Saturday, December 6, 2025
Saturday, December 6, 2025

S.N.Chennabasappa ಇಡೀ ಶಿವಮೊಗ್ಗವೇ ಒಟ್ಟಾಗಿ ಮೃತ ಮಂಜುನಾಥ್ ರಾವ್ ಗೆ ಶ್ರದ್ಧಾಂಜಲಿ ಸಲ್ಲಿಸಿದೆ- ಶಾಸಕ ಚೆನ್ನಿ

Date:

S.N.Chennabasappa ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಸಂಭವಿಸಿದ ಹೇಡಿ ಭಯೋತ್ಪಾದಕರ ಭಯಾನಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಶಿವಮೊಗ್ಗದ ಪ್ರವಾಸಿಗ ಶ್ರೀ ಮಂಜುನಾಥ್ ರಾವ್ ಅವರ ಪಾರ್ಥಿವ ಶರೀರವು ಇಂದು ಶಿವಮೊಗ್ಗ ನಗರಕ್ಕೆ ಆಗಮನದ ಸಂದರ್ಭದಲ್ಲಿ ಸಕಲ ಗೌರವಗಳೊಂದಿಗೆ ನಮನ ಸಲ್ಲಿಸಲಾಯಿತು.

ಸಾಮಾನ್ಯ ನಾಗರಿಕನಾಗಿ ಪ್ರವಾಸಕ್ಕೆ ಹೊರಟಿದ್ದ ಮಂಜುನಾಥ್ ರಾವ್ ಅವರು, ಭಯೋತ್ಪಾದಕ ಮುಸಲ್ಮಾನರ ಇಂತಹ ಹೇಡಿತನದ ಕೃತ್ಯಕ್ಕೆ ಹತರಾಗಿರುವುದು ಇಡೀ ಶಿವಮೊಗ್ಗದಲ್ಲಿ ಆಘಾತದ ಛಾಯೆ ಹರಡಿದ್ದು, ಇಡೀ ಶಿವಮೊಗ್ಗ ಒಗ್ಗಟ್ಟಾಗಿ ದಾಳಿಯಲ್ಲಿ ಮಡಿದ ಮಂಜುನಾಥ್ ಅವರನ್ನು ಶ್ರದ್ಧಾಪೂರ್ವಕವಾಗಿ ಸ್ಮರಿಸಿ, ಶ್ರದ್ಧಾಂಜಲಿ ಸಲ್ಲಿಸಿದೆ.

ಅಂತಿಮ ದರ್ಶನದ ವೇಳೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸಂಸದರಾದ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್ ಅರುಣ್, ಡಾ. ಧನಂಜಯ್ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಜಗದೀಶ್, ನಗರಾಧ್ಯಕ್ಷರಾದ ಮೋಹನ್ ರೆಡ್ಡಿ, ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು, ಬಿಜೆಪಿ-ಪರಿವಾರ ಸಂಘಟನೆಗಳ ಪ್ರಮುಖರು, ಸಾವಿರಾರು ಕಾರ್ಯಕರ್ತರು ಹಾಗೂ ಶಿವಮೊಗ್ಗದ ನಾಗರಿಕರು ಭಾಗಿಯಾಗಿ ಗೌರವಪೂರ್ವಕವಾಗಿ ಅಂತಿಮ ನಮನವನ್ನು ಸಲ್ಲಿಸಿದ್ದಾರೆ.

ಇಡೀ ನಗರ ಶೋಕಾಚ್ಛನ್ನವಾಗಿದ್ದು, ಅವರ ಅಂತಿಮ ಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿ, ದೇಶಕ್ಕಾಗಿ ಬಲಿಯಾದ ಮಂಜುನಾಥ್ ಅವರ ತ್ಯಾಗವನ್ನು ಸ್ವರಿಸುತ್ತಾ, ರಸ್ತೆಗಳಲ್ಲಿ ಜನರು ದಾರಿಯುದ್ದಕ್ಕೂ ನಿಂತು, “ಮಂಜುನಾಥ್ ರಾವ್ ಅಮರ್ ರಹೇ” ಎಂಬ ಘೋಷಣೆಗಳೊಂದಿಗೆ ಶ್ರದ್ಧಾಪೂರ್ವಕವಾಗಿ ನಮನ ಸಲ್ಲಿಸಿದ್ದಾರೆ.

ಯಾವುದೇ ಅಡೆತಡೆಗಳಿಲ್ಲದೆ ಅವರ ಪಾರ್ಥಿವ ಶರೀರವನ್ನು ಶಿವಮೊಗ್ಗಕ್ಕೆ ತರುವಲ್ಲಿ ಸಹಕರಿಸಿದ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರಿಗೆ, ಅವರ ಕುಟುಂಬದವರ ಯೋಗ ಕ್ಷೇಮ ನೋಡಿಕೊಂಡು ಸುರಕ್ಷಿತವಾಗಿ ಕರ್ನಾಟಕಕ್ಕೆ ಕರೆತಂದ ಶ್ರೀ ತೇಜಸ್ವಿ ಸೂರ್ಯ ಅವರಿಗೆ, ರಾಜ್ಯ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರಿಗೆ ಹಾಗೂ ಕೇಂದ್ರ-ರಾಜ್ಯದ ನಾಯಕರಿಗೆ ಈ ಸಂದರ್ಭದಲ್ಲಿ ಶಿವಮೊಗ್ಗದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.

ಅವರ ಕುಟುಂಬದವರೊಂದಿಗೆ ಈ ದುಃಖದ ಸಂದರ್ಭದಲ್ಲಿ ನಾವು ಸದಾ ಇದ್ದೇವೆ ಎಂಬ ಭರವಸೆಯನ್ನು ನೀಡುತ್ತಾ, ಭಗವಂತನು ಅವರಿಗೆ ಈ ದುಃಖವನ್ನು ಭರಿಸುವ ಆತ್ಮಸ್ಥೈರ್ಯ, ಶಕ್ತಿ ಮತ್ತು ಸಮಾಧಾನವನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.


LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...