Cow protection movement ಸರಳತೆ ಮತ್ತು ಸಜ್ಜನಿಕೆಯೊಂದಿಗೆ ವಸ್ತುನಿಷ್ಠ ವರದಿಗಾರಿಕೆಯಲ್ಲಿ ಗುರುತಿಸಿಕೊಂಡ ಪತ್ರಕರ್ತ ಎಚ್.ಕೆ.ಬಿ. ಸ್ವಾಮಿ ಅವರಿಗೆ ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿ ಲಭಿಸಿರುವುದು ತಾಲೂಕಿಗೆ ಹೆಮ್ಮೆಯಾಗಿದೆ ಎಂದು ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಹೇಳಿದರು.
ಸೊರಬ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿಯಿಂದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ನೀಡಲಾಗುವ ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿಗೆ ಭಾಜನರಾದ ಎಚ್.ಕೆ.ಬಿ. ಸ್ವಾಮಿ ಅವರಿಗೆ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಚ್.ಕೆ.ಬಿ. ಸ್ವಾಮಿ ಅವರು ಯಾವುದೇ ಆಸೆ, ಆಮೀಷಗಳಿಗೆ ಒಳಗಾಗದೇ ಸದಾ ಸತ್ಯದ ಹಾದಿಯಲ್ಲಿ, ನೈಜ ವರದಿಗಾರಿಕೆಯಲ್ಲಿ ತೊಡಗಿದ್ದಾರೆ. ಅವರು ಯುವ ಪತ್ರಕರ್ತರಿಗೆ ಮಾದರಿಯಾಗಿದ್ದಾರೆ. ಅವರಿಗೆ ಪ್ರಶಸ್ತಿ ಲಭಿಸಿರುವುದು ಅತ್ಯಂತ ಸಂತೋಷದ ವಿಷಯ. ಪತ್ರಿಕೋದ್ಯಮದಲ್ಲಿ ಸ್ವಾಮಿ ಅವರು ಸುಮಾರು ಇಪ್ಪತೈದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಆರೋಪ ಮತ್ತು ಆಪಾದನೆಗಳನ್ನು ಹೊಂದಿಲ್ಲ. ಸಮಾಜದ ಕನ್ನಡಿಯಂತೆ ಕಾರ್ಯನಿರ್ವಹಿಸುತ್ತಿರುವ ಸ್ವಾಮಿ ಅವರಿಗೆ ಮತ್ತಷ್ಟು ಪ್ರಶಸ್ತಿಗಳು ಲಭಿಸಲಿ ಮತ್ತು ಅವರಿಂದ ಯುವ ಪತ್ರಕರ್ತರು ಪ್ರೇರೇಪಿತರಾಗಲಿ ಎಂದು ಆಶಿಸಿದರು.
ಅಭಿನಂದನೆ ಸ್ವೀಕರಿಸಿದ ಪತ್ರಕರ್ತ ಎಚ್.ಕೆ.ಬಿ. ಸ್ವಾಮಿ ಮಾತನಾಡಿ, ತಮಗೆ ಪ್ರಶಸ್ತಿ ಲಭಿಸಿರುವುದಕ್ಕೆ ಪ್ರೆಸ್ ಟ್ರಸ್ಟ್ಗೆ ಅಭಾರಿಯಾಗಿದ್ದೇನೆ ಜೊತೆಗೆ ಅನೇಕ ಪತ್ರಕರ್ತರು ಸಲಹೆ ನೀಡುತ್ತಾ, ಸಹಕಾರವನ್ನು ನೀಡಿದ್ದಾರೆ. ಪ್ರಶಸ್ತಿ ಲಭಿಸಿರುವುದರಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಿದಂತಾಗಿದೆ. ಪ್ರಶಸ್ತಿ ಲಭಿಸಿದ ತರುವಾಯ ಸಂಘ-ಸAಸ್ಥೆಯವರು ಗೌರವಿಸುತ್ತಿರುವುದು ಸಂತಸವಾಗುತ್ತಿದೆ ಎಂದರು.
ಗೋ ಸಂರಕ್ಷಣಾ ಹೋರಾಟ ಸಮಿತಿಯ ಉಪಾಧ್ಯಕ್ಷ ದತ್ತಾ ಸೊರಬ, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಗೌಡ, ಕಾರ್ಯದರ್ಶಿ ಶರತ್ ಸ್ವಾಮಿ, ನಾಮದೇವ ಸಿಂಪಿ ಸಮಾಜದ ಉಪಾಧ್ಯಕ್ಷ ಅನಿಲ್ ಕುಮಾರ್ ಬಾಂಬೋರೆ, ಪತ್ರಕರ್ತ ನೋಂಪಿ ಶಂಕರ್, ಪ್ರವೀಣ್ ಕುಮಾರ್, ಯುವರಾಜ್ ಕಾನುಗೋಡು ಸೇರಿದಂತೆ ಇತರರಿದ್ದರು.
Cow protection movement ಸಜ್ಜನಿಕೆಯ ವರದಿಗಾರ ‘ ಸ್ವಾಮಿ’ಗೆ ಪ್ರಶಸ್ತಿ, ತಾಲ್ಲೂಕಿಗೇ ಹೆಮ್ಮೆ- ಜಿ.ಎಸ್.ಚಿದಾನಂದಗೌಡ
Date: