ವಮೊಗ್ಗ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದಿಂದ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದತ್ತಿ ದಾನಿಗಳಾದ ಶ್ರೀಮತಿ ಮಾನಸ ಶಿವರಾಮಕೃಷ್ಣರವರು ತಮ್ಮ ತಂದೆ ತಾಯಿಗಳಾದ ಶ್ರೀ ವಿ. ಎಚ್. ನಾಗೇಂದ್ರಜೋಯಿಸ್ ಮತ್ತು ಶ್ರೀಮತಿ ನಾಗರತ್ನಮ್ಮ ಎನ್. ಜೋಯಿಸ್ ಇವರ ಸ್ಮರಣಾರ್ಥ “ಪ್ರಬಂಧ”ಕುರಿತಾದ ದತ್ತಿ ಕಾರ್ಯಕ್ರಮ ನಡೆಸಿಕೊಟ್ಟರು. ಕು. ವಿಧಾತ್ರಿಯ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮಕ್ಕೆ ಸಂಘದ ಕಾರ್ಯದರ್ಶಿಗಳಾದ ಶ್ರೀಮತಿ ಮಾಲಾ ರಾಮಚಂದ್ರ ಎಲ್ಲರನ್ನೂ ಸ್ವಾಗತಿಸಿದರು. ಸಂಘದ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಸಿ. ಎಸ್. ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಘದ ಗೌರವಾಧ್ಯಕ್ಷರಾದ ಶ್ರೀಮತಿ ಎಸ್. ವಿ ಚಂದ್ರಕಲಾರವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಶ್ರೀಮತಿ ಮಾನಸ ಶಿವರಾಮಕೃಷ್ಣರವರು ಉದ್ಘಾಟಿಸಿ, ತಮ್ಮ ತಂದೆ ತಾಯಿಗಳ ಧನಾತ್ಮಕ ಹಾಗೂ ಸಮಾಜಮುಖಿ ಚಿಂತನೆಯ ಅನುಕರಣೀಯ ಗುಣಗಳನ್ನು ಸ್ಮರಿಸಿಕೊಂಡರು. ಶ್ರೀಮತಿ ಲಕ್ಷೀ ಶಾಸ್ತ್ರೀ ಯವರು ಪ್ರಬಂಧ ರಚನೆ -ವಿಸ್ತಾರ ಕುರಿತು ಸೋದಾಹರಣೆಗಳ ಮೂಲಕ ಸವಿಸ್ತಾರವಾಗಿ ವಿವರಿಸಿದರು. ಲೇಖಕಿ ಸು. ವಿಜಯಲಕ್ಷೀ ಯವರು ಸೊಗಸಾದ ಸ್ವರಚಿತ ಪ್ರಬಂಧ ಮಂಡಿಸಿದರು. ಖ್ಯಾತ ಗಾಯಕಿಯರಾದ ಶ್ರೀಮತಿ ವಿಜಯಾ ಕಾಂತೇಶ್, ಸುಜಯಾ ರಾಧಾಕೃಷ್ಣ, ಅಂಬಿಕಾ ದೇವರಾಜ್ ಸುಶ್ರಾವ್ಯವಾಗಿ ಭಾವಗೀತೆಗಳನ್ನು ಹಾಡಿದರು. ಶ್ರೀಮತಿ ಆಶಾಲತಾರವರು ನಿರೂಪಣೆ ಹಾಗೂ ವಂದನಾರ್ಪಣೆ ಮಾಡಿದರು.
ದತ್ತಿ ನಿಧಿ ಕಾರ್ಯಕ್ರಮಗಳು ಸಮಾಜಮುಖಿಯಾಗಿರಲಿ-ಮಾನಸ ಶಿವರಾಮಕೃಷ್ಣ
Date: