ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನ ಬೇಕಾಬಿಟ್ಟಿ ಕೊಲೆಮಾಡಿದ ಘಟನೆಯು ಪ್ರಪಂಚಾದ್ಯಂತ ಖಂಡಿಸಲ್ಪಟ್ಟಿದೆ.
ಟಿ.ಆರ್.ಎಫ್. ನ ಸೈಫುಲ್ಲಾ ಖಾಲೀದ್ ನೀಡಿರುವ ಹೇಳಿಕೆಯಂತೂ ಹಾಸ್ಯಸ್ಪದವಾಗಿದೆ. 2026 ರಲ್ಲಿ ಕಾಶ್ಮೀರ ಕ್ಜೆ ಸ್ವಾತಂತ್ರ್ಯ ಕೊಡಿಸುತ್ತಾನಂತೆ
ಈಗಾಗಲೇ ಗುರುತಿಸಿದ ಎರಡು
ಉಗ್ರರ ಮನೆಗಳನ್ನ ಧ್ವಂಸಮಾಡಲಾಗಿದೆ.
ಕೇಂದ್ರ ಸರ್ಕಾರವು ಪಾಕಿಸ್ತಾನದ ವಿರುದ್ಧ
ಪ್ರಬಲ ಪ್ರತಿರೋಧ ಮತ್ತು ಸಿಡಿಲಿನಂತಹ
ಕ್ರಮಗಳನ್ನ ಕೈಗೊಂಡಿದೆ.
ದೆಲಿಯಲ್ಲಿನ ವರ್ತಕರು ಇಡೀ ಬಜಾರನ್ನ ಬಂದ್ ಮಾಡಿ ” ಹಮ್ ಮೋದೀಜಿ ಕೆ ಸಾಥ್ ಹೈ” ಎಂಬ ಘೋಷಣೆ ಕೂಗಿದ್ದಾರೆ.
ಸರ್ವಪಕ್ಷಗಳ ಸಭೆಯಲ್ಲೂ ಸಹ ಮೋದಿ ಅವರಿಗೆ ಎಲ್ಲ ರೀತಿಯ ಸಹಕಾರವನ್ನ ವ್ಯಕ್ತಪಡಿಸಲಾಗಿದೆ.
ಪಹಲ್ಗಾಮ್ ನಲ್ಲಿನ ಪರಿಸ್ಥಿತಿ ಛಿದ್ರಛಿದ್ರವಾಗಿದೆ. ಅಲ್ಲಿನ ಸಾಮಾಜಿಕ ಬದುಕೇ ಅಸ್ತವ್ಯಸ್ತ.
ಪ್ತವಾಸಿಗರನ್ನ ನೆಚ್ಚಿಕೊಂಡು ಬಾಳ್ವೆ ಮಾಡುತ್ತಿದ್ದ ಬಾಡಿಗೆ ವಾಹನಗಳ ಚಾಲಕರೀಗ ದುಡಿಮೆ ನಿಂತು ಕಂಗಾಲಾಗಿದ್ದಾರೆ.
ಸುಂದರ ಜಲವಿಹಾರದ ‘ದಾಲ್ ಲೇಕ್ ‘ ಬಿಕೋ ಎನ್ನುತ್ತಿದೆ.
ಅಲಂಕೃತ ದೋಣಿಗಳು ಬರಸಿಡಿಲಿಗ ಸಿಕ್ಕಂತೆ
ನಿಶ್ಚಲವಾಗಿವೆ.
ದಾಲ್ ಸರೋವರದ ನೀರು ,ಅಲೆಗಳೇಳದೆ ಸ್ಥಬ್ಧ.
ನಯನ ಮನೋಹರ ವಾಗಿದ್ದ ಭೂದೃಶ್ಯಕ್ಕೀಗ ಪ್ರೇತ ಕಳೆ.
ಪಹಲ್ಗಾಮ್ ಬಳಿಯ ಆಸ್ಪತ್ರೆ ಸುಸಜ್ಜಿತವಾಗಿದ್ದಲ್ಲಿ ಕನಿಷ್ಢ ಐದು ಮಂದಿಯ ಪ್ರಾಣವುಳಿಯುತ್ತಿತ್ತು.
ಆಸ್ಪತ್ರೆ ಹದಿನೈದು ವರ್ಷಗಳಿಂದ ಸರಿಯಾಗಿ ನಡೆಯುತ್ತಿಲ್ಲ. ನಾವು ರಕ್ತವನ್ನಾದರೂ ನೀಡಿ ಜನರ ಪ್ರಾಣ ಉಳಿಸಲು ಸಿದ್ಧರಿದ್ದೆವು ಎಂದು ಅಲ್ಲಿನ ಸ್ಥಳೀಯರು ಘಟಿಸಿಹೋದ ಶ್ಮಶಾನ ಸದೃಶ ಸನ್ನಿವೇಶದ ಬಗ್ಗೆ ಮರುಕಪಡುತ್ತಾರೆ.
Klive Special Editorial ಒಂದು ಸೂಕ್ಷ್ಮ ವಿಚಾರವನ್ನ ಇಲ್ಲಿ ಗಮನಿಸಬಹುದು.
ಜಮ್ಮು,ಕಾಶ್ಮೀರದ ಜನತೆ ಹೊಸದೊಂದು ರಾಜಕೀಯ ವ್ಯವಸ್ಥೆಗೆ ಹೊಂದಿಕೊಂಡಿದ್ದರು.
ಕಳೆದ ದಿನಗಳಲ್ಲಿ ಅನುಭವಿಸಿದ ಕಷ್ಟಕಾರ್ಪಣ್ಯಗಳು ಮರೆಯಾದವು ಎಂದು ನಿಟ್ಟುಸಿರು ಚೆಲ್ಲಿದ್ದರು. ದೈನಿಕ ಜೀವನ ಪ್ರಫುಲ್ಲವಾಗುತ್ತಿತ್ತು…
ಅನ್ನುವಷ್ಟರಲ್ಲೇ ಈ
ಭೀಕರ ಪ್ರಕರಣ ಜರುಗಿದೆ.
ಆಂತರಿಕ ಶತ್ರುನಾಶವಾಗಿದ್ದ. ನೆರೆಹೊರೆ ಸೌಹಾರ್ದ
ಬೆಸೆಯಲಾರಂಭಿಸಿತ್ತು.
ಆದರೆ ಹೊರಗಿನ ಕರಾಳ ಕೈ ಈ ವಾತಾವರಣವನ್ನ. ಕದಕಿ, ಮಲಿನಮಾಡಿದಂತಾಗಿದೆ.
ಸ್ಥಳೀಯರಾರೂ ಸರ್ಕಾರದ ವ್ಯವಸ್ಥೆಯ ಬಗ್ಗೆ ಅಸಮಾಧಾನ ತೋರಿಸಿಲ್ಲ. ಆದರೆ ಟೀಕೆ ಟಿಪ್ಪಣಿಗಳು ಬಂದಿವ. ಪ್ರಜಾಪ್ರಭುತ್ವದಲ್ಲಿ ಇದು ಸ್ವಾಭಾವಿಕ.
ಪಾಕ್ ತನ್ನ ವಾಯುಪ್ರದೇಶದಲ್ಲಿ ಭಾರತೀಯ ವಿಮಾನಗಳ ಸಂಚಾರಕ್ಕೆ ನಿಷೇಧ ಹೇರಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಸಣ್ಣಪುಟ್ಟ ಗುಂಡು ಹಾರಿಸುವ ಕ್ಯಾತೆ ತೆಗೆದಿದಿದೆ.
ಆದರೆ ಕುಸಿದ ಆರ್ಥಿಕತೆಯ ನಡುವೆಯೂ ಅದರ ಒಣಜಂಭ ಮಾತ್ರ ನಿಂತಿಲ್ಲವಲ್ಲ.
ಮದ್ದುಗುಂಡುಗಳ ಯುದ್ದದ ಬದಲಿಗೆ ಭಾರತ ಜಲಸ್ಥಂಭನ
( ಸಿಂಧು ನದಿ ಒಪ್ಪಂದ ತಡೆ) , ಪಾಕ್ ನಾಗರಿಕರ ವೀಸಾ ರದ್ದತಿ, ಗಡಿ ಮುಚ್ಚುವಿಕೆ ಮುಂತಾಗಿ ಪಾಕಿಸ್ತಾನದ ಮೂಗು ಹಿಡಿಯುವ ಶಾಸ್ತಿ ಮಾಡಿದೆ.
ಮೂಗು ಮುಚ್ಚಿದರೆ ಉಸಿರಿಗೆ ಬಾಯಿ ತೆರೆಯಲೇ ಬೇಕಲ್ಲ.!!