Sankara Eye Hospital ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗದಲ್ಲಿ 4ನೇ ಆಕಾಯ್ನ (ಅಸೋಸಿಯೇಶನ್ ಆಫ್ ಕಮ್ಯೂನಿಟಿ ಆಪ್ತಲ್ಮಾಲಜಿ ಆಫ್ ಇಂಡಿಯಾ) ವಾರ್ಷಿಕ ಸಮಾವೇಶ, ಕರ್ನಾಟಕ ಆವೃತ್ತಿಯನ್ನು ದಿನಾಂಕ 20.04.2025 ರಂದು ಕರ್ನಾಟಕ ಆಫ್ತಾಲ್ಮಿಕ್ ಸೋಸೈಟಿ, ಮಲ್ನಾಡ್ ಆಫ್ತಾಲ್ಮಿಕ್ ಅಸೋಸಿಯೇಶನ್ ಮತ್ತು ಶಂಕರ ಆಕ್ಯಾಡೆಮಿ ಆಫ್ ವಿಷನ್ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಆಕಾಯ್ನ ಅಸೋಸಿಯೇಶನ್‌ನ ಗೌರವಾನ್ವಿತ ಕಾರ್ಯದರ್ಶಿಗಳಾದ ಡಾ|| ಸಪನ್ ಕುಮಾರ್ ಸಮಂತರವರು ಹಾಗೂ ಅಂತರ ರಾಜ್ಯ , ರಾಜ್ಯ ಮಟ್ಟದ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರಿನ ವಾಗ್ಮಿಗಳು ಮತ್ತು ನೇತ್ರ ವೈದ್ಯರು ಆಗಮಿಸಿ ಸಮುದಾಯ ನೇತ್ರ ಆರೈಕೆಯ ಮಹತ್ವ ಮತ್ತು ನಿರಂತರ ಸೇವೆಯ ಮಹತ್ವವನ್ನು ಪ್ರಸ್ಥುತಪಡಿಸಿದರು.
ವಿವಿಧ ವೈದ್ಯಕೀಯ ಕಾಲೇಜಿನ ಸ್ನಾತ್ತಕೋತ್ತರ ನೇತ್ರ ವೈದ್ಯರಿಗೆ ರಸಪ್ರಶ್ನೆ, ಪೋಸ್ಟರ್ ಪ್ರಸ್ಥುತಿ, ಕೇಸ್ ಪ್ರಸೆಂಟೇ಼ನ್ ಚಟುವಟಿಕೆಗಳನ್ನು ಕೈಗೊಂಡು ವಿಜೇತರಿಗೆ ಸೂಕ್ತ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ 82 ನೇತ್ರ ವೈದ್ಯರು ಪಾಲ್ಗೊಂಡಿದ್ದರು.
Sankara Eye Hospital ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರ ನಿಧಿಯ ಮುಖ್ಯಸ್ಥರು ಡಾಮಲ್ಲಿಕಾರ್ಜುನ್ ಎಮ್ ಹೆಚ್, ಮುಖ್ಯ ವೈದ್ಯಾಧಿಕಾರಿಗಳು ಡಾಮಹೇಶ್ ಎಸ್ ಹಾಗೂ ಶಿವಮೊಗ್ಗ ಜಿಲ್ಲೆಯ ಡಿ ಬಿ ಸಿ ಎಸ್ ಕಾರ್ಯ ನಿರ್ವಾಹಣಾಧಿಕಾರಿಗಳಾದ ಡಾ||ಕಿರಣ್ ಕುಮಾರ್ ಉಪಸ್ಥಿತರಿದ್ದರು.
ಇತರೆ ವೈದ್ಯ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ ರೂಪಶ್ರೀ ಅವರು ಮಾಡಿದರು, ಡಾಕೃಷ್ಣಪ್ರಸಾದ್ ಕುಡ್ಲು ರವರು ಅಧ್ಯಕ್ಷತೆಯನ್ನು ವಹಿಸಿದ್ದರು, ವಂದನೆಗಳನ್ನು ಡಾ||ಕವಿತಾ ಅವರು ಮಾಡಿದರು.