Nittur hanging bridge ತೂಗು ಸೇತುವೆ ಎಂಬ ತೂಗು ಕತ್ತಿಯ ಮೇಲೆ ಮೂರು ಗ್ರಾಮಗಳ ಜನರ ಸಂಚಾರ ಲಿಂಗನಮಕ್ಕಿ ಆಣೆ ಕಟ್ಟಿಗೆ ತಮ್ಮ ಬದುಕನ್ನೆ ಬಾಗಿನದ ರೀತಿಯಲ್ಲಿ ಅರ್ಪಿಸಿದವರ ಜೀವನ ಈಗ ಅತಂತ್ರವಾಗಿದೆ. ದೀಪದ ಬುಡದಲ್ಲಿ ಕತ್ತಲೆ ಎನ್ನುವಂತೆ ಕಗ್ಗತ್ತಲೆಯ ನರಕದಲ್ಲೆ ಬದುಕುವಂತಾಗಿದೆ ನಾಡಿಗೆ ಬೆಳಕು ಕೊಟ್ಟವರೀಗ ಅಂಧಕಾರದಲ್ಲಿ ಮುಳುಗಿದ್ದಾರೆ. ರಾಜ್ಯದ ಎರಡನೇ ಅತಿ ಉದ್ದದ ತೂಗುಸೇತುವೆ ಈಗ ನಿರ್ವಹಣೆ ಇಲ್ಲದೆ ನಿರ್ಲಕ್ಷ್ಯಕ್ಕೀಡಾಗಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಿಟ್ಟೂರು ತೂಗುಸೇತುವೆ ಇದೆ.
ಅನುದಾನ ಬಿಡುಗಡೆಯಾಗಿ ವರ್ಷವಾದ್ರೂ ಕೆಲಸ ಮಾತ್ರ ಮರಿಚೀಕೆ ಈ ವಿಚಾರವಾಗಿ ಈ ಹಿಂದೆ ಎಂಎಲ್ಎ ಅಗಿದ್ದ ಹಾಲಪ್ಪರನ್ನ ಈಗಿನ ಶಾಸಕ ಬೇಳೂರು ಗೋಪಾಲಕೃಷ್ಣ ಟೀಕಿಸಿದ್ದರು. ಅಂದು ತೂಗುಸೇತುವೆ ದುರಸ್ಥಿ ಮಾಡುವಂತೆ ಒತ್ತಡ ಹಾಕಿದ್ದ ಬೇಳೂರು ಇಂದು ಸೈಲೆಂಟ್ ಆಗಿದ್ದರಾರೆ. ಈ ಜಾಣತನ ಯಾಕೋ ಗೊತ್ತಿಲ್ಲ. ಈಗ ತಾವೇ ಎಂಎಲ್ ಎ ಅಗಿ ಎರಡು ವರ್ಷ ಕಳೆದರೂ ದುರಸ್ಥಿ ಕಾರ್ಯದ ಬಗ್ಗೆ ತುಟಿಯೆರಡು ಮಾಡಿಲ್ಲ. ಒಟ್ಟಿನಲ್ಲಿ ಮಲೆನಾಡಿನ ಹಿನ್ನೀರ ಜನರ ಸಂಪರ್ಕ ಕೊಂಡಿ ತೂಗುಸೇತುವೆಗೆ ಸಂಚಕಾರ ಬಂದಿದೆ. ಈಗಲೇ ಎಚ್ಚೆತ್ತು ನಿರ್ವಹಣೆ ಮಾಡದೆ ಇದ್ದರೆ ಬರಲಿರುವ ಮಳೆಗಾಲದಲ್ಲಿ ಕಂಟಕ ಎದುರಾಗುವುದು ಗ್ಯಾರಂಟಿ.
Nittur hanging bridge ನಾಗೋಡಿ ಮತ್ತು ಹೆಬ್ಬಿಗೆ ಗ್ರಾಮಗಳನ್ನು ಸಂಪರ್ಕಿಸಲು 2011 ರಲ್ಲಿ ತೂಗು ಸೇತುವೆ ನಿರ್ಮಾಣವಾಗಿತ್ತು.
ಮಲೆನಾಡು ಅಭಿವೃದ್ಧಿ ಪ್ರಾಧಿಕಾರವು ಅಂದಿನಿಂದ ಇಂದಿನ ವರೆಗೂ ಒಮ್ಮೆಯೂ ದುರಸ್ಥಿ ಮಾಡದೇ ನಿರ್ಲಕ್ಷ್ಯ ತೋರುತ್ತಿದೆ ಎಂಬುದು ಗ್ರಾಮಸ್ಥರ ಒಳಗುದಿ. ಮುಳುಗಡೆ ಸಂತ್ರಸ್ತರ ಸಂಪರ್ಕಕೊಂಡಿ ತೂಗು ಸೇತುವೆ ಸಂಪೂರ್ಣ ಶಿಥಿಲವಾಗಿದೆ. ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ ಗ್ರಾಮಸ್ಥರು ಹೆಬ್ಬಿಗೆ, ಬರುವೆ, ಏಳಿಗೆ ಗ್ರಾಮಸ್ಥರಿಗೆ ಸಂಪರ್ಕ ಕಡಿತದ ಭೀತಿ ಎದುರಾಗಿದೆ. 2011 ರಿಂದ ತೂಗು ಸೇತುವೆಯ ರೋಪ್ ಗೆ ಒಮ್ಮೆಯೂ ಅಯಿಲ್ ಹಚ್ಚಿಲ್ಲ ,ನಿರ್ವಹಣೆಯ ಕೊರತೆ ಎದ್ದುಕಾಣುತ್ತಿದೆ. ತೂಗು ಸೇತುವೆಯ ಕಬ್ಬಿಣ ಸಂಪೂರ್ಣವಾಗಿ ತುಕ್ಕು ಹಿಡಿದಿದ್ದು ಸಂಚಾರಕ್ಕೆ ಸೂಕ್ತವಾಗಿಲ್ಲ ಸೇತುವೆಗೆ ಬಳಸಲಾಗಿರುವ ಮಧ್ಯದ ಕಡಪಗಳಲ್ಲೆವೂ ಬಿರುಕು ಬಿಟ್ಟುವೆ
ಪ್ರವಾಸಿಗರ ನೆಚ್ಚಿನ ಸ್ಥಳವಾಗಿರುವ ಹಿನ್ನೀರಿನ ಮೇಲಿರುವ ತೂಗುಸೇತುವೆಯು ಸ್ವತಃ ಪ್ರವಾಸಿಗರನ್ನ ಸೆಳೆಯಲು ಅಂಜಿಕೊಳ್ಳುತ್ತಿದೆ.
ಪ್ರವಾಸಿಗರು
ಸಾವಿರ ಸಂಖ್ಯೆಯಲ್ಲಿ ತೂಗುಸೇತುವೆ ವೀಕ್ಷಣೆಗೆ ಆಗಮಿಸುತ್ತಾರೆ.
ಈಗ ಬೇಸಿಗೆಯಲ್ಲಿ
ತೂಗುಸೇತುವೆ
ಕಾಯಕಲ್ಪಕ್ಕೆ ಕಾಯುತ್ತಿದೆ.
ಸರ್ಕಾರ,ಜನನಾಯಕರು ಶೀಘ್ರ ಈ ಕಡೆ ನೋಡಿ ಎಂಬುದೇ ಎಲ್ಲರ ಕಲಕಳಿಯಾಗಿದೆ..