Actor Prakash Belawadi ಶಿವಮೊಗ್ಗ ನಗರದ ಸಮಾನ ಮನಸ್ಕರ ವೇದಿಕೆ ಬಹುಮುಖಿಯ 50ನೇ ಕಾರ್ಯಕ್ರಮವಾಗಿ ನಾಡಿನ ಹೆಸರಾಂತ ಹಿರಿತೆರೆ-ಕಿರುತೆರೆ ಕಲಾವಿದ, ರಂಗಕರ್ಮಿ ಪ್ರಕಾಶ್ ಬೆಳವಾಡಿಯವರಿಂದ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿದೆ.
ಏ.09ರ ಬುಧವಾರ ಸಂಜೆ 05:30 ಕ್ಕೆ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರಕಾಶ್ ಬೆಳವಾಡಿಯವರು ತಂತ್ರಜ್ಞಾನ ಮತ್ತು ರಂಗಭೂಮಿ ಕುರಿತು ಮಾತನಾಡಲಿದ್ದಾರೆ. ಜೊತೆಗೆ ರಂಗಾಸಕ್ತರು ಹಾಗೂ ಸಭಿಕರೊಂದಿಗೆ ಸಂವಾದ ನಡೆಸಲಿದ್ದಾರೆ.
ಪರಿಚಯ
ಪ್ರಸ್ತುತ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ರಂಗಭೂಮಿಯಲ್ಲಿ ಪ್ರಕಾಶ್ ಬೆಳವಾಡಿಯವರದ್ದು ಪ್ರಮುಖ ಹೆಸರು, ಇವರು ಟಿವಿ ಹಾಗೂ ಸಿನಿಮಾ ರಂಗಗಳಲ್ಲಿ ದೇಶದಾದ್ಯಂತ ಪರಿಚಿತರು. ಅನೇಕ ಅಂತಾ ರಾಷ್ಟ್ರೀಯ ಕಮ್ಮಟ, ಸಮ್ಮೇಳನ ಹಾಗೂ ಸಿನಿಮಾ ಉತ್ಸವಗಳಲ್ಲಿ ಭಾಗವಹಿಸಿರುವ ಇವರು, ಕನ್ನಡ, ಹಿಂದಿ,ಮಲಯಾಳಂ, ತಮಿಳು ಹಾಗೂ ತೆಲುಗು ಚಿತ್ರರಂಗಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಸಿನಿಮಾ, ರಂಗಭೂಮಿ ಹಾಗೂ ಟಿವಿ ಕ್ಷೇತ್ರಗಳಿಗೆ ಸಲ್ಲುವ ಇವರಿಗೆ ಹಲವು ಪ್ರಶಸ್ತಿಗಳು ದೊರೆತಿವೆ. ಅವುಗಳಲ್ಲಿ ಮುಖ್ಯವಾಗಿ, ಇವರ ನಿರ್ದೇಶನದ ಪ್ರಥಮ ಇಂಗ್ಲಿಷ್ ಸಿನಿಮಾ ಸ್ಟಂಬಲ್‌ಗೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ರಾಜ್ಯ ಸರ್ಕಾರ ನೀಡುವ ಪ್ರತಿಭಾ ಭೂಷಣ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ನ್ಯೂಸ್ 18 ಟಿವಿ ವಾಹಿನಿಯ ವರ್ಷದ ಕನ್ನಡಿಗ (2015), ಆಸ್ಟ್ರೇಲಿಯಾದ ಹೆಲ್‌ಮನ್ ಪ್ರಶಸ್ತಿ ದೊರಕಿವೆ. ಹಲವರು ಇಂದಿಗೂ ಮೇಲುಕು ಹಾಕುವ ಇವರ ನಿರ್ದೇಶನದ ಟಿವಿ ಗರ್ವ ಧಾರವಾಹಿ ಹಲವು ಕಾರಣಗಳಿಗೆ ಬಹಳ ವಿಶಿಷ್ಟವಾದದ್ದು.
Actor Prakash Belawadi ಎಸ್. ಎಲ್. ಭೈರಪ್ಪನವರ ಕಾದಂಬರಿ ಆಧಾರಿತ ಪರ್ವ ನಾಟಕ ಅನೇಕ ಕಾರಣಗಳಿಗಾಗಿ ಕನ್ನಡರಂಗ ಭೂಮಿಯಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎಂದರೆ ತಪ್ಪಾಗಲಿಕ್ಕಿಲ್ಲ . ಈ ನಾಟಕದ ವಿಮರ್ಶೆ/ ಅನಿಸಿಕೆಯ ಬಗ್ಗೆ ಒಂದು ವಿಶೇಷ ಕಾರ್ಯಕ್ರಮವನ್ನು “ಬಹುಮುಖಿ” ಈ ಹಿಂದೆ ಆಯೋಜಿಸಿತ್ತು.
ರಂಗಾಸಕ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9449284495, 9845014229, 95380 20367ರಲ್ಲಿ ಸಂಪರ್ಕಿಸಬಹುದು.
Actor Prakash Belawadi ಏಪ್ರಿಲ್ 9, ಶಿವಮೊಗ್ಗದಲ್ಲಿ ನಟ, ರಂಗಕರ್ಮಿ ಪ್ರಕಾಶ್ ಬೆಳವಾಡಿ ವಿಶೇಷ ಉಪನ್ಯಾಸ
Date: