Wednesday, February 4, 2026
Wednesday, February 4, 2026

Chamber of Commerce Shivamogga ಯೋಗ ತರಬೇತಿಯಲ್ಲಿ ಗುರು ನಾಗರತ್ನಮ್ಮ ಚಂದ್ರಶೇಖರ್ ಕೊಡುಗೆ ಅಪಾರ- ಜಿ.ವಿಜಯ ಕುಮಾರ್

Date:


Chamber of Commerce Shivamogga ಶಿಕ್ಷಕರಾಗಿ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಯಾವುದೇ ಕಪ್ಪು ಚುಕ್ಕೆಗಳು ಇಲ್ಲ ಹಾಗೆ ಸಾರ್ಥಕತೆಯನ್ನು ಕಂಡು ಜೊತೆಗೆ ಪ್ರವೃತ್ತಿಯಲ್ಲಿ ಯೋಗ ಶಿಕ್ಷಕರಾಗಿ ಶಿವಗಂಗಾ ಯೋಗ ಕೇಂದ್ರದ ಯೋಗಾಚಾರ್ಯ ಸಿವಿ ರುದ್ರಾರಾಧ್ಯರ ಮಾರ್ಗದರ್ಶನದಲ್ಲಿ ಉಚಿತವಾಗಿ ಯೋಗವನ್ನು ಹೇಳಿಕೊಡುವುದರ ಮುಖಾಂತರ ಹಾಗೂ ಹಲವಾರು ಮಠ ಮಂದಿರಗಳಲ್ಲಿ ಉಚಿತ ಭಕ್ತಿ ಸಂಗೀತ ಸೇವೆಯನ್ನು ಸಲ್ಲಿಸುತ್ತಾ ನಾಗರತ್ನಮ್ಮ ಚಂದ್ರಶೇಖರ್ ಅವರ ಸೇವೆ ಕೊಡುಗೆ ಅಪಾರ ಹಾಗೂ ಶಿವಗಂಗಾ ಯೋಗ ಕೇಂದ್ರದ ನೂತನ ಕಾರ್ಯದರ್ಶಿಯಾಗಿ ಜವಾಬ್ದಾರಿ ತೆಗೆದುಕೊಂಡು ಇರುವುದು ತುಂಬಾ ಸಂತೋಷ ತಂದಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಅವರು ಅಭಿಮತ ವ್ಯಕ್ತಪಡಿಸಿದರು.

ಶಿವಮೊಗ್ಗ ಕೃಷಿ ನಗರದ ರೋಟರಿ ರಿವರ್ ಸೈಡ್ ಸೈಡ್ ಭವನದಲ್ಲಿ ಇಬ್ಬರೂ ದಂಪತಿಗಳಿಗೆ ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ನಾಗರತ್ನಮ್ಮ ಚಂದ್ರಶೇಖರ್ ರವರು ಗೋಣಿಬೀಡು ಶ್ರೀ ಮಠದಲ್ಲಿ ಎಂಟು ವರ್ಷಗಳಿಂದ ಉಚಿತವಾಗಿ ಭಕ್ತಿ ಸಂಗೀತ ಸೇವೆಯನ್ನು ನಡೆಸಿಕೊಡುತ್ತಾ ಬಂದಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ ಅಲ್ಲದೆ ರಾಜ್ಯಾದ್ಯಂತ ವಿವಿಧ ಮಠ ಮಂದಿರಗಳಲ್ಲಿ ತಮ್ಮ ಸಂಗೀತ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ ಹಾಗೆ ಆಕಾಶವಾಣಿಯ ಕಲಾವಿದರಾದ ಇವರು ಮೇರಿ ಇಮ್ಯಾಕುಲೇಟ್ ಶಾಲೆಯ ಶಿಕ್ಷಕರಾಗಿ ಈಗ ನಿವೃತ್ತಿಯಾಗಿ ತಮ್ಮ ಮುಂದಿನ ಪ್ರವೃತ್ತಿ ಜೀವನಕ್ಕೆ ಕಾಲಿರಿದ್ದಾರೆ ಬರುವ ದಿನಗಳಲ್ಲಿ ಸಮಾಜಕ್ಕೆ ಇವರ ಸೇವೆ ಇನ್ನು ಹೆಚ್ಚಿನ ಮಟ್ಟದಲ್ಲಿ ಸಿಗಲಿ ಎಂದು ಹಾರೈಸಿದರು.

Chamber of Commerce Shivamogga ಇದೇ ಸಂದರ್ಭದಲ್ಲಿ ಚಿದಾನಂದ ಹಾಗೂ ಕುಸುಮಾ ದಂಪತಿಗಳು ಮಾತನಾಡುತ್ತ ಪ್ರತಿಯೊಂದು ಬಡಾವಣೆಗಳಲ್ಲಿ ಯೋಗ ಕೇಂದ್ರಗಳು ಇರುವುದರಿಂದ ಆ ಬಡಾವಣೆಯ ನಿವಾಸಿಗಳ ಆರೋಗ್ಯ ಸಾಕಷ್ಟು ಸುಧಾರಿಸಿದ. ಜೊತೆಗೆ ಒಳ್ಳೆಯ ಸಂಬಂಧ ಹಾಗೂ ಸಕಾರಾತ್ಮಕ ಭಾವನೆಗಳು ಮೂಡುತ್ತವೆ ಯೋಗ ಪ್ರಾಣಾಯಾಮ ಧ್ಯಾನ ನೀವು ನಮ್ಮ ಕನ್ನಡ ಆರೋಗ್ಯದ ಗುಟ್ಟು ಎಂದು ಇಬ್ಬರೂ ದಂಪತಿಗಳ ಸೇವೆಯನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಇನ್ನರ್ ವಿಲ್ ಶಿವಮೊಗ್ಗ ಪೂರ್ವ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್, ಸುಜಾತ ಅನಿಲ್ ಜ್ಯೋತಿ ಟಿಕಾರೆ, ಶೋಭಾ ಶಿವಗಂಗಾ ಯೋಗ ಕೇಂದ್ರದ ಪೋಷಕರಾದ ಶ್ರೀ ಪರಮೇಶ್ , ಮನು ಕುಮಾರ್ , ಮನು ಕವಿತಾ, ಸೌಮ್ಯ ಪರಮೇಶ್. ಕೃಷ್ಣಮೂರ್ತಿ. ಅರುಣ ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...