B.Y. Vijayendra “ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಳೆಗೂ ಜಗ್ಗದೇ ನಡೆದ ಜನಾಕ್ರೋಶ ಯಾತ್ರೆ”
ಶಿವಮೊಗ್ಗದಲ್ಲಿ ಶನಿವಾರ ರಾಜ್ಯದ ಭ್ರಷ್ಟ ಹಾಗೂ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸಲಾಯಿತು.
ಬೆಲೆ ಏರಿಕೆಯ ಮೂಲಕ ನಿತ್ಯವೂ ಜನಸಾಮಾನ್ಯರ ಜೇಬಿಗೆ ಕತ್ತರಿ ಪ್ರಯೋಗ ಮಾಡುತ್ತಿರುವ ನಿರ್ಧಾರಗಳು, ಅಭಿವೃದ್ಧಿ ಶೂನ್ಯ ಆಡಳಿತ, ಭ್ರಷ್ಟಾಚಾರ ಹಾಗೂ ಓಲೈಕೆ ರಾಜಕಾರಣಕ್ಕಾಗಿ ಸಮಸ್ತ ಹಿಂದೂಗಳಿಗೆ ದ್ರೋಹ ಬಗೆಯುತ್ತಿರುವ ಕಾಂಗ್ರೆಸ್ ಸರ್ಕಾರದ ನಿಲುವುಗಳನ್ನು ಖಂಡಿಸಿ ರಾಜ್ಯದ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು.
ಸುರಿಯುವ ಮಳೆಯ ನಡುವೆಯೂ ಸಾರ್ವಜನಿಕರು ಹಾಗೂ ಕಾರ್ಯಕರ್ತರು ತೋರಿದ ಆಕ್ರೋಶ ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಿಸಲೇಬೇಕೆಂಬ ಸಂಕಲ್ಪವನ್ನು ಸಾಕ್ಷೀಕರಿಸಿತು.
B.Y. Vijayendra ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಸಂಸದರಾದ ಶ್ರೀ ಗೋವಿಂದ ಕಾರಜೋಳ, ಸಂಸದರಾದ ಶ್ರೀ ಕೋಟಾ ಶ್ರನಿವಾಸ ಪೂಜಾರಿ, ಶ್ರೀ ಬಿ.ವೈ.ರಾಘವೇಂದ್ರ,ಮಾಜಿ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ, ಶಾಸಕರಾದ ಶ್ರೀ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ,ರಾಜ್ಯ ಉಪಾಧ್ಯಕ್ಷರಾದ ಶ್ರೀ ಹರತಾಳು ಹಾಲಪ್ಪ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷರಾದ ಕು.ಸಿ.ಮಂಜುಳಾ, ಮಾಜಿ ಶಾಸಕರಾದ ಶ್ರೀ ಅಶೋಕ್ ನಾಯಕ್, ಶ್ರೀ ಎಂ.ಡಿ.ಲಕ್ಷ್ಮೀನಾರಾಯಣ್, ವಿವಿಧ ಪ್ರಕೋಷ್ಠಕಗಳ ರಾಜ್ಯ ಸಂಚಾಲಕರಾದ ಶ್ರೀ ದತ್ತಾತ್ರಿ, ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್, ಸೇರಿದಂತೆ ರಾಜ್ಯ ಪದಾಧಿಕಾರಿಗಳು, ಪ್ರಮುಖರು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
