Sahyadri Narayan Multispeciality Hospital ಶಿವಮೊಗ್ಗ, ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು, ಕ್ಯಾನ್ಸರ್‌ನಿಂದ ಗುಣಮುಖರಾದವರಿಗಾಗಿ (ಸರ್ವೈವರ್ಸ್) ತನ್ನ ಮಾಸಿಕ ‘ಸರ್ವೈವರ್ಸ್ ಕ್ಲಿನಿಕ್ ‘ ಅನ್ನು ಏಪ್ರಿಲ್ 17 ರಂದು ಮಧ್ಯಾಹ್ನ 2:00 ರಿಂದ 4:00 ಗಂಟೆಯವರೆಗೆ ಆಸ್ಪತ್ರೆಯ ಹರಕೆರೆ ಆವರಣದಲ್ಲಿ ಆಯೋಜಿಸಿದೆ.
ಈ ವಿಶೇಷ ಸಮಾಲೋಚನಾ ಕಾರ್ಯಕ್ರಮದಲ್ಲಿ, ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಭಟ್ ಕೆ. ಅವರು ಮಧ್ಯಾಹ್ನ 2:00 ಗಂಟೆಗೆ “ಕ್ಯಾನ್ಸರ್ ನಂತರದ ನೆಮ್ಮದಿ ಮತ್ತು ಸಂತಸ: ಭಾವನಾತ್ಮಕ ಏರಿಳಿತಗಳ ನಿರ್ವಹಣೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿ ವಿಭಾಗದ ವೈದ್ಯೆ ಡಾ. ಅಪರ್ಣಾ ಶ್ರೀವತ್ಸ ಅವರು ಕ್ಯಾನ್ಸರ್ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವವರಿಗೆ ವೈದ್ಯಕೀಯ ಸಲಹೆ ಮತ್ತು ಸಮಾಲೋಚನೆ ನಡೆಸಿಕೊಡಲಿದ್ದಾರೆ.
ಈ ಕ್ಲಿನಿಕ್‌ನಲ್ಲಿ ಭಾಗವಹಿಸಲು ಆಸಕ್ತರು ಎನ್‌ಎಚ್ ಕೇರ್ ಆ್ಯಪ್ (NH Care App) ಮೂಲಕ ಅಥವಾ 18003090309 ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
Sahyadri Narayan Multispeciality Hospital ಕಾರ್ಯಕ್ರಮವನ್ನು ಆಸ್ಪತ್ರೆಯ ‘ಕ್ಯಾನ್ಸರ್ ಗೆ ಆನ್ಸರ್’ (Cancer Ge Answer) ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು, ಇದರಿಂದ ಭಾಗವಹಿಸಲು ಸಾಧ್ಯವಾಗದವರೂ ವೀಕ್ಷಿಸಬಹುದು.