Department of Mining Geology ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಹೋಬಳಿ ಯ ಹಾಡೋನಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ತುಂಗಾ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಮೇಲೆ ಉಪವಿಭಾಧಿಕಾರಿ ಸತ್ಯನಾರಾಯಣ್. ತಹಶೀಲ್ದಾರ್.ವಿ.ಎಸ್.ರಾಜೀವ್ ನೇತೃತ್ವದಲ್ಲಿ. ಮತ್ತು ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 50 ಟನ್ ಮರಳು ಸೇರಿದಂತೆ ಅಕ್ರಮ ಮರಳುಗಾರಿಕೆಗೆ ಬಳಸಿದ ಕೆಲವು ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ಮಾಹಿತಿ ತಿಳಿದ ಅಕ್ರಮ ಮರಳು ದಂಧೆಕೊರರು ಸ್ಥಳದಿಂದ ಪರಾರಿಯಾಗಿದ್ದರು. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಖಡಕ್ ದಾಳಿ ನಡೆಸಲಾಗಿದ್ದು ಹೀಗೆ ಮರಳು ಗಣಿಗಾರಿಕೆ ಮುಂದುವರೆದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ .
ಅಕ್ರಮ ಮರಳುಗಾರಿಕೆಗೆ ಬಳಸಿದಂತಹ ಕೆಲವೊಂದು ಸಲಕರಣೆಗಳನ್ನು ವಶಕ್ಕೆ ಪಡೆದು ಪೋಲಿಸ್ ಇಲಾಖೆಗೆ ಹಸ್ತಾಂತರಿಸಿ
ಈ ಕೂಡಲೇ ತಪ್ಪಿತಸ್ಥರ ವಿರುದ್ದ ಕ್ರಮ ಕ್ಕೆ ಕೈಗೊಳ್ಳು ಪೋಲಿಸ್ ಇಲಾಖೆಗೆ ಸೂಚಿಸಲಾಯಿತು.
Department of Mining Geology ಈ ಹಿಂದೆಯೂ ಸಹ ತಹಶೀಲ್ದಾರ್ .ವಿ.ಎಸ್ .ರಾಜೀವ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಅಕ್ರಮ ಮರಳು ದಂಧೆಕೋರರಿಗೆ ಖಡಕ್ ಎಚ್ಚರಿಕೆ ನೀಡಿ ಅಕ್ರಮ ಮರಳನ್ನ ವಶಪಡಿಸಿ ಪಿಡಬ್ಯೂ ಇಲಾಖೆಗೆ ಹಸ್ತಾಂತರಿಸಿದರು.
Department of Mining Geology ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ದಾಳಿ, ಅಕ್ರಮ ಮರಳುಗಾರಿಕೆಗೆ ಬಳಸಿದ ಸಲಕರಣೆಗಳು ವಶಕ್ಕೆ
Date: