Shivaganga Yoga Center ಶಿವಗಂಗಾ ಯೋಗಕೇಂದ್ರದ ನೂತನ ಅಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ, ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ ಆಯ್ಕೆಯಾಗಿದ್ದಾರೆ.
ಶಿವಗಂಗಾ ಯೋಗಕೇಂದ್ರವು ನಗರದಲ್ಲಿ ನಿಸ್ವಾರ್ಥವಾಗಿ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಶಿಬಿರಗಳನ್ನು ನಗರದ 35 ಬಡಾವಣೆಗಳಲ್ಲಿ ಉಚಿತವಾಗಿ ನಡೆಸಿಕೊಂಡು ಬರುತ್ತಿದೆ. ಧಾರ್ಮಿಕ, ಸಾಮಾಜಿಕ ಹಾಗೂ ಆರೋಗ್ಯ ಜಾಗೃತಿ ಶಿಬಿರಗಳನ್ನು ಆಯೋಜಿಸುತ್ತದೆ.
ಶಿವಗಂಗಾ ಯೋಗಕೇಂದ್ರ 21 ವರ್ಷಗಳಿಂದ ಶಿವಮೊಗ್ಗ ನಗರದಲ್ಲಿ ತರಬೇತಿ ನೀಡುತ್ತಿದೆ. ಪರ್ಫೆಕ್ಟ್ ಅಲಾಯ್ಸ್ ನ ದಿವಾಕರ್, ನಂತರ ನಂಜುಂಡಶೆಟ್ಟರ ಅಧ್ಯಕ್ಷತೆಯಲ್ಲಿ ಹಾಗೂ ಕಾರ್ಯದರ್ಶಿ ಎಸ್.ಎಸ್.ಜ್ಯೋತಿಪ್ರಕಾಶ್ ಮಾರ್ಗದರ್ಶನ ಹಾಗೂ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಗೌರವಾಧ್ಯಕ್ಷತೆಯಲ್ಲಿ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
Shivaganga Yoga Center ಸಾವಿರಾರು ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಿ ಮುನ್ನಡೆಯುತ್ತಿರುವ ಪ್ರತಿಷ್ಠಿತ ಸಂಸ್ಥೆಯ ಮೂರನೇ ಅಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ, ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ ಅವರನ್ನು ಎಲ್ಲ ಟ್ರಸ್ಟಿಗಳು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ಎಸ್.ರುದ್ರೇಗೌಡ ಅವರನ್ನು ಕೃಷಿನಗರ ಶಕ್ತಿ ಗಣಪತಿ ಯೋಗ ಕೇಂದ್ರದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ, ಬಳ್ಳೇಕೆರೆ ಸಂತೋಷ್, ಚಂದ್ರಶೇಖರಯ್ಯ, ಗಣಪತಿ ದೇವಸ್ಥಾನದ ಅಧ್ಯಕ್ಷ ಅರವಿಂದ್, ನೀಲಕಂಠರಾವ್, ಗಣಪತಿ, ಜಿ.ವಿಜಯಕುಮಾರ್, ಕಾಟನ್ ಜಗದೀಶ್ ಇತರರಿದ್ದರು.
Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಉದ್ಯಮಿ ಎಸ್.ರುದ್ರೇಗೌಡ ಆಯ್ಕೆ
Date: