Union Public Service Commission ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 421ನೇ ರ‍್ಯಾಂಕ್ ಗಳಿಸಿರುವ ಶ್ರೀ ಶಿವಗಂಗಾ ಯೋಗಕೇಂದ್ರದ ಯೋಗ ಶಿಬಿರಾರ್ಥಿ ಬಿ.ಎಂ.ಮೇಘನಾ ಅವರಿಗೆ ಶಿವಮೊಗ್ಗದ ಯೋಗ ತರಬೇತಿ ಕೇಂದ್ರದಲ್ಲಿ ಸನ್ಮಾನಿಸಲಾಯಿತು.
ಡಿವಿಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕಿ ಡಾ. ಎ.ಎಸ್.ವತ್ಸಲಾ ಮತ್ತು ವಕೀಲ ಬಿ.ಜಿ.ಮೋಹನ್ ಅವರ ಪುತ್ರಿ ಬಿ.ಎಂ.ಮೇಘನಾ. ಇವರು ಶ್ರೀ ಶಿವಗಂಗಾ ಯೋಗ ಕೇಂದ್ರದ ಕೃಷಿ ನಗರ ಶಕ್ತಿ ಗಣಪತಿ ಯೋಗ ಶಾಖೆಯ ಯೋಗ ಶಿಬಿರಾರ್ಥಿಯಾಗಿದ್ದಾರೆ.
ಐಎಎಸ್ ಪರೀಕ್ಷೆಯಲ್ಲಿ 421 ರ‍್ಯಾಂಕ್ ಗಳಿಸಿರುವ ಮೇಘನಾ ಪ್ರವೃತ್ತಿಯಲ್ಲಿ ಭರತನಾಟ್ಯ, ಸಂಗೀತ ಹಾಗೂ ಗಮಕಿ ಆಗಿದ್ದಾರೆ. ಯೋಗ ಹಾಗೂ ಕಲಾ ಸೇವೆಯಲ್ಲಿ ಸದಾ ನಿರತರಾಗಿದ್ದಾರೆ. ಇವರಿಗೆ ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷ ಎಸ್ ರುದ್ರೇಗೌಡ, ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ, ಕಾರ್ಯದರ್ಶಿ ಚಂದ್ರಶೇಖರಯ್ಯ ಮತ್ತು ಟ್ರಸ್ಟಿನ ಪದಾಧಿಕಾರಿಗಳು, ಪೋಷಕ ಸದಸ್ಯರು ಅಭಿನಂದಿಸಿದ್ದಾರೆ.
ಬುಧವಾರ ಬೆಳಗ್ಗೆ ಕೃಷಿ ನಗರದ ಶಕ್ತಿ ಗಣಪತಿ ಯೋಗ ಕೇಂದ್ರದಲ್ಲಿ ಮೇಘನಾ ಅವರನ್ನು ಸನ್ಮಾನಿಸಲಾಯಿತು. ಮೇಘನಾ ಅವರು ಮಾತನಾಡಿ, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯ ಮೂರನೇ ಪ್ರಯತ್ನ ಇದಾಗಿದ್ದು, ಸಾಧನೆಗೆ ಪಾಲಕರು ಮೂಲಕಾರಣ. ಆರು ತಿಂಗಳು ದೆಹಲಿಯಲ್ಲಿ ವಾಸ ಮಾಡಿ ಪ್ರತಿ ದಿನ 12 ಗಂಟೆ ಅಭ್ಯಾಸ ಮಾಡಿದ ಫಲ ಪರೀಕ್ಷೆಯಲ್ಲಿ ಪಾಸಾಗಲು ಸಹಕಾರಿಯಾಗಿದೆ. ಯೋಗ ಶಿಬಿರಾರ್ಥಿಗಳು ಮತ್ತು ಯೋಗ ಕೇಂದ್ರದ ಗುರುಗಳು ಸಹ ಮಾರ್ಗದರ್ಶನ ನೀಡಿದ್ದಾರೆ ಎಂದರು.
Union Public Service Commission ಯೋಗ ಶಿಕ್ಷಕ ನೀಲಕಂಠ ರಾವ್ ಮಾತನಾಡಿ ಮೇಘನಾ ಅವರಿಗೆ ಶುಭಕೋರಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಮೇಘನಾ ಅವರಿಗೆ ಎಲ್ಲರಿಗೂ ಮಾದರಿ. ಮುಂದಿನ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲಿ ಎಂದು ಶುಭಹಾರೈಸಿದರು.