುದಾರರ ವಾಹನವನ್ನು ಸರಿಯಾದ ರೀತಿಯಲ್ಲಿ ತೃಪ್ತಿಕರವಾಗಿ ರಿಪೇರಿ ಮಾಡಿಕೊಡಬೇಕಾಗಿ, ತಪ್ಪಿದಲ್ಲಿ ಎದುರುದಾರರು ದೂರುದಾರರಿಗೆ ಪರಿಹಾರವಾಗಿ ಮಾಸಿಕ ರೂ.10,000/- ಗಳನ್ನು ಕಾರನ್ನು ರಿಪೇರಿ ಮಾಡಿ ವಾಪಸ್ ನೀಡುವವರೆಗೂ ಪಾವತಿಸಲು ಹಾಗೂ ರೂ.10,000/- ಗಳನ್ನು ಮಾನಸಿಕ ಹಾನಿಗೆ ಮತ್ತು ರೂ.10,000/- ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ಎಂದು ದೂರುದಾರರಿಗೆ ನೀಡಬೇಕೆಂದು ನಿರ್ದೇಶಿಸಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಪ್ಪ ಮತ್ತು ಸದಸ್ಯರಾದ ಬಿ.ಡಿಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಏ.25 ರಂದು ಆದೇಶಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 18. ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ,...

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...