Navodaya Vidyalaya ಪ್ರತಿ ಜಿಲ್ಲೆಗೆ ಒಂದು ಕೇಂದ್ರ ಸರ್ಕಾರದ ಉಚಿತ ಸಿಬಿಎಸ್‌ಇ ವಸತಿ ಶಾಲೆ ಇದ್ದು, 6ನೇ ತರಗತಿಯಿಂದ ಪಿಯುಸಿ 12ನೇ ತರಗತಿಯವರೆಗೆ ಗುಣಮಟ್ಟದ ಶಿಕ್ಷಣ ಉಚಿತವಾಗಿರುತ್ತದೆ.
ಈ ವಸತಿ ಶಾಲೆಗೆ ಪ್ರವೇಶ ಪರೀಕ್ಷೆಯ ಮೂಲಕ 80 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರಸ್ತುತ 5 ನೇ ತರಗತಿ ಓದುತ್ತಿರುವ ಮಕ್ಕಳು ಪ್ರವೇಶ ಪರೀಕ್ಷೆಗೆ ಅರ್ಹರಾಗಿರುತ್ತಾರೆ.
ನವೋದಯ ಶಾಲೆಯ ಪ್ರವೇಶ ಪರೀಕ್ಷಾ ತರಬೇತಿ ಪಡೆಯುವುದರಿಂದ ಮಕ್ಕಳು ಅತ್ಯಂತ ಪ್ರತಿಭಾನ್ವಿತರಾಗುತ್ತಾರೆ. ಮಕ್ಕಳ ಪ್ರತಿಭೆ , ಶಿಸ್ತು, ಸಮಯ ಪರಿಪಾಲನೆ, ಬೌದ್ಧಿಕ ಸಾಮರ್ಥ್ಯ, ಭಾಷಾ ಸಾಮರ್ಥ್ಯ ಹೆಚ್ಚಿಗೆ ಆಗುವುದರ ಜೊತೆಗೆ ಗಣಿತದಲ್ಲಿ ಪ್ರಾವೀಣ್ಯತೆ ಗಳಿಸುತ್ತಾರೆ.
Navodaya Vidyalaya ಸದ್ಗುರು ಅಕಾಡೆಮಿ ವತಿಯಿಂದ ಕೇಂದ್ರ ಸರ್ಕಾರದ ನವೋದಯ ವಿದ್ಯಾಲಯ ಸಮಿತಿಯವರು ನಡೆಸುವ ಪ್ರವೇಶ ಪರೀಕ್ಷೆಗೆ ಸದ್ಗುರು ಎಕ್ಸಲೆಂಟ್ ನವೋದಯ ಕೋಚಿಂಗ್ ಮೂಲಕ ಮಕ್ಕಳಿಗೆ ಅತ್ಯುತ್ತಮವಾಗಿ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ಆನ್‌ಲೈನ್ ಮೂಲಕ ವಸತಿ ಸಹಿತ, ವಸತಿ ರಹಿತ, ವಾರಾಂತ್ಯದ ತರಗತಿಗಳ ಮೂಲಕ ತರಬೇತಿ ನೀಡಲಾಗುತ್ತದೆ. ತರಬೇತಿಯು ಏ. 20ರ ಭಾನುವಾರದಿಂದ ಪ್ರಾರಂಭವಾಗುವುದು. ಈಗಾಗಲೇ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆಸಕ್ತ ಪೋಷಕರು ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಲು ಮೊ. 94482 16180, 72043 80230ರಲ್ಲಿ ಸಂಪರ್ಕಿಸಲು ಕೋರಲಾಗಿದೆ.