(ಮೃಚ್ಚಕಟಿಕ ನಾಟಕ ರಂಗ ಸಮೀಕ್ಷೆ)
Klive Special Article ಶೂದ್ರಕ ಮಹಾಕವಿಯ “ಮೃಚ್ಛಕಟಿಕ”
ಪ್ರಾಚೀನ ಕಾಲವೊಂದರ ಸಾಮಾಜಿಕ ಚಿತ್ರಣವನ್ನ ಕಟ್ಟಿಕೊಡುವ ವಸ್ತುವುಳ್ಳ
ನಾಟಕ.
ಮನುಷ್ಯ ತಾನೆಸಗುವ ಒಳ್ಳೆಯ ಕೃತ್ಯ ಮತ್ತು ಕೆಟ್ಟಕೃತ್ಯಕ್ಕೆ ಜೀವಿತದಲ್ಲೇ ಫಲಸಿಗುತ್ತದೆ ಎಂಬ ನಿತ್ಯಸತ್ಯ ಇಲ್ಲಿಅನಾವರಣಗೊಂಡಿದೆ.
ಒಂದು ಸಾಮಾನ್ಯ ಸಾಮಾಜಿಕ ವಾತಾವರಣದಲ್ಲಿ ನಡೆಯುವ
ವಣಿಕ ಚಾರುದತ್ತ, ಗಣಿಕೆ ವಸಂತ ಸೇನೆಯರ ಸಾಧಾರಣ ಪ್ರೇಮಕ್ಕೆ ಅಮರತ್ವದ ಹೊಳಪು ನೀಡುವ ಕತೆಯಿದೆ. ಶಕಾರನು , ವಸಂತ ಸೇನೆಯ ಕೊಲೆಯ ಆರೋಪವನ್ನ ಚಾರುದತ್ತನ ಮೇಲೆ ಹೊರಿಸುತ್ತಾನೆ.
ಮರಣದಂಡನೆಗೆ ಒಳಗಾದ ಚಾರುದತ್ತ ಕೊನೆಗೆ ಒಲವಿನ ಮೂರ್ತಿ ವಸಂತಸೇನೆಯ ಪ್ರವೇಶದಿಂದ ಬಿಡುಗಡೆಗೊಳ್ಳುತ್ತಾನೆ
ಈ ಆವರಣದಲ್ಲಿಯೇ
ಹಲವು ಪ್ರತ್ಯೇಕ ಘಟನೆಗಳ ಸರಣಿ ಇದೆ.
ಸರಣಿಗಳು ಒಂದಕ್ಕೊಂದು ಹೆಣೆದುಕೊಂಡಿದ್ದು ಪ್ರತೀ ಘಟನೆಯೂ ಕೊನೆಗೆ ಒಳಿತಿನಲ್ಲೇ ಪರ್ಯವಸಾನಗೊಳ್ಳುತ್ತವೆ.
ನಿರ್ದೇಶಕ ವೈದ್ಯ,ಓರ್ವ ನಿಷ್ಣಾತ ಕಲಾವಿದ. ಕತೆಯನ್ನ ವಿಂಗಡಿಸಿ , ರಂಗಪರಿಕರಗಳೊಂದಿಗೆ ಪೇರಿಸುತ್ತಾ
ಪ್ರೇಕ್ಷಕನನ್ನ ಸೆಳೆಯುತ್ತಾ ಹೋಗಿದ್ದಾರೆ.
ವಸಂತಸೇನೆ,ಚಾರುದತ್ತ, ಮೈತ್ರೇಯ, ಸಖಿ, ಅರ್ಯಕ, ಶಕಾರ, ಶರ್ಮಿಳಕ,
ಜೂಜುಕೋರ,ರದನಿಕೆ, ಇಷ್ಟು ಮುಖ್ಯ ಭೂಮಿಕೆಯಲ್ಲಿವೆ.
ನಾಟಕ ಗೆಲ್ಲುವುದು ಪ್ರೀತಿಯ ಕತೆಯಿಂದ.ಆದರೆ ಪಾತ್ರಗಳಲ್ಲಿ
ಶಕಾರ ( ಡಾ.ನಾಗಭೂಷಣ) ಅದೊಂದೇ ಇಡೀ ರಂಗಸ್ಥಳವನ್ಮ ತುಂಬಿಕೊಂಡು ಚಲಿಸುವ ಪಾತ್ರ.
ನಟನೆಯಲ್ಲಿ ಜೀವಂತಿಕೆ ತುಂಬಿದ್ದಾರೆ,
ಚಾರುದತ್ತ ಮತ್ತು ವಸಂತ ಸೇನೆಯರ
ಒಲವಿನ ದೃಶ್ಯ ಮನೆಸೆಳಯುತ್ತದೆ.
ಆದರೆ ಅವರೀರ್ವ. ರಾತ್ರಿಯ ಮನೆ ಭೇಟಿ ತೀರಾ ಸಾಧರಾಣವಾಗಿ ಅಭಿನಯಿಸಲ್ಪಟ್ಟಿದೆ.
ರಂಗಸ್ಥಳದಲ್ಲಿ ಬಹುಪಾಲು ಚಲನೆ ತುಂಬಿರುವ ಮನೆಯ ದೃಶ್ಯವನ್ನ
ಇನ್ನಷ್ಟು ಮುನ್ನೆಲೆಗೆ ತರಬಹುದಿತ್ತು.
ಏಕೆಂದರೆ ಪ್ರಣಯಿಗಳ ಮುಖಭಾವ
ಪ್ರೇಕ್ಷಕನಿಗೆ ಸಂವಹಿಸುವುದೇ ಇಲ್ಲ.
ಮಂದ ಬೆಳಕಿನಲ್ಲೇ ಈ ದೃಶ್ಯ ಸಾಗಿ
ಪ್ರೇಕ್ಷಕನಲ್ಲಿ ಈರ್ವರ ಪ್ರೀತಿ ಪ್ರಭಾವಿಸುವಲ್ಲಿ ಹೆಣಗಾಡುತ್ತದೆ.
Klive Special Article ಚಾರುದತ್ತ, ವಸಂತ ಸೇನೆ ಪಾತ್ರಧಾರಿಗಳಲ್ಲಿ ವಸಂತಸೇನೆ ( ಲಕ್ಷ್ಮಿ,ಎಸ್) ನಟನೆಯಲ್ಲಿ ಮೈಚಳಿ ಬಿಟ್ಟಿದ್ದಾರೆ. ಆದರೆ ಚಾರುದತ್ತನ ಪಾತ್ರಧಾರಿ ( ನಾಗರಾಜ್ ನೀಲ್) ಇನ್ನಷ್ಟೂ ಪಳಗಬೇಕು, ಅದೊಂದು ಭಾವನಾತ್ಮಕ. ಪಾತ್ರ. ಅದರ ಸ್ವಭಾವವನ್ನ ಅರಗಿಸಿಕೊಳ್ಳಬೇಕಿದೆ.
ಮೈತ್ರೇಯ,( ಲೋಕೇಶ್, ನ್ಯಮತಿ) ಧ್ವನಿಪೂರ್ಣವಾಗಿದೆ.
ವ್ಯಾವಹಾರಿಕ ಜಗತ್ತಿನ ಚವಕಾಶಿಗಳ
ಬಗ್ಗೆ ದೈನಿಕ ಜೀವನ ಕ್ಕೂ ಮಾತುಬೆಸೆಯುವ ನಟನೆ ಚುರುಕಾಗಿದೆ.
ಜೂಜುಕೋರ, ಸರ್ಮಿಳಕ, ಆರ್ಯಕ
ಪಾತ್ರಧಾರಿಗಳುತಮ್ಮ ಪಾಲನ್ನ ಸಮರ್ಪಕ ನಿರ್ವಹಿಸಿದ್ದಾರೆ. ವಸಂತ ಸೇನೆಯ ಸಖಿ ಮದನಿಕೆ,( ನಂದಿನಿ)
ಇನ್ನೂ ನಟನೆಯ ಪಾಠಕ್ಕೆ ಒಗ್ಗಬೇಕಿದೆ.
ರಂಗಸಜ್ಜಿಕೆ ಓಕೆ. ವಸಂತೋತ್ಸವದ
ದೃಶ್ಯ ಸಮೃದ್ಧವಾಗಿದೆ. ನಟರೆಲ್ಲರೂ
ಜೀವಂತಿಕೆಯಿಂದ ನರ್ತಿಸಿದ್ದಾರೆ.
ಬಂಡಿಗಳ ಅದಲುಬದಲು ನಿಖರವಾಗಿ ಬಿಂಬಿಸಲು ವೈದ್ಯ ಬಳಸಿರುವ ಕೌಶಲಕ್ಕೆ ವಾಹ್ ಎನ್ನಬೇಕು.
.
ಬಹಳ ಅಚ್ವುಕಟ್ಟಾಗಿ ನಮ್ಮನ್ನ ಗೆದ್ದವರೆಂದರೆ ಹಿರಿಯ ನಟ ಎನ್.ಕೆ.ಹಾಲೇಶ್. ಅವರ ಕೇಶ ವಿನ್ಯಾಸವನ್ನ
ಸುಧಾರಿಸಬಹುದಿತ್ತು. ಅದು ನಟರ ಕೊರತೆಯಲ್ಲ.
ಸಂಗೀತ ,ರಿಹರ್ಸಲ್ ಕಡಿಮೆಯೋ ಗೊತ್ತಿಲ್ಲ. ಕಲಾವಿದರ ಪೈಕಿ ಸ್ತ್ರೀ ಧ್ವನಿಇಂಪಾಗಿದೆ. ಪುರುಷ ಗಾಯಕ ಇನ್ನಷ್ಟೂ ಭಾವನೆಗಳನ್ನ ತುಂಬಬೇಕಿದೆ. ಒಟ್ಟಾರೆ.ಹಿನ್ನೆಲೆ ಸಂಗೀತ ಓಕೆ.
ಉಳಿದದ್ದು ಬೆಳಕು. ಚಾರುದತ್ತ ವಸಂತಸೇನೆ ದೃಶ್ಯಗಲಲ್ಲಿ ಅವರ ಮುಖಭಾವಗಳೇ ಸ್ಪಷ್ಟವಿಲ್ಲ.
ಇನ್ನಷ್ಟು ಪ್ರಖರತೆಯ ಬಗ್ಗೆ ಗಮನ ನೀಡಬೇಕಿತ್ತು.
ಒಟ್ಟಾರೆ ರಂಗಕೃತಿಯಾಗಿ ಕಂಡರಿಸಿದಾಗ ಬೇರೆಬೇರೆಯಾಗಿ ಗಮನಿಸಿದ ಅಂಶಗಳು, ಕೊರತೆಯಾಗಿ ಕಾಣುವುದಿಲ್ಲ.
ಅನುಭವಕ್ಕೆ ದಕ್ಕುವ ವಸಂತ ಸೇನೆ ಮತ್ತು ಚಾರುದತ್ತರ ಒಲವಿನ ಮುಂದೆ
ಪ್ರೇಕ್ಷಕ ಪ್ರತ್ಯೇಕವಾಗುವುದೇ ಇಲ್ಲ.
ಬಹಳ ದಿನಗಳಿಂದ ಕಾದ ಪ್ರೇಕ್ಷಕರಿಗೆ
ವೈದ್ಯ ನಿರಾಸೆ ಮಾಡಿಲ್ಲ. ಅದೇ ನಾವುನೀಡುವ ಖುಲಾಸೆ .
ವಸಂತೋತ್ಸವಕ್ಕೆ ಹೊರಟ ಮಣ್ಣಿನ ಬಂಡಿ , ಒಂದು ಅದ್ಭುತ ಮತ್ತು ಪರಿಣಾಮಕಾರಿ ಸಂಕೇತ.
ವಸಂತಸೇನೆ , ಬದಲಾದ ಮಣ್ಣಿನ ಬಂಡಿ ಏರುತ್ತಾಳೆ. ಅವಳಿಗದಂಡದಿಂದ ಸಿದ್ಧವಾದ ಬಂಡಿಯಲ್ಲಿ ಚಾರುದತ್ತನ ಬದಲಿಗೆ ಆರ್ಯಕ ಕುಳಿತುಕೊಳ್ಳುತ್ತಾನೆ.ರಾಜನಾಗುತ್ತಾನೆ ವಸಂತಸೇನೆ
ಮೃತ್ಯುವಿನ ಬಳಿಸಾರಿ ಬದುಕುತ್ತಾಳೆ.
ಚಾರುದತ್ತ ,ಮೃತ್ಯು ದಂಡದಿಂದ ಬಿಡುಗಡೆ ಪಡಯು್ತ್ತಾನೆ.
ಮಣ್ಣೇ ಶಾಶ್ವತ. ಕೆಲವರು ಹೆಜ್ಜೆಹಾಕುತ್ತಾರೆ. ಹಲವರು ಪ್ರಯಾಣಿಸುತ್ತಾರೆ. ಅದೇ ಮೂಕ ಸಾಕ್ಷಿ. ಇದೇ ಸಂದೇಶ
ಡಾ.ಸುಧೀಂದ್ರ.
ಪ್ರಧಾನ ಸಂಪಾದಕ. ಕೆ ಲೈವ್ ನ್ಯೂಸ್.ಶಿವಮೊಗ್ಗ.
