Ambedkar Jayanti 2025 ಡಾ|| ಬಿ.ಆರ್. ಅಂಬೇಡ್ಕರ್ ಅವರು ಸಮಾಜಿಕ ಸುಧಾರಣೆಯ ಪ್ರಭಲ ಪ್ರತಿಪಾದಕರು – ಎಸ್.ಸಿ ರಾಮಚಂದ್ರ.
ರೋಟರಿ ಪೂರ್ವ ಆಂಗ್ಲ ಮಾದ್ಯಮ ಶಾಲೆಯಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಅವರ ೧೩೪ ನೇ ಜಯಂತಿ ಸಮಾರಂಭವನ್ನು ಆಚರಿಸಲಾಯಿತು . ಈ ಸಮಾರಂಭದಲ್ಲಿ ರೋಟರಿ ಪೂರ್ವ ಆಂಗ್ಲ ಮಾದ್ಯಮ ಶಾಲೆಯ ಕಾರ್ಯದರ್ಶಿ ಎಸ್.ಸಿ ರಾಮಚಂದ್ರರವರು ಮಾತನಾಡುತ್ತ ಡಾ|| ಬಿ.ಆರ್. ಅಂಬೇಡ್ಕರ್ ರವರು ಭಾರತದÀ ಸಂವಿಧಾನದ ಶಿಲ್ಪಿ ಅಷ್ಟೆಅಲ್ಲ ಆಧುನಿಕ ಭಾರತದÀ ಸೃಷ್ಷಿಕರ್ತರು ಶೇಷ್ಠ ಸಮಾಜ ಸುಧಾರಕರಾಗಿದ್ದ ಅಂಬೇಡ್ಕರ್ ಅವರು ಸಮಾಜಿಕ ಸುಧಾರಣೆಯ ಪ್ರಭಲ ಪ್ರತಿಪಾದಕರಾಗಿದ್ದರು. ಭಾರತದ ಮೊದಲ ಕಾನೂನು ಮಂತ್ರಿಯಾಗಿ ಕೇವಲ ದಲಿತ ಸಮುದಾಯಕ್ಕೆ ಮಾತ್ರವಲ್ಲದೆ, ಪ್ರಪಂಚದ ಎಲ್ಲಾ ಶೋಷಿತ ವರ್ಗಕ್ಕೆ ವಿಮೋಚಕನೊಬ್ಬನು ತೋರಿಸುವ ದಿವ್ಯ ಮಾರ್ಗದರ್ಶಕರಾಗಿದ್ದರು ಎಂದು ಹೇಳುತ್ತ ಡಾ|| ಬಿ.ಆರ್. ಅಂಬೇಡ್ಕರ್ ರವರು ರಾಷ್ಷçಕೆ ನೀಡಿದ ಕೊಡುಗೆಯನ್ನು ಮರೆಯಲಾಗದು. ಈ ಕಾರಣಕ್ಕಾಗಿ ಭಾರತದ ಅತ್ಯುನ್ನತ ಪದವಿಯಾದ ಭಾರತ ರತ್ನಕ್ಕೆ ಭಾಜನರಾಗಿರುತ್ತಾರೆಂದು ತಿಳಿಸಿದರು. ಬಹಳ ಮುಖ್ಯವಾಗಿ ರಾಜಕೀಯ ಅಧಿಕಾರವನ್ನು ಸಮಾನತೆಯ ಆಧಾರದ ಮೇಲೆ ಇತರರ ಜೊತೆ ಹಂಚಿಕೊAಡಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾದ್ಯವೆಂದು ಅಭಿಪ್ರಾಯ ಪಟ್ಟರು.
Ambedkar Jayanti 2025 ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಉಪದ್ಯಕ್ಷರಾದ ಡಾ| ಪರಮೇಶ್ವರ ಶಿಗ್ಗಾವ್ ಅವರು ಮಾತನಾಡುತ್ತ ಡಾ|| ಬಿ.ಆರ್. ಅಂಬೇಡ್ಕರ್ ರವರು ಸಮಾಜ ಸುಧಾರಣೆಯ ಪ್ರತಿಪಾದಕರಲ್ಲದೆ ಶ್ರೇಷ್ಠ ದಾರ್ಶನಿಕ ಮತ್ತು ತ್ತತ್ವಙ್ಞನಿ ಎಂದು ಭಾರತಕ್ಕೆ ಮಾತ್ರವಲ್ಲದೆ ಅವರು ಇಡೀ ಪ್ರಪಂಚದಲ್ಲಿರುವ ಶೋಷಿತ ಸಮಾಜದ ಆಶಾಕಿರಣವಾಗಿದ್ದರೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಖಜಾಂಜಿಯಾದ ರೊ.ಜಿ ವಿಜಯ ಕುಮಾರ್ ಅವರು ಮಾತನಾಡುತ್ತ, ಡಾ|| ಬಿ.ಆರ್. ಅಂಬೇಡ್ಕರ್ ರವರು ಅಸಮಾನತೆಯ ವಿರುದ್ಧ ದಲಿತರ ಹಕ್ಕುಗಳ ಪ್ರತಿಪಾದಕರಾಗಿದ್ದರೆಂದು ದಲಿತರ ಹಕ್ಕುಗಳ ಸ್ಥಾಪನೆಗಾಗಿ ನಿರಂತರ ಹೋರಾಟ ಮಾಡಿದವರಾಗಿದ್ದಾರೆಂದು ತಿಳಿಸಿದರು.
ಸಮರಂಭದಲ್ಲಿ ರೋಟರಿ ಪೂರ್ವ ಎಜುಕೇಷನಲ್ ಟ್ರಸ್ಟ್ನÀ ಸಹಕಾರ್ಯದರ್ಶಿ ಶ್ರೀಮತಿ ನಾಗವೇಣಿ ಪ್ರಾಂಶುಪಾಲರಾದ ಶ್ರೀ ಸರ‍್ಯನಾರಾಯಣ್ ಅವರು ಉಪಸ್ಥಿತರಿದ್ದರು. ಸಮಾರಂಭಕ್ಕೆ ಆಗಮಿಸಿದ ಎಲ್ಲಾರನನ್ನು ಶ್ರೀಮತಿ ಕಾವ್ಯ ಸಹಶಿಕ್ಷಕಿ ಸ್ವಾಗತಿಸಿ ಕೊನೆಯಲ್ಲಿ ಶ್ರೀಮತಿ ದೀಪಿಕಾ ಸಹಶಿಕ್ಷಕಿ ಇವರ ವಂದನಾರ್ಪಣೆಯೊAದಿಗೆ ಸಮಾರಂಭವನ್ನು ಮುಕ್ತಾಯಗೊಳಿಸಲಾಯಿತು.
Ambedkar Jayanti 2025 ಪ್ರಪಂಚದ ಎಲ್ಲಾ ಶೋಷಿತರಿಗೆ ವಿಮೋಚನಾ ಮಾದರಿಪುರುಷ,ಡಾ.ಅಂಬೇಡ್ಕರ್- ಎಸ್.ಸಿ.ರಾಮಚಂದ್ರ
Date: