Shimoga Chariot Festival ಶಿವಮೊಗ್ಗದ ಪ್ರತಿಷ್ಠಿತ ಗಾಂಧಿ ಬಜಾರಿನ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ. ಹಾಗೂ ಚೌಕಿ ಮಠದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕೆಂಡಾರ್ಚನೆ ಹಾಗೂ ಗುಗ್ಗಳ
ಇದೇ ಏಪ್ರಿಲ್ 12 ರ ಬೆಳಿಗ್ಗೆ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘ ಡಾ ವತಿಯಿಂದ ಪ್ರತಿಷ್ಠಿತ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ಮಹಾರಥೋತ್ಸವ
ಹಾಗೂ ಶ್ರೀ ವೀರಭದ್ರ ಸ್ವಾಮಿಯ ಮುಗಳ ಮತ್ತು ಕೆಂಡಾರ್ಚನೆ ಕಾರ್ಯಕ್ರಮ ತುಂಬಾ ವಿಜೃಂಭಣೆಯಿಂದ ನಡೆಯಿತು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯಡಿಯೂರು ಶ್ರೀಗಳಾದ ಶ್ರೀ ರೇಣುಕಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದು ರಥೋತ್ಸವ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ಎಸ್ ಎಸ್ ಜ್ಯೋತಿಪ್ರಕಾಶ್ ಮಾತನಾಡಿ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಥೋತ್ಸವ ಕ್ಕೆ ಬಂದು ಯಶಸ್ವಿಯಾಗಿ ನಡೆಸಿಕೊಟ್ಟರು. ಮುಂದಿನ ದಿನಗಳಲ್ಲಿ ಭಕ್ತಾದಿಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಆಶಿಸುತ್ತೇವೆ.
Shimoga Chariot Festival ಗೌರವ ಕಾರ್‍ಯದರ್ಶಿ ಎಸ್.ಪಿ ದಿನೇಶ್, ಸಮಾಜದ ನಿರ್ದೇಶಕರಾದ ರತ್ನಮ್ಮ,ಬಳ್ಳೇಕೆರೆ ಸಂತೋಷ್, ಬಾಳೆಕಾಯಿ ಮೋಹನ್. ಪಿ ರುದ್ರೇಶ್,ಶಾಂತ ಆನಂದ್ ಜಿ, ಕಾಯಕಯೋಗಿ ಚನ್ನಬಸಪ್ಪ, ಮರುಳೇಶ್ ,ಶಶಿಕುಮಾರ್ ,ವಿಜಯಕುಮಾರ್ ,ಹಾಲನಗೌಡರು. ಸಂಜಯ್ ಕುಮಾರ್ ಚೀಲೂರು ಚಂದ್ರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು ಪಲ್ಲಕ್ಕಿ ಉತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ. ನಂತರ ಚೌಕಿ ಮಠಕ್ಕೆ ಹೋಗಿ ವಾಪಸ್ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು. ರಥವನ್ನು ಗಾಂಧಿ ಬಜಾರೀನಾ ಪ್ರಮುಖ ಬೀದಿಗಳಲ್ಲಿ ಎಳೆಯುವುದರ ಮುಖಾಂತರ ಭಕ್ತರು ಬಸವೇಶ್ವರರಿಗೆ ಧಾರ್ಮಿಕ ಶ್ರದ್ಧೆ ಭಕ್ತಿಯಿಂದ ನಮಸ್ಕರಿಸಿದರು.
Shimoga Chariot Festival ಗಾಂಧಿ ಬಜಾರಿನ ಶ್ರೀಬಸವೇಶ್ವರ & ಶ್ರೀ ವೀರಭದ್ರಸ್ವಾಮಿ ರಥೋತ್ಸವ
Date: