India Scouts and Guides ಮಕ್ಕಳಿಗೆ ಶಿಕ್ಷಣದ ಜತೆಯಲ್ಲಿ ಜೀವನದ ಪರಿಪೂರ್ಣತೆ ಸಾಧಿಸಲು ಹಾಗೂ ಸಾರ್ಥಕತೆ ಹೊಂದಲು ಸಂಸ್ಕಾರ ಅತ್ಯಂತ ಅವಶ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಹೇಳಿದರು.
ಶಿವಮೊಗ್ಗ ನಗರದ ಬಿ.ಎಚ್. ರಸ್ತೆಯಲ್ಲಿರುವ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಆವರಣದಲ್ಲಿ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ, ಹೊಂಗಿರಣ ಶಿವಮೊಗ್ಗ ಹಾಗೂ ಸಿದ್ದೋಜಿ ರಾವ್ ಗಂಗಾಬಾಯಿ ಫೌಂಡೇಶನ್ ಶಿವಮೊಗ್ಗ ಸಂಯುಕ್ತ ಆಶ್ರಯದಲ್ಲಿ 21 ದಿನದ ಕುಣಿಯೋಣ ಬಾರಾ 2025 ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಮೊಬೈಲ್, ಕಂಪ್ಯೂಟರ್‌ಗಳಿಗೆ ದಾಸರಾಗುತ್ತಿದ್ದು, ಸ್ವಂತಿಕೆ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಶಿಬಿರಗಳ ಮುಖಾಂತರ ರಂಗ ಕಲೆಗಳು, ಕ್ರೀಡೆ, ನಾಟಕ, ಅಭಿನಯ, ನೃತ್ಯ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
India Scouts and Guides ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ ಡಾ. ನಾಗೇಂದ್ರ ಹೊನ್ನಾಳಿ ಮಾತನಾಡಿ, ಮಕ್ಕಳಿಗೆ ಹೊಸ ಹೊಸ ಚಟುವಟಿಕೆಗಳನ್ನು ಕಲಿಯಲು ಸೃಜನಶೀಲತೆಯನ್ನು ಮತ್ತು ಕ್ರಿಯಾತ್ಮಕ ಆಲೋಚನೆಗಳನ್ನ ಬೆಳೆಸಿಕೊಳ್ಳಲು ಇಂತಹ ಶಿಬಿರಗಳು ಫಲಕಾರಿಯಾಗುತ್ತವೆ. ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಈಗಾಗಲೇ ಪ್ರಪಂಚಾದ್ಯಂತ ಮಕ್ಕಳಲ್ಲಿ ಸೇವಾ ಮನೋಭಾವನೆ ಹಾಗೂ ವ್ಯಕ್ತಿತ್ವ ನಿರ್ಮಾಣ ಮಾಡುವುದರ ಜೊತೆಗೆ ಶಿಸ್ತು ಹಾಗೂ ಸಂಯುಮವನ್ನ ಕಲಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದು ಹೇಳಿದರು.
ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ಸ್ಕೌಟ್ ಆಯುಕ್ತ ಎಸ್.ಜಿ.ಆನಂದ್ ಮಾತನಾಡಿ, ರಾಜ್ಯ ಘಟಕದ ಆದೇಶದ ಮೇರೆಗೆ ಇಂತಹ ಬೇಸಿಗೆ ಶಿಬಿರಗಳನ್ನು ಆಯೋಜಿಸುವುದರ ಮುಖಾಂತರ ಮಕ್ಕಳಲ್ಲಿ ಧನಾತ್ಮಕ ಚಟುವಟಿಕೆಗಳನ್ನು ಸಹ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಸ್ಥಾನಿಕ ಆಯುಕ್ತ ಜಿ..ವಿಜಯಕುಮಾರ್ ಮಾತನಾಡಿ, ಹೊಂಗಿರಣ ಸಂಸ್ಥೆ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ನಾಟಕಗಳು ಹಾಗೂ ಹಲವಾರು ಕಲೆಗಳ ಮುಖಾಂತರ ಸಾಕಷ್ಟು ಜನ ಪ್ರತಿಭೆಗಳಿಗೆ ಅವಕಾಶ ನೀಡಿದೆ ಎಂದರು.
ಶ್ರೀ ಸಿದ್ದೋಜಿ ರಾವ್ ಗಂಗಾಬಾಯಿ ಪೌಂಡೇಷನ್ ವತಿಯಿಂದ ಹಲವಾರು ಸಹಕಾರಗಳನ್ನು ನೀಡುವುದರ ಮುಖಾಂತರ ಇಂತಹ ಶಿಬಿರಗಳನ್ನು ಸಚಿನ್ ಅವರು ಪ್ರೋತ್ಸಾಹಿಸುತ್ತಿರುವುದು ಅಭಿನಂದನಾರ್ಹ ಎಂದರು. ರಂಗಭೂಮಿ ಕಲಾವಿದ ಸಾಸ್ವೆಹಳ್ಳಿ ಸತೀಶ್, ಹೊಂಗಿರಣ ಕಲಾವಿದ ಚಂದ್ರಶೇಖರ್ ಗೋಣಿಗೆರೆ, ಕಿರುತೆರೆ ಕಲಾವಿದ ಚಂದ್ರಶೇಖರ್ ಶಾಸ್ತ್ರಿ ಹಾಗೂ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಪದಾಧಿಕಾರಿಗಳು, ಹೊಂಗಿರಣ ತಂಡದ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.
India Scouts and Guides ಮಕ್ಕಳಲ್ಲಿನ ಮೊಬೈಲ್, ಕಂಪ್ಯೂಟರ್ ಗೀಳು ತಪ್ಪಿಸಲು ಬೇಸಿಗೆ ಶಿಬಿರ ಸಹಕಾರಿ- ಆರ್.ಕೆ. ಸಿದ್ಧರಾಮಣ್ಣ
Date: