‘ಲಾವಣ್ಯ’ ಬೈಂದೂರು
ಹವ್ಯಾಸಿ ರಂಗದಲ್ಲೊಂದು
ಅಪೂರ್ವ ಸೇವೆ ಸಲ್ಲಿಸುತ್ತಿರುವ
ತಂಡದಿಂದನಾಯಿಕಳೆದಿದೆ…
RANGAYANA SHIVAMOGGA ಕಳೆದ ನಾಲ್ಕು ದಶಕಗಳಿಂದ ಸದ್ದುಗದ್ದಲವಿಲ್ಲದೆ ತನ್ನ ಕಲಾ ಸಾಧನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ‘ಲಾವಣ್ಯ’ ಬೈಂದೂರು. ರಂಗ
ಚಟುವಟಿಕೆ ಗಳನ್ನು ಮುಖ್ಯವಾಗಿರಿಸಿಕೊಂಡು ಅನೇಕ ಸಾಂಸ್ಕೃತಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸದ್ದಿಲ್ಲದೇ ಕಾರ್ಯ ನಿರ್ವಹಿಸುತ್ತಿದೆ.
ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕಲಾಸಂಸ್ಥೆ ಬೈಂದೂರಿನ ‘ಲಾವಣ್ಯ’. ಇದು ಕಳೆದ 48 ವರ್ಷಗಳಿಂದ ನಿರಂತರವಾಗಿ ರಂಗಚಟುವಟಿಕೆ ನಡೆಸುತ್ತ ಹವ್ಯಾಸಿ ರಂಗ
ಚರಿತ್ರೆಯಲ್ಲಿ ವಿಶಿಷ್ಟ ಸಾಧನೆ ಮೆರೆಯುತ್ತಿದೆ.1977 ರಲ್ಲಿ ಸ್ಥಾಪಿತವಾದ ಈ ಕಲಾಸಂಸ್ಥೆ ನಾಟಕ, ಸಂಗೀತ, ನೃತ್ಯ, ಯಕ್ಷಗಾನ ಮುಂತಾದ ಎಲ್ಲ ಕಲಾಪ್ರಕಾರಗಳನ್ನು ಪ್ರೋತ್ಸಾಹಿಸುತ್ತ ಬೈಂದೂರಿನ ಜನರಲ್ಲಿ ಸಾಂಸ್ಕೃತಿಕ ದಾಹ ಹುಟ್ಟಿಸಿದೆ. ಪ್ರತಿಯೊಂದು ಕಾರ್ಯಕ್ರಮವನ್ನೂ ಸ್ವಂತದ್ದೇ ಎನ್ನುವಷ್ಟು ಪ್ರೀತಿಯಿಂದ ಆದರಿಸುತ್ತಾರೆ ಇಲ್ಲಿನ ಜನ. ಇಂದಿನ ದೃಶ್ಯಮಾಧ್ಯಮಗಳಲ್ಲಿ ಎಷ್ಟೆಲ್ಲ ವೈವಿಧ್ಯಮಯ ಕಾರ್ಯಕ್ರಮಗಳು ಬರುತ್ತಿದ್ದರೂ ಅವನ್ನು ಬದಿಗೊತ್ತಿ ರಂಗದ ಮೇಲೆ ನಡೆಯುವ ಜೀವಂತ ಚಟುವಟಿಕೆಯನ್ನು ನೋಡುವ ಹಂಬಲವನ್ನು ಜೀವಂತವಾಗಿರಿಸುವಲ್ಲಿ ಲಾವಣ್ಯ ಬೈಂದೂರು ತನ್ನ ಲಾವಣ್ಯವನ್ನು ಇಂದಿಗೂ ಉಳಿಸಿಕೊಂಡಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಇಂದಿನ ದಿನಮಾನಗಳಲ್ಲಿ ಬದುಕಿನ ಬಂಡಿ ಎಳೆಯಲು ಊರು ತೊರೆದು ನಗರಗಳ ಕಡೆ ಮುಖ ಮಾಡುವುದು ಯುವ ಜನತೆಗೆ ಅನಿವಾರ್ಯವೆಂಬಂತಾಗಿದೆ. ಅಂತಹ ಸಂದರ್ಭದಲ್ಲೂ ರಂಗ
ಚಟುವಟಿಕೆ ಗಳ ಮೂಲಕ ಯುವಜನರನ್ನ ತನ್ನತ್ತ ಸೆಳೆದುಕೊಂಡು ಅವರಲ್ಲಿ ಸಾಂಸ್ಕೃತಿಕ ಮನೋಭಾವವನ್ನು ಬೆಳೆಸಿ, ಹಲವಾರು ಪ್ರತಿಭೆಗಳನ್ನು ಮುನ್ನೆಲೆಗೆ ತರುವಲ್ಲಿ `ಲಾವಣ್ಯ’ದ ಕಾರ್ಯ ಶ್ಲಾಘನೀಯ.
ನಾಲ್ಕು ದಶಕಗಳ ಹಿಂದೆ ಹವ್ಯಾಸಿ ಕಲಾವಿದರ ಕನಸಿನ ಕೂಸಾಗಿ ಜನ್ಮತಳೆದ ‘ಲಾವಣ್ಯ’, ಇಂದು ತನ್ನದೇ ಅಚ್ಚುಕಟ್ಟಾದ ಕಚೇರಿಯನ್ನು ಹೊಂದಿದೆ. ಯಾವುದೇ ರಾಜಾಶ್ರಯವಿಲ್ಲದೇ, ಸರ್ಕಾರದ ಧನಸಹಾಯವಿಲ್ಲದೇ ನಾಲ್ಕು ದಶಕಗಳನ್ನ ಪೂರೈಸಿದ್ದು ಕೇವಲ ರಂಗಾಸಕ್ತರ, ನಾಟಕಾಭಿಮಾನಿಗಳ, ಊರ ದಾನಿಗಳ ಪ್ರೋತ್ಸಾಹದಿಂದಲೇ ಎಂದರೆ ಇಲ್ಲಿನ ಜನರ ಅಭಿರುಚಿ ಮತ್ತು ಶ್ರದ್ಧೆ ಎದ್ದು ಕಾಣುತ್ತದೆ.
RANGAYANA SHIVAMOGGA ಇಲ್ಲಿಯವರೆಗೆ ೭೦ ನಾಟಕಗಳನ್ನು ರಂಗಕ್ಕೇರಿಸಿ, ೧೫೦ಕ್ಕೂ ಹೆಚ್ಚು ಪ್ರದರ್ಶನ ನೀಡಿರುವುದು ಇದರ ಹೆಗ್ಗಳಿಕೆ, ರೊಟ್ಟಿ ಋಣ, ಮಾವಮಾನ ಕಥೆ ಕೇಳು. ಟಿಂಗರ ಬುಡ್ಡಣ್ಣ, ಸಮಯಕ್ಕೊಂದುಸುಳ್ಳು. ನಾವೆಲ್ಲೋಗ್ಬೇಕು, ಉತ್ಸವ, ಚೋರಚರಣದಾಸ, ಏಕಲವ್ಯ, ಬೇಲಿ ಮತ್ತು ಹೊಲ, ನಾಯಿ ಕತೆ, ಬಾವಿ ಕಳೆದಿದೆ. ಪೊಲೀಸ್, ದೃಷ್ಟಿ. ಮರಣ ಮೃದಂಗ ಮುಂತಾದ ನಾಟಕಗಳು ನಾಡಿನ ಹಲವೆಡೆ ಹಲವಾರು ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿವೆ. “ಲಾವಣ್ಯ’ದ ಬಹುತೇಕ
ನಾಟಕಗಳು ೫ಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ‘ಲಾವಣ್ಯ’ ತಂಡವು ಅಘೋಷಿತ ರೆಪರ್ಟರಿ ತರಹ ಕೆಲಸ ಮಾಡುತ್ತಾ ಬಂದಿದೆ. ಗ್ರಾಮೀಣ ಭಾಗದಲ್ಲಿ ಪ್ರದರ್ಶನ ನೀಡಿ, ಸಾಮಾನ್ಯರಲ್ಲೂ ರಂಗಾಸಕ್ತಿಯನ್ನು ಪಸರಿಸುತ್ತಲಿದೆ. ಅಲ್ಲದೆ, ನಾಡಿನ ಹಲವಾರು ಹವ್ಯಾಸಿ ನಾಟಕ ತಂಡಗಳನ್ನು ಕರೆಸಿ ಬೈಂದೂರಿನಲ್ಲಿ ಪ್ರದರ್ಶನ ಏರ್ಪಡಿಸುತ್ತಲಿದೆ. ಮಕ್ಕಳ ರಂಗಶಿಬಿರ ಏರ್ಪಡಿಸಿ ವಿದ್ಯಾರ್ಥಿಗಳಿಗೂ ಸದಭಿರುಚಿ ಮೂಡಿಸುತ್ತಲಿದೆ.
‘ಲಾವಣ್ಯ’ ತಂಡ ನಾಡಿನ ಪ್ರತಿಷ್ಠಿತ ೨೨ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. ಉತ್ತಮ ನಾಟಕ, ನಿರ್ದೇಶನ, ಅಭಿನಯ, ಸಂಗೀತ, ರಂಗಸಜ್ಜಿಕೆ ಮುಂತಾದ ವಿಭಾಗಗಳಲ್ಲಿ ಸುಮಾರು ೧೨೦ಕ್ಕೂ ಹೆಚ್ಚು ಪಾರಿತೋಷಕಗಳನ್ನು ಗೆದ್ದಿದೆ. ರಂಗಭೂಮಿಯ ಖ್ಯಾತ ನಿರ್ದೇಶಕರನ್ನು ಕರೆಸಿ ರಂಗ ತರಬೇತಿ ಶಿಬಿರ ನಡೆಸಿದೆ. ಇದಕ್ಕೆ ಹೊರತಾಗಿ ಸಂಘಟನೆಯ ದಶಮಾನೋತ್ಸವ, ವಿಂಶತಿ, ಬೆಳ್ಳಿಹಬ್ಬ, ೩೦ನೇ ವರ್ಷ, ೩೨ನೇ ವರ್ಷ, ೪೦ನೇ ವರ್ಷಗಳನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಆಗೆಲ್ಲ ರಾಜ್ಯಮಟ್ಟದ ನಾಟಕ ಸ್ಪರ್ಧೆ, ನಾಟಕೋತ್ಸವ ನಡೆಸಿ ನಾಡಿನ ಗಮನ ಸೆಳೆದಿದೆ ಲಾವಣ್ಯ. ಅಲ್ಲದೆ, ಸಾಹಿತ್ಯ, ಸಮಾಜಸೇವೆ, ಶಿಕ್ಷಣ, ಕ್ರೀಡೆ, ಕಲೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರತಿವರ್ಷ ವಾರ್ಷಿಕೋತ್ಸವದಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸುತ್ತಿದೆ.
ಟಿ.ವಿ., ಕಂಪ್ಯೂಟರ್, ಮೊಬೈಲ್ ಮುಂತಾದ ಆಧುನಿಕ ಸೌಕರ್ಯಗಳಿಂದ ತನ್ನ ನಿಜಸೊಗಡನ್ನೇ ನಾಶಮಾಡಿಕೊಳ್ಳುತ್ತಿರುವ ಯುವಜನತೆಗೆ ಲಾವಣ್ಯ ಒಂದು ಜೀವ ಕಡಲು ಎನ್ನಬಹುದು. ಇಂದು ತನ್ನ ಸಾಂಸ್ಕೃತಿಕ ಶ್ರೀಮಂತಿಕೆ ನಾಶಮಾಡಿಕೊಳ್ಳುತ್ತ ನಗರಗಳ ಕಡೆ ಮುಖಮಾಡುತ್ತಿರುವ ಯುವಜನಾಂಗಕ್ಕೆ ಒಂದು ಮಾದರಿ ಈ ‘ಲಾವಣ್ಯ’. ಹಳ್ಳಿಗಳಲ್ಲಿ ಏನೂ ಇಲ್ಲ ಎಂದು ಅಸಡ್ಡೆ ಮಾಡಿಕೊಳ್ಳುವವರೇ ಇಂದು ಹೆಚ್ಚಾಗಿದ್ದಾರೆ. ಆದರೆ ಏನಿದೆ ಎಂದು ಕಂಡುಕೊಳ್ಳಲೂ ಒಂದಿಷ್ಟು ಸಹನೆ ಬೇಕು, ಒಂದಿಷ್ಟು ಜನರ ತ್ಯಾಗ ಬೇಕು. ಅದರಿಂದ ಊರಿಗೆ ಊರೇ ಆನಂದಿಸುತ್ತದೆ
ಎಂತಾದರೆ ಅದಕ್ಕಿಂತ ದೊಡ್ಡ ಸಾರ್ಥಕತೆ ಎಲ್ಲಿದೆ? ಅಲ್ಲವೇ!
ಇಂತಹ ಲಾವಣ್ಯ ತಂಡ ಮಲೆನಾಡಿಗೂ ಬರುತ್ತಿದೆ. ಇಂದು ಮೊಬೈಲ್ ಜೀವನದಿಂದಾಗಿ ಆಗುತ್ತಿರುವ ಸಾಮಾಜಿಕ ಪರಿಣಾಮಗಳು ಏನೆಲ್ಲ ಎಂಬುದನ್ನ ನಾಟಕ ರೂಪದಲ್ಲಿ ನಿಮ್ಮ ಮುಂದೆ ಪ್ರಸ್ತುತಪಡಿಸಲಿದೆ.
ರಾಜೇಂದ್ರ ಕಾರಂತರ ರಚನೆ ಮತ್ತು ನಿರ್ದೇಶನದಲ್ಲಿ ದೆಹಲಿಯ ಕನ್ನಡ ಭವನದಲ್ಲಿಯೂ ಲಾವಣ್ಯ ತಂಡದಿAದ ಪ್ರದರ್ಶನ ಕಂಡ ನಾಯಿಕಳೆದಿದೆ ನಾಟಕ ಏಪ್ರಿಲ್ ೧೯ ೨೦೨೫ರ ಶನಿವಾರ ಶಿವಮೊಗ್ಗ ನಗರದ ಕುವೆಂಪು ರಂಗಮAದಿರದಲ್ಲಿ ಅಜೇಯ ಸಂಸ್ಕೃತಿ ಬಳಗ ಪ್ರದರ್ಶನ ಏರ್ಪಡಿಸಿದೆ.
ಶಿವಮೊಗ್ಗದ ರಂಗಾಸಕ್ತರಿಗೆ ಇದೊಂದು ಸುವರ್ಣ ಅವಕಾಶವೇ ಸರಿ…
ಬರಹ: ಆದಿತ್ಯಪ್ರಸಾದ್ ಎಮ್. ಶಿವಮೊಗ್ಗ