Saturday, December 6, 2025
Saturday, December 6, 2025

Klive Special Article “ಆಪರೇಷನ್ ಸಿಂಧೂರ್” ಭರ್ಜರಿ ಆರಂಭ

Date:

Klive Special Article ಯುದ್ಧವೆಂದರೆ ‌ನಮಗೆ ತಿಳಿದಂತೆ ಘೋಷಣೆಮಾಡಿ ಆಕ್ರಮಣ ಮಾಡುವುದು. ಇದು ತುರ್ತು ಸ್ಥಿತಿಯಲ್ಲಿ ಮಾತ್ರ. ಆದರೆ ಯೋಜಿತವಾಗಿ ದಾಳಿ ಮಾಡುವ ಶತ್ರುದೇಶದ ಮೋಸದ ದಾಳಿಗೆ ಪ್ರತ್ಯುತ್ತರ ನೀಡುವಾಗ ಘೋಷಣೆಯೇ ಬೇಕಿಲ್ಲ. ಘೋಷಣೆಗಿಂತ ‌ಬುದ್ಧಿವಂತ ಕ್ರಮ ಎಂದರೆ ಶತ್ರುವಿನ ಶಕ್ತಿಕೇಂದ್ರಗಳನ್ನ ಧ್ವಂಸಮಾಡುವುದು.
ಈ ಕ್ರಮದಲ್ಲಿ ನಾಗರಿಕರಿಗೆ ಅಪಾಯ‌ ಕಡಿಮ.

ಈಗ ಪಾಪಿ ಪಾಕಿಗಳಿಗೆ ಶಾಸ್ತಿಮಾಡಲು ನಮ್ಮ ದೇಶ ವಿವೇಕದಿಂದ ಸಂಯಮದಿಂದ ದಾಳಿ ಆರಂಭಿಸಿದೆ.
ಮೊದಲಿಗೆ ಸಿಂಧುನದಿ‌ ಒಪ್ಪಂದ ಅಮಾನತು. ಚಿನಾಬ್ ನದಿಯ ನೀರಿನ‌ ಹರಿವು‌ ಸ್ಥಂಭನ. ಈಗ
ಯುದ್ಧ ಶುರುವಾಗೇ ಬಿಟ್ಟಿತು ಅಂದುಕೊಳ್ಳುತ್ತಿದ್ದಂತೆಯೇ ಒಂಭತ್ತು ಉಗ್ರರ ನೆಲೆಗಳ ಧ್ವಂಸ. ಅದೇ “ಆಪರೇಷನ್ ಸಿಂಧೂರ” ದ ಮಹತ್ತು.
ಮಹಿಳೆಯರ ಸಿಂಧೂರ ಅಳಿಸಲು ಬೆಂಬಲಿಸಿದವರ
ಬುಡಸಮೇತ ಮಟ್ಟಹಾಕುವ ಕಾರ್ಯಕ್ಕೆ ಈ ಹೆಸರು‌‌ ಪ್ರಧಾನಿ ಮೋದಿಯವರೇ ಇಟ್ಟರು ಎಂಬುದು ವಿಶೇಷ.

ಈ ಬೆಳಿಗ್ಗೆ 1.04 ಘಂಟೆಯಿಂ 1-30 ವರೆಗೆ ತೀವ್ರ ವೈಮಾನಿಕ ದಾಳಿಯಿಡಲಾಗಿದೆ.
ಉಗ್ರರ ಅಡಗುದಾಣ, ತರಬೇತಿ ಸ್ಥಳಗಳನ್ನೇ
ಗುರಿಯಾಗಿಸಿದ ಭಾರತದ ಕ್ರಮದ ಜಾಗತಿಕವಾಗಿ ಬೆಂಬಲ ಕೂಡ ಸಿಕ್ಕಿದೆ.
ಚೀನಾ ಮಾತ್ರ ಅಸ್ಪಷ್ಟವಾಗಿ ಹೇಳಿಕೆ ನೀಡಿದೆ.
ಉಗ್ರರ ಮೇಲಿನ ದಾಳಿಯ ನೈಜ ಸೇನಾವರದಿಯನ್ನ ಸೂಕ್ತವಾಗಿ ರಷ್ಯಾ ಮತ್ತು ಅಮೆರಿಕಾಗೆ ರವಾನಿಸಲಾಗಿದೆ.
ಬಿಂಬೆರ್, ಸರ್ಜಾಲ್, ಕೋಟ್ಲಿ.ಮುಜಾಫರ್ ಬಾದ್.ಮುರಿಡಿಕೆ ಸಿಯಾಲ್ ಕೋಟ್ ಮುಂತಾದ ಉಗ್ರರ ನೆಲೆಗಳನ್ನ ಬೂದಿ‌ಮಾಡಲಾಗಿದೆ
ಇದರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಐದು‌ ತಾಣಗಳಿವೆ. ಪಾಕ್ ಪ್ರದೇಶದ ನಾಲ್ಕು ತಣಗಳು ಸೇರಿವೆ.
ಲೋಕಸಭೆಯ
Klive Special Article ವಿಪಕ್ಷನಾಯಕ ರಾಹುಲ್ ಗಾಂಧಿ ಅವರು ನಮ್ಮ ಭಾರತೀಯ ಸೇನೆ ಬಗ್ಗೆ ಹೆಮ್ಮೆ ಮತ್ತು ಗೌರವ‌ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ
ಸಿದ್ಧರಾಮಯ್ಯ ಅವರು ವಿಶೇಷ ಪತ್ರಿಕಾಗೋಷ್ಠಿಯಲ್ಲಿ
ನಮ್ಮ ಸೇನೆಗೊಂದು‌ ಸಲಾಮ್ ಎಂದಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...