Marulasidda Swamiji Basava Kendra ಸೌಂದರ್ಯ ಪ್ರಜ್ಞೆ ಮತ್ತು ಚಂದ ಕಾಣುವ ವಾಂಚೆ ಇಂದು ಸಮಾಜದಲ್ಲಿ ಜಾಸ್ತಿ ಆಗುತ್ತಾ ಇದೆ ಎಂದು ಬಸವ ಕೇಂದ್ರದ ಶ್ರೀ ಮರುಳಸಿದ್ದ ಸ್ವಾಮೀಜಿ ಯವರು ಹೇಳಿದರು.
ಇತ್ತೀಚಿಗೆ ಜೈಲ್ ಸರ್ಕಲ್ ಹತ್ತಿರ ಇರುವ “ಪ್ರಾಯ ಏಸ್ತೀಯಟಿಕ್ ” ಸೌಂದರ್ಯ ವರ್ಧಕ ಆಸ್ಪತ್ರೆಯ ಉದ್ಘಾಟನೆಯನ್ನು ಮಾಡಿ ಮಾತನಾಡಿದರು.
ಸೌಂದರ್ಯ ಪ್ರಜ್ಞೆಗೋಸ್ಕರ ಬ್ಯೂಟಿ ಪಾರ್ಲರ್ ಗಳು ತುಂಬಿ ತುಳುಕುತ್ತಿವೆ.
ಈ ಹಿಂದೆ ಬೇರೆ ಬೇರೆ ಊರುಗಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದವರೆಲ್ಲಾ ಈಗ ಶಿವಮೊಗ್ಗದಲ್ಲಿಯೇ ಚಿಕಿತ್ಸೆ ಪಡೆಯಲು ಸೌಂದರ್ಯ ವರ್ಧಕ ಆಸ್ಪತ್ರೆ ಆರಂಭವಾಗಿರುವುದು ನಮಗೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ. ಯುವ ಡಾಕ್ಟರ್ಗಳಾದ ಡಾಕ್ಟರ್ ಐಶ್ವರ್ಯ ಘಟ್ಟಡ್.ಡಾಕ್ಟರ್
ಕೆ ಪ್ರಜ್ವಲ್. ಡಾ.ಪ್ರವೀಣ್. ಡಾಕ್ಟರ್ ಸೌರಭ ಧನಂಜಯ ರವರು ಸೇರಿ ಒಂದು ಹೊಸ ಪ್ರಯತ್ನ ಮಾಡುತ್ತಿದ್ದಾರೆ ಅವರುಗಳಿಗೆ ಶುಭವಾಗಲಿ ಎಂದು ಸ್ವಾಮೀಜಿ ಹಾರೈಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲ ಸಚಿವರಾದ ಡಾ. ಪ್ರಸನ್ನಕುಮಾರ್, ಮಾಜಿ ಸಂಸದ ಆಯನೂರು ಮಂಜುನಾಥ್, ಕಾಂಗ್ರೆಸ್ ಮುಖಂಡ ಎಸ್ಪಿ ದಿನೇಶ್, ರೋಟರಿ ಪ್ರಮುಖರಾದ ಜಿ.ವಿಜಯಕುಮಾರ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಡಾ. ಮೇಟಿ ಮಲ್ಲಿಕಾರ್ಜುನ, ನಿವೃತ್ತ ಪ್ರಾಂಶುಪಾಲರಾದ ಪ್ರವೀಣ್ ಮಹಿಶಿ ಮೊದಲಾದವರು ಉಪಸ್ಥಿರಿದ್ದರು.