Digital library ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಂತ ಅವಶ್ಯಕ ಎಂದು ಸೂಗುರು ಗ್ರಾಮ ಪಂಚಾಯಿತಿಯ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವೀರೇಶ್ ಕ್ಯಾತನಕೊಪ್ಪ ಹೇಳಿದರು.
ಅವರು ಸೂಗುರು ಗ್ರಾಮ ಪಂಚಾಯತಿಯ ಡಿಜಿಟಲ್ ಗ್ರಂಥಾಲಯ ಮಾಹಿತಿ ಅರಿವು ಕೆಂದ್ರದಲ್ಲಿ ಆಯೋಜಿಸಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಾತನಾಡುತ್ತಾ, ಬೇಸಿಗೆ ಶಿಬಿರಗಳಲ್ಲಿ ಗ್ರಾಮೀಣ ಮಕ್ಕಳು ಭಾಗವಹಿಸುವುದರಿಂದ ಕ್ರಿಯಾಶೀಲ ಹಾಗೂ ಸೃಜನಶೀಲ ವ್ಯಕ್ತಿತ್ವ ವೃದ್ಧಿಸುತ್ತದೆ ಎಂದರು.
ಹೊಸ ಹೊಸ ವಿಷಯಗಳನ್ನು ಮಕ್ಕಳು ಕಲಿಯುವುದರ ಜತೆಯಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು. ಗುರು ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಭಾಗ್ಯಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಹೊಸ ಹೊಸ ಚಟುವಟಿಕೆಗಳನ್ನು ಕಲಿಯಲು ಸೃಜನಶೀಲತೆಯನ್ನು ಮತ್ತು ಕ್ರಿಯಾತ್ಮಕ ಆಲೋಚನೆಗಳನ್ನ ಬೆಳೆಸಿಕೊಳ್ಳಲು ಇಂತಹ ಬೇಸಿಗೆ ಶಿಬಿರಗಳು ಫಲಕಾರಿಯಾಗುತ್ತವೆ ಎಂದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಜಿ ಮಲ್ಲಿಕಾರ್ಜುನ್ ಮಾತನಾಡುತ್ತಾ, ರಜೆ ವೇಳೆ ಮಕ್ಕಳು ಕೇವಲ ಮೊಬೈಲ್ ಮತ್ತು ಇನ್ನಿತರ ಯಾಂತ್ರಿಕ ಯುಗಕ್ಕೆ ಮಾರು ಹೋಗದೆ, ಇಂತಹ ಬೇಸಿಗೆ ಶಿಬಿರಗಳಿಂದ ಹೆಚ್ಚು ಹೆಚ್ಚು ಕಲಿಯಲು ಅವರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮಧು, ಮಾಜಿ ಅಧ್ಯಕ್ಷ ಕೆ ಪಿ ಲೋಹಿತ್, ಓಂಕಾರಪ್ಪ ಎಸ್ ಜಿ, ಮಲ್ಲಿಕಾರ್ಜುನ್, ಸದಸ್ಯರಾದ ರೋಹಿಣಿ, ಪ್ರತಿಭಾ ರಂಗನಾಥ್, ನೇತ್ರಾವತಿ, ಪಂಚಾಯತಿಯ ಪಿಡಿಒ ವಿಜಯಮ್ಮ, ರಮೇಶ್, ಸಿದ್ದೇಶ್, ರಾಘವೇಂದ್ರ, ಕಾರ್ಯದರ್ಶಿ ಪರಶುರಾಮ್, ಅಶ್ವಿನಿ, ಗ್ರಂಥಾಲಯ ಮೇಲ್ವಿಚರಕಜಯಪ್ಪ ಚೇತನ್ ಸೇರಿದಂತೆ ಮತ್ತಿತರರಿದ್ದರು.
Digital library ಹೊಸ ವಿಷಯ ಕಲಿಕೆ ಸಂಗಡ ಮಕ್ಕಳು ದೈಹಿಕ & ಮಾನಸಿಕ ದೃಢತೆ ಸಾಧಿಸಬೇಕು- ವೀರೇಶ್ ಕ್ಯಾತನಕೊಪ್ಪ
Date: