VISL Shivamogga ವಿಐಎಸ್ ಎಲ್ ವತಿಯಿಂದ ಡಾ ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಎಲ್. ಸುಂದರವಡಿವೇಲು, ಮಹಾಪ್ರಬಂಧಕರು (ನಿರ್ವಹಣೆ ಮತ್ತು ಐಇಡಿ ) ಮತ್ತು ವಿಐಎಸ್ ಎಲ್ ಕಾರ್ಮಿಕರ ಸಮನ್ವಯಾಧಿಕಾರಿ, ಶ್ರೀ ಜೆ. ಜಗದೀಶ, ಅಧ್ಯಕ್ಷರು, ವಿಐಎಸ್ ಎಲ್ ಕಾರ್ಮಿಕರ ಸಂಘ, ಶ್ರೀ ಪಾರ್ಥಸಾರಥಿ ಮಿಶ್ರ, ಅಧ್ಯಕ್ಷರು , ಅಧಿಕಾರಿಗಳ ಸಂಘ, ಶ್ರೀ ಎಸ್.ಸಿ.ಓ. ಶ್ರೀನಿವಾಸ್, ಅಧ್ಯಕ್ಷರು, ವಿಐಎಸ್ ಎಲ್ ಅಸೋಸಿಯೇಷನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ ಬಿ.ಆರ್. ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಮರ್ಪಿಸಿದರು.
ಶ್ರೀ ಎಲ್. ಸುಂದರವಡಿವೇಲು, ಮಹಾಪ್ರಬಂಧಕರು (ನಿರ್ವಹಣೆ ಮತ್ತು ಐಇಡಿ ) ಮತ್ತು ವಿಐಎಸ್ ಎಲ್ ಕಾರ್ಮಿಕರ ಸಮನ್ವಯಾಧಿಕಾರಿ ಸ್ವಾಗತಿಸಿದರು ಮತ್ತು ಶ್ರೀಮತಿ ಕೆ.ಎಸ್. ಶೋಭ, ಉಪಪ್ರಬಂಧಕರು (ಮಾನವ ಸಂಪನ್ಮೂಲ) ವಂದನಾರ್ಪನೆಗೈದರು.
ಶ್ರೀ ಬಿ.ಎಲ್. ಚಂದ್ವಾನಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಡಾ|| ಬಿ.ಆರ್. ಅಂಬೇಡ್ಕರ್ ಅವರ ಜೀವನದಿಂದ ಸಂಕ್ಷಿಪ್ತ ಕಲಿಕಾ ಅಂಶಗಳನ್ನು ನೀಡಿದರು ಮತ್ತು ವಿಐಎಸ್ ಎಲ್ ನಲ್ಲಿ ನೌಕರರಿಗೆ ವಿಸ್ತರಿಸಿದ ಕಲ್ಯಾಣ ಕ್ರಮಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ನವೀನ್ ರಾಹುಲ್, ಹಿರಿಯ ಪ್ರಬಂಧಕರು (ನಗರಾಡಳಿತ), ಶ್ರೀ ಎಸ್.ಸಿ.ಓ. ಶ್ರೀನಿವಾಸ್ ಶ್ರೀ ಜೆ. ಜಗದೀಶ ಮತ್ತು ಶ್ರೀ ಪಾರ್ಥಸಾರಥಿ ಮಿಶ್ರ ಮಾತನಾಡಿದರು.
VISL Shivamogga ಶ್ರೀ ಎಮ್.ಪಿ. ನಾಗೇಂದ್ರಪ್ಪ, ಶ್ರೀ ಜಗದೀಶ್ ಬಡಿಗೇರ್, ಶ್ರೀ ಕೊರಮಾರ ಶ್ರೀ ಚಂದ್ರಕಾಂತ, ಕು.ಎನ್.ಪ್ರತೀಕ, ಕು. ಸೋನಾಕ್ಷಿ.ಸಿ.ಕೆ, ಮಾ.ನಿತಿನ್.ಸಿ.ಕೆ, ಮತ್ತು ಕು.ಜಾಹ್ನವಿ ಇವರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
2024-25 ನೇ ಸಾಲಿನಲ್ಲಿ ವಿಐಎಸ್ ಎಲ್ ನಲ್ಲಿ ಉನ್ನತ ಸಾಧನೆಗೈದ ವಿಐಎಸ್ ಎಲ್ ನೌಕರರಿಗೆ ಮತ್ತು ಶೈಕ್ಷಣಿಕ ಸಾಧನೆಗೈದ ಅವರ ಮಕ್ಕಳಿಗೆ ಹಾಗೂ ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ನೀಡಲಾಯಿತು.
ಶ್ರೀಮತಿ ಗಿರಿಜಾ, ಸುರಕ್ಷತಾ ಇಲಾಖೆ ಕಾರ್ಯಕ್ರಮವನ್ನು ನಿರೂಪಿಸಿದರು.ವಿಐಎಸ್ ಎಲ್ ಮಾನವಸಂಪನ್ಮೂಲ ಇಲಾಖೆ ಕಾರ್ಯಕ್ರಮವನ್ನು ಆಯೋಜಿಸಿತ್ತು.ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಯ ಅಂಗವಾಗಿ 500 ಹೈಬ್ರೀಡ್ ನುಗ್ಗೆ, ಪಪಾಯ, ತುಳಸಿ ಮತ್ತು ಹೊಂಗೆ ಸಸಿಗಳನ್ನ ಸಾರ್ವಜನಿಕರಿಗೆ ವಿಐಎಸ್‌ಎಲ್ ಮುಖ್ಯ ದ್ವಾರದ ಬಳಿ ಮಧ್ಯಾನ್ಹ 2 ಘಂಟೆಯಿಂದ ಸಂಜೆ 5 ಘಂಟೆವರೆಗೆ ಉಚಿತವಾಗಿ ವಿತರಿಸಲಾಯಿತು.