Shimoga News ಬಲ ಪ್ರಯೋಗ ಯಾವಾಗಲೂ ಸಾಧ್ಯವಿಲ್ಲ, ಅದರ ಬದಲು ಸಹಮತಿಯ ಆಳ್ವಿಕೆಯಿಂದ ಅಧಿಕಾರ ಚಲಾಯಿಸುತ್ತಾರೆ ಚಿಂತಕ ಕೆ.ಫಣಿರಾಜ್ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ಮತ್ತು ಇಂಗ್ಲಿಷ್ ವಿಭಾಗ, ಐಕ್ಯೂಎಸಿ ಘಟಕ ಹಾಗೂ ಸಮುದಾಯ ಶಿವಮೊಗ್ಗದ ವತಿಯಿಂದ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಮತ್ತು ಆಂಟೋನಿಯೋ ಗ್ರಾಮ್ಷಿ ಹಾಗೂ ಮಿಷಲ್ ಫುಕೊ ಬಗ್ಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಇಂದು ಅಧಿಕಾರಕ್ಕೆ ಬಂದ ಎಲ್ಲರೂ ಈ ರೀತಿಯಲ್ಲಿ ಸಂಸ್ಕೃತಿಯನ್ನು ಅರ್ಥೈಸಿಕೊಂಡು ಅಧಿಕಾರ ನಡೆಸುತ್ತಾರೆ. ಆಳ್ವಿಕೆ ಕುರಿತಾದ ಗ್ರಾಮ್ಷಿ ಚಿಂತನೆ ಅಧ್ಯಯನ ನಡೆಸಬೇಕು ಎಂದು ತಿಳಿಸಿದರು.
ಕೆ.ಪ್ರಭಾಕರನ್ ಅನುವಾದಿಸಿರುವ ಇಎಂಎಸ್ ನಂಬೂದಿರಿ ಪಾಡ್ ಮತ್ತು ಪಿ.ಗೋವಿಂದ ಪಿಳ್ಳೈ ಬರೆದಿರುವ ಗ್ರಾಮ್ಷಿಯ ಚಿಂತನೆಗಳು ಪುಸ್ತಕ ಬಿಡುಗಡೆ ಮಾಡಲಾಯಿತು. ಕೇಶವ ಶರ್ಮಾ ಅನುವಾದಿಸಿರುವ ಪುಕೋ ವಿಚಾರಧಾರೆ, ಆಂಟೋನಿಯೊ ಗ್ರಾಮ್ಷಿ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವಿಎಸ್ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಮಾತನಾಡಿ, ಇಂದು ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಡಾ. ಕೇಶವ ಶರ್ಮ ಅವರು ಗ್ರಾಮ್ಷಿಯಂತಹವರ ಬರವಣಿಗೆಯನ್ನು ಕನ್ನಡಕ್ಕೆ ತಂದಿರುವುದು ಒಳ್ಳೆಯದು. ಪುಸ್ತಕವನ್ನು ಕೊಂಡು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಈ ಪುಸ್ತಕದಲ್ಲಿ ಸಂಸ್ಕೃತಿ ಬಗ್ಗೆ ಅತ್ಯಂತ ವೈಚಾರಿಕ ವಿಷಯ ಇದೆ ಎಂದರು.
Shimoga News ಡಾ. ಹೆಚ್. ಎಸ್. ನಾಗಭೂಷಣ್ ಮಾತನಾಡಿ, ಕೆಲ ವಿಷಯಗಳನ್ನು ನಾವು ಪ್ರಶ್ನಿಸದೇ ಒಪ್ಪಿಕೊಳ್ಳುತ್ತೇವೆ. ಅಡುಗೆ ಮನೆ ಎಂದ ಕೂಡಲೇ ಹೆಣ್ಣು ನೆನಪಾಗುತ್ತಾಳೆ. ಹಾಗೇ ನಮಗೆ ಗೊತ್ತಿಲ್ಲದೆ ನಿರ್ದಿಷ್ಟ ವಿಷಯದ ಬಗ್ಗೆ ಈ ನೀತಿ ಶಾಶ್ವತ ಎಂದು ಭಾವಿಸುತ್ತೇವೆ ಎಂದರು.
ಡಿವಿಎಸ್ ಉಪಾಧ್ಯಕ್ಷ ಎಸ್ ಪಿ .ದಿನೇಶ್ , ಕಾರ್ಯದರ್ಶಿ ಎಸ್.ರಾಜಶೇಖರ್ , ಸಹ ಕಾರ್ಯದರ್ಶಿ
ಡಾ. ಎ.ಸತೀಶ್ ಕುಮಾರ್ ಶೆಟ್ಟಿ, ಕೋಶಾಧ್ಯಕ್ಷ ಬಿ.ಗೋಪಿನಾಥ್, ಚಿಂತಕ ಡಾ. ಕೆ.ಪ್ರಕಾಶ್, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಅವಿನಾಶ್, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವೆಂಕಟೇಶ್, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ,ಎಸ್ ಕೆ ಸಾವಿತ್ರಿ ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ ,ಕೇತನ ಅರ್ತಿ ಡಾ. ಉಮೇಶ್ ಅಂಗಡಿ, ಮಂಜುನಾಥ್ ಎಸ್.ಕೆ., ಪುಸ್ತಕ ಪ್ರಕಾಶಕರಾದ ಸೃಷ್ಟಿ ನಾಗೇಶ್, ಹಾಜರಿದ್ದರು.
Shimoga News ಬಲಪ್ರಯೋಗದ ಬದಲು ಸಹಮತದ ಆಳ್ವಿಕೆಯಿಂದ ಅಧಿಕಾರ ಚಲಾವಣೆ – ಫಣಿರಾಜ್
Date: