Sunday, December 7, 2025
Sunday, December 7, 2025

Kannada Sahitya Parishad ಕಸಾಪ ಅಧ್ಯಕ್ಷರನ್ನು ಸಭೆಯಲ್ಲಿ ಪ್ರಶ್ನೆ ಮಾಡಿದ್ದು ತಪ್ಪೆ? ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಪ್ರತಿಕ್ರಿಯೆ

Date:

Kannada Sahitya Parishad ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ವಿರುದ್ಧ
ಕಸಾಪ ರಾಜ್ಯಾಧ್ಯಕ್ಷರು ನೀಡಿರುವ ಶೋಕಾಶ್ ನೋಟೀಸ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ
ಕನ್ನಡಪರ ಸಂಘಟನೆಗಳು, ಸಾಹಿತ್ಯಾಸಕ್ತರು, ಬರಹಗಾರರು, ಕಸಾಪ ಸದಸ್ಯರು, ಹಿರಿಯ ಸಾಹಿತಿಗಳು ಸೇರಿದಂತೆ
ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದು, ರಾಜ್ಯಾಧ್ಯಕ್ಷ ಸರ್ವಾಧಿಕಾರಿ
ಧೋರಣೆಯನ್ನು ಖಂಡಿಸುತ್ತಿದ್ದಾರೆ.
ರಾಜ್ಯಾಧ್ಯಕ್ಷರ ಬೈಲಾ ತಿದ್ದುಪಡಿ ಸೇರಿದಂತೆ ಇಡೀ ಸಾಹಿತ್ಯ ಪರಿಷತ್ತನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಜೊತೆಗೆ ರಾಜಕೀಯ ಪಕ್ಷವೊಂದರ ಅಂಗವನ್ನಾಗಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ಇಂತಹ ಆಕ್ರೋಶ ಇಡೀ ರಾಜ್ಯದಲ್ಲಿ ವ್ಯಕ್ತವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಇಂದು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರಿಗೆ ಶಿವಮೊಗ್ಗ ಸಾಹಿತ್ಯ ಗ್ರಾಮ ಸೇರಿದಂತೆ ಎಲ್ಲಾ ಮಾಹಿತಿಗಳ ದಾಖಲೆಗಳೊಂದಿದೆತಮ್ಮ ಮನದಾಳದ ಮಾತು ವ್ಯಕ್ತಪಡಿಸಿದ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಿ.ಮಂಜುನಾಥ್ ಅವರು, ಈಗಾಗಲೇ ಅಧ್ಯಕ್ಷರು ನನಗೆ ಶೋಕಾಸ್
Kannada Sahitya Parishad ನೋಟೀಸ್ ನೀಡಿದ್ದಾರೆ. ಇತ್ತೀಚೆಗೆ ಕಸಾಪ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕಾರಿ
ಸಮಿತಿ ಸಭೆಯಲ್ಲಿ ನಾನು ಪ್ರಶ್ನೆ ಮಾಡಿದ್ದೇ ತಪ್ಪು ಎಂದು ಭಾವಿಸಿಕೊಂಡಿದ್ದಾರೆ.
ಮತ್ತು ರಾಜ್ಯಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ತಮ್ಮನ್ನು ಬೆಂಬಲಿಸಿಲ್ಲ ಎಂಬ ಕಲ್ಪನೆಯೂ ಅವರಿಗಿದೆ. ಆದ್ದರಿಂದ ವಿನಾಕಾರಣ ಚುನಾವಣೆಯ ಮೂಲಕ ಪ್ರಜಾಪ್ರಭುತ್ವ
ರೀತಿಯಲ್ಲಿ ಆಯ್ಕೆಯಾದ ನನಗೆ ಈ ರೀತಿಯ ನೋಟೀಸ್ ನೀಡುವ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಅವರ ನೋಟೀಸ್‌ಗೆ ನಾನು ಒಂದು ಉತ್ತರವನ್ನು ನೀಡಿದ್ದೇನೆ. ನಾನು ಅವರಲ್ಲಿ ಕೇಳಿಕೊಂಡಿದ್ದು ಏನೆಂದರೆ ಮಾ.21ರಂದು ಕಸಾಪ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕಾರಿ
ಸಮಿತಿ ಸಭೆಯ ನಡವಳಿಕೆಯ ದೃಢೀಕೃತ ಪ್ರತಿಯನ್ನು ನನಗೆ ಕೊಡಿ ಅಲ್ಲಿ ಏನೂ
ತೀರ್ಮಾನವಾಗಿದೆಂಬುದೇ ನನಗೆ ತಿಳಿಯಬೇಕು. ಅದು ತಿಳಿಯದ ಹೊರತು ಪೂರ್ಣ
ಪ್ರಮಾಣದಲ್ಲಿ ನಿಮ್ಮ ನೋಟೀಸ್‌ಗೆ ಉತ್ತರ ಕೊಡಲು ನನಗೆ ಸಾಧ್ಯವಿಲ್ಲ ಎಂದಿದ್ದಾರೆ.
ಚುನಾವಣೆ ಮುಗಿದ ಮೇಲೆ ರಾಜ್ಯಾಧ್ಯಕ್ಷರ ಮತ್ತು ಶಿವಮೊಗ್ಗ ಜಿಲ್ಲಾಧ್ಯಕ್ಷರ ನಡುವೆ
ಒಂದು ರೀತಿಯ ಶೀತಲ ಸಮರವೇ ನಡೆದಿತ್ತು. ಕೇಂದ್ರ ಅಧ್ಯಕ್ಷರ ಸರ್ವಾಧಿಕಾರದ ನಿಲುವನ್ನು
ಈಗಾಗಲೇ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಹಲವು ಜಿಲ್ಲಾಧ್ಯಕ್ಷರು ಮತ್ತು
ಸಾಹಿತ್ಯಾಭಿಮಾನಿಗಳು ಇದನ್ನು ಖಂಡಿಸಿದ್ದಾರೆ. ಶಿವಮೊಗ್ಗದಲ್ಲಿ ನೆನ್ನೆಯೂ ಕೂಡ ನಾಡೋಜ ಕುಂ. ವೀರಭದ್ರಪ್ಪ ಅವರು ಮಹೇಶ್ ಜೋಷಿಯವರ ವಿರುದ್ಧ ಹರಿಹಾಯ್ದು ಅವರದು
ಹಿಟ್ಲರ್ ಸಂಸ್ಕೃತಿ ಎಂದು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದಲ್ಲದೆ,
ಜಿಲ್ಲೆಯ ಅನೇಕ ಸಾಹಿತಿಗಳು, ಬರಹಗಾರರು, ಪ್ರಗತಿಪರರು ಕಸಾಪ ರಾಜ್ಯಾಧ್ಯಕ್ಷರ
ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.
ಸಾಹಿತ್ಯ ಗ್ರಾಮಕ್ಕೆ ಸಂಬಂಧಿಸಿದಂತೆ ಕೆಲವು ಆರೋಪಗಳು ನಿಮ್ಮ ಮೇಲೆ ಇವೆಯಲ್ಲ ಎಂಬ
ಪ್ರಶ್ನೆಗೆ ಉತ್ತರಿಸಿದ ಅವರು, ಸಾಹಿತ್ಯಾಗ್ರಾಮಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ
ಒಂದು ಕೋಟಿ ರೂ. ಅನುದಾನ ನೀಡಿತ್ತು. ಅದರ ಸಂಪೂರ್ಣ ದಾಖಲೆಯನ್ನು ನಾನು ನೀಡಿದ್ದೇನೆ.
ಅದಕ್ಕೆ ಸಂಬಂಧಿಸಿದಂತೆ ಟೆಂಡರ್‌ನಿಂದ ಹಿಡಿದು ಕಾಮಗಾರಿ ಮುಗಿಯುವ ತನಕದ ಎಲ್ಲಾ
ದಾಖಲೆಗಳನ್ನು ಪೋಟೋ ಸಮೇತ ಕಳಿಸಿದ್ದೇನೆ. ಎಲ್ಲಿಯೂ ಲೋಪವಾಗಿಲ್ಲ. ವಿಶೇಷ ಎಂದರೆ
ಒಂದು ಕೋಟಿಯ ಕಾಮಗಾರಿ ಮುಗಿದ ಮೇಲೆ ಕಾಮಗಾರಿ ನಿಂತಿತ್ತು. ಸರ್ಕಾರ ಮತ್ತೆ 50 ಲಕ್ಷ
ನೀಡಿದೆ. ಸರಿಯಾದ ದಾಖಲೆ ಇಲ್ಲದಿದ್ದರೆ ಮತ್ತೇಕೆ ಹಣ ನೀಡುತ್ತಿತ್ತು ಎಂದರು.
ಒಟ್ಟಾರೆ ಕನ್ನಡ ಸಾಹಿತ್ಯ ಪರಿಷತ್ ನ ದಿಕ್ಕು ಬದಲಾಗುತ್ತಿದೆ. ಮುಖ್ಯಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಮಧ್ಯ ಪ್ರವೇಶ ಮಾಡಿ ಈ ಶೀತಲ ಸಮರವನ್ನು ಮುಗಿಸಬೇಕಾಗಿದೆ. ಏಕೆಂದರೆ ಸಾಹಿತ್ಯ
ಪರಿಷತ್ತು ಸಮಾಜದ ಮತ್ತು ಸಮುದಾಯದ ಕಣ್ಮಣಿಯಾಗಿದೆ. ಇಲ್ಲಿ ಸರ್ವಾಧಿಕಾರಕ್ಕೆ ಜಾಗ
ಇರಬಾರದು ಅಲ್ಲವೇ?

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...