Klive Special Article ನೀಚರಿಗೆ ಸರಿಯಾಗಿ ಇಕ್ಕಬೇಕಿದೆ ನಾವು ಮನುಜ ಕುಲ ತಾನೊಂದೇ ವಲಂ ಎನ್ನು ಕವಿವಾಣಿಯನ್ನ ಆಗಾಗ್ಗೆ ನೆನಪಿಸಿಕೊಳ್ಳುತ್ತೇವೆ.
ಆದರೆ ಇದೆಲ್ಲ ನಮ್ಮ ಭಾರತೀಯರು ಮಾತ್ರ ಅನುಸರಿಸುವ
ಆದರ್ಶಗಳಾಗಿಬಿಟ್ಟಿವೆ ಅನಿಸುತ್ತದೆ.
ಕಾಶ್ಮೀರದ ಪಹಲ್ಗಾಂ ನಲ್ಲಿ ನಡೆದ ನರಮೇಧ ಮನುಷ್ಯ ಜನಾಂಗವೇ ತಲೆತಗ್ಗಿಸುವ ಘಟನೆ.
ಮುಸ್ಲೀಂ ಸಮುದಾಯದಲ್ಲಿ ಎಲ್ಲರೂ ನೀತಿರಹಿತರು ಎನ್ನಲಾಗದು. ಆ ಜನಾಂಗವೂ ಮನುಷ್ಯರದೆ. ಆದರೆ ಅದರಲ್ಲಿನ ವಿದ್ಯಾವಂತರು, ಆಧ್ಯಾತ್ಮಿ, ಬುದ್ಧಿಜೀವಿಗಳು ಈಗ
ಕಳೆದು ಹೋಗಿದ್ದಾರೆಯೆ?
ಕಾಶ್ಮೀರದ ಸಮಸ್ಯೆ ಬಗ್ಗೆ ಕೊಲೆಯಾದ ಮಂಜುನಾಥ ರಾವ್ ಪತ್ನಿ ಮೋದಿಯವರಿಗೆ ಏನು ಹೇಳಬೇಕು?
ಇದು ಏನನ್ನ ಸೂಚಿಸುತ್ತದೆ? ವಿವೇಚಿಸಬೇಕಾದ ಸಂಗತಿ.
ಮೋದಿಯವರಿಗೆ ಹೇಳಬೆರಕಾದ್ದನ್ನ ತಿಳಿಸಲು ಇದು ಕ್ರಮವಲ್ಲ.ಪೈಶಾಚಿಕ ನಡೆ. ಒಂದು ರಾಜತಾಂತ್ರಿಕ ವೇದಿಕೆಯಲ್ಲಿ ಕಾಶ್ಮೀರ್ ಸಮಸ್ಯೆ ಪರಸ್ಪರ ಇತ್ಯರ್ಥವಾಗಬೇಕು.
ಪ್ರವಾಸಿಗರಾಗಿ ಬಂದ
ಅಮಾಯಕರ ಕೊಲೆ ಇದಕ್ಕೆ ಉತ್ತರವಲ್ಲ.
ಇಂತಹ ಕೃತ್ಯಗಳಿಗೆ ಪ್ರಚೋದನೆ ನೀಡುವುದು ಮಹಾಪರಾಧ.
ಈ ಕುಕೃತ್ಯದ ಹಿಂದಿರುವ ಪಾತಕಿ
ಸೈಫುಲ್ಲಾ ಖಾಲೀದ್
2026 ರಲ್ಲೇ ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಡಿಸುವೆ ಎಂದು ನೀಡಿದ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.
ಇದು ಹಾಸ್ಯಾಸ್ಪದ ಹೇಳಿಕೆಯೇ ಸರಿ. ಏಕೆಂದರೆ ಅಪರಾಧ,ಕೊಲೆಗಳ ಮೂಲಕ ಯಾವುದೇ ಸಮಸ್ಯೆಗೆ ಉತ್ತರ ಸಿಗದು. ಈತನ ಟೀಮ್ ಹೆಸರು, ಟಿ.ಆರ್.ಎಫ್.
( ದ ರೆಸಿಸ್ಟೆಂಟ್ ಫ್ರಂಟ್) .
ಭಾರತ, ಕೈಗೊಂಡ ಕ್ರಮ
ಗಂಭೀರ ಸ್ವರೂಪ. ಅಯ್ಯೋ ಪಾಪ, ಅನ್ನದೇ
ಪಾಕ್ ಪ್ರಜೆಗಳು ತಕ್ಷಣ ವಾಪಸ್ ತಮ್ಮ ದೇಶಕ್ಕೆ ತೆರಳಬೇಕು.
ರಾಜತಾಂತ್ರಿಕ ಬಾಂಧವ್ಯಕ್ಕೆ ವಿರಾಮ.
ಮುಖ್ಯವಾದ ಸಿಂಧುನದು ಒಪ್ಪಂದಕ್ಕೆ ತಡೆ, ಸಲೀಸು ದಾರಿಯಾಗಿರುವ ವಾಘಾ-ಅಟಾರಿ ಗಡಿ ಮುಚ್ಚಿರುವುದು, ಇತ್ಯಾದಿ
ತೀವ್ರತರ ಪ್ರಕ್ರಿಯೆಗೆ ಮೊದಲಾಗಿದೆ. ಇಲ್ಲದಿದ್ದರೆ ಪಾಕಿಗಳು ಪಾಠ ಕಲಿಯುವುದಿಲ್ಲ.ಈಗಾಗಕೇ ದಾರಿದ್ರ್ಯದ. ಹರಿದ ಅರಿವೆಯಲ್ಲಿ ಹೊರಳಾಡುತ್ತಿರುವ ಪಾಕ್, ತನ್ನ ಮಂದಿ ಇಂತಹ ನೀಚಕೃತ್ಯಗಳಿಗೆ
ಮುಂದಾಗಿ ಅಂತಾರಾಷ್ಟ್ರೀಯ ಕಳಂಕ ಹಚ್ಚುತ್ತಿದ್ದಾರೆ ಎಂಬ ಪರಿಜ್ಞಾನವನ್ನೇ ಹೊಂದಿಲ್ಲವೇ ? ಎಂಬ ಸಾಮಾನ್ಯ ಪ್ರಶ್ನೆ ನಮ್ಮನ್ನ ಕಾಡುತ್ತದೆ.