Visvesvaraya Iron and Steel Plant ವಿಐಎಸ್ ಎಲ್ ನಲ್ಲಿ ಐಇಂಪಿ ಮೂಲಕ ವೈಯಕ್ತಿಕ ಪರಿಣಾಮಕಾರಿತ್ವ ಅಭಿವೃದ್ಧಿ’ ತರಬೇತಿ ಕಾರ್ಯಕ್ರಮ
ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ “ಕಲಿಕೆ, ತೊಡಗಿಸಿಕೊಳ್ಳಿವಿಕೆ, ವರ್ತನೆ ಮತ್ತು ಕಾರ್ಯಕ್ಷಮತೆ (ಐಇಂP) ಮೂಲಕ ವೈಯಕ್ತಿಕ ಪರಿಣಾಮಕಾರಿತ್ವ ಅಭಿವೃದ್ಧಿ” ಎಂಬ ವಿಷಯದ ಕುರಿತು ಎರಡು ತರಬೇತಿ ಕಾರ್ಯಕ್ರಮಗಳನ್ನು ವಿಐಎಸ್ ಎಲ್ ನಲ್ಲಿ ಏಪ್ರಿಲ್ 15 ರಿಂದ 16ರವರೆಗೆ ಮತ್ತು ಏಪ್ರಿಲ್ 17 ರಿಂದ 18ರವರೆಗೆ ಕ್ರಮವಾಗಿ 43 ಮತ್ತು 36 ಉದ್ಯೋಗಿಗಳನ್ನು ಒಳಗೊಂಡಂತೆ ವಿಐಎಸ್‌ಎಲ್‌ನ ಭದ್ರಾ ಅತಿಥಿಗೃಹದಲ್ಲಿ ಆಯೋಜಿಸಲಾಗಿತ್ತು.
ಮೊದಲ ಕಾರ್ಯಕ್ರಮವನ್ನು ಕಾರ್ಯಪಾಲಕ ನಿರ್ದೇಶಕ ಶ್ರೀ ಬಿ.ಎಲ್. ಚಂದ್ವಾನಿ ಮತ್ತು ಎರಡನೇ ಕಾರ್ಯಕ್ರಮವನ್ನು ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಉದ್ಟಾಟಿಸಿದರು.
ರಾಂಚಿಯ ಮ್ಯಾನೇಜ್‌ಮೆಂಟ್ ಟ್ರೈನಿಂಗ್ ಇನ್ಸ್ಟಿಟ್ಯೂಟಿನ ಜನರಲ್ ಮ್ಯಾನೇಜರ್ (ಶೈಕ್ಷಣಿಕ ಮತ್ತು ಹಿರಿಯ ಬೋಧಕ ಸದಸ್ಯರು) ಡಾ|| ಪ್ರಣವ್ ಕುಮಾರ್, ತರಬೇತಿಯನ್ನು ಪರಿಣಾಮಕಾರಿಯಾಗಿ ನಡೆಸಿಕೊಟ್ಟರು.
ತರಬೇತಿಯಲ್ಲಿ ಗುಂಪು ಚಟುವಟಿಕೆಗಳು, ಮನಶ್ಯಾಸ್ತçದ ಪರೀಕ್ಷೆಗಳು, ಗುಂಪು ಚರ್ಚೆ ಮತ್ತು ವಿಷಯ ಮಂಡನೆಗಳು ಒಳಗೊಂಡಿದ್ದವು.
ಈ ಕಾರ್ಯಕ್ರಮವನ್ನು ವಿಐಎಸ್ ಎಲ್ & ಆ ಇಲಾಖೆ ಸಂಯೋಜಿಸಿತ್ತು. ಕಿರಿಯ ಪ್ರಬಂಧಕರು ಶ್ರೀ ಎಮ್.ಎಲ್. ಯೋಗೀಶ್ ಪ್ರೋಟೋಕಾಲ್ ಅಧಿಕಾರಿಯಾಗಿದ್ದರು.
ಭಾಗವಹಿಸಿದ ಎಲ್ಲಾ ಅಭ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.