Rama Navami ರಾಮನ ತತ್ವ ಆದರ್ಶ ಗುಣಗಳು ಇಂದಿಗೂ ಸಹ ಪ್ರಸ್ತುತ ಶ್ರೀ ರಾಮನವಮಿ ಹಿಂದೂ ಧರ್ಮದಲ್ಲಿ ಅತ್ಯಂತ ಶ್ರೇಷ್ಠ ಮಹತ್ವಪೂರ್ಣ ಹಬ್ಬಗಳಲ್ಲಿ ಒಂದಾಗಿದೆ ಈ ಹಬ್ಬವನ್ನು ಮರ್ಯಾದಾ ಪುಷೋತ್ತಮ ಶ್ರೀರಾಮನ ಜನ್ಮದಿನ ವೆಂದು ಆಚರಿಸಲಾಗುತ್ತಿದೆ. ರಾವನವಮಿ ಹಬ್ಬವು ಭಕ್ತರಿಗೆ ಧರ್ಮ, ಶಿಷ್ಟಾಚಾರ, ಸತ್ಯ ಮತ್ತು ನೀತಿ ಮಾರ್ಗವನ್ನು ನೆನಪಿಸುವ ಪವಿತ್ರ ದಿನವಾಗಿದೆ ಶ್ರೀ ರಾಮನವಮಿ ಕೇವಲ ಒಂದು ಹಬ್ಬವಲ್ಲ ಅದು ಧರ್ಮ ನೀತಿ ಮತ್ತು ಸತ್ಯ ಸಂಧತೆ ಇವುಗಳನ್ನು ಹೇಗೆ ಜೀವನದಲ್ಲಿ ಪಾಲಿಸಬೇಕು ಎಂಬುದನ್ನು ತೋರಿಸುವ ದಾರಿ ದೀಪವಾಗಿದೆ ಎಂದು ಗೋಪಾಲದ ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ವೇದಬ್ರಹ್ಮ ಸಂದೇಶ್ ಉಪಾಧ್ಯ ನುಡಿದರು. Rama Navami ಅವರು ರಾಮ ನವಮಿ ಅಂಗವಾಗಿ ನಾಗಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾದ ರಾಮ,ಸೀತೆ ಹಾಗೂ ರಾಮಾಯಣದ ವೇಷ ಭೂಷಣ ಅಲಂಕಾರ, ಹಾಗೂ ರಾಮನ ಭಕ್ತಿ ಗೀತೆಗಳು ಮತ್ತು ಭಜನೆ ರಾಮನ ಕುರಿತು ಶ್ಲೋಕ ಕಂಠಪಾಠ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಇದರಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನಾಗ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ರಾಮಲಿಂಗಪ್ಪನವರು ಮಾತನಾಡುತ್ತಾ ಇಂದು ದೇಶಾದ್ಯಂತ ರಾಮನವಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಿ ಕೋಸಂಬರಿ ಪಾನಕ ವಿತರಣೆ ಮಾಡಿ ರಾಮನನ್ನು ಸ್ಮರಿಸುವುದರ ಮುಖಾಂತರ ರಾಮನವಮಿಯನ್ನು ಆಚರಿಸಲಾಗುತ್ತಿದೆ ಹಾಗೆ ಪ್ರತಿ ವರ್ಷ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಇದಕ್ಕೆ ಎಲ್ಲಾ ಭಕ್ತ ಮಹಾಶಯರು ಹಾಗೂ ಭಜನಾ ಮಂಡಳಿಯ ಸದಸ್ಯರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಅವರನ್ನು ಸ್ಮರಿಸಿದರು. Rama Navami ಇದೇ ಸಂದರ್ಭದಲ್ಲಿ ರೋಟರಿ ವಿಜಯಕುಮಾರ್ ಅವರು ಮಾತನಾಡುತ್ತಾ ರಾಮನ ನಾಡಿನಲ್ಲಿ ಹುಟ್ಟಿರುವುದೇ ನಮ್ಮ ಭಾಗ್ಯ ಜೀವನದಲ್ಲಿ ಒಮ್ಮೆಯಾದರೂ ಅಯೋಧ್ಯೆಯ ರಾಮಲಲ್ಲನ ದರ್ಶನ ಮಾಡಲೇಬೇಕು ಇಂದು ನಾಗಸುಬ್ರಹ್ಮಣ್ಯ ದೇವಸ್ಥಾನ ಪ್ರತಿಯೊಂದು ಹಬ್ಬ ಹರಿ ದಿನಗಳಲ್ಲಿ ತುಂಬಾ ವೈವಿಧ್ಯಮಯ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಡೆಸುತ್ತಾ ಬಂದಿರುವುದು ತುಂಬಾ ವಿಶೇಷತೆ ಎಂದು ನುಡಿದರು ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಆಗಮಿಸಿದ್ದ ಪೇಸ್ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಡಾ. ಮೈತ್ರೇಯಿ ಆದಿತ್ಯ ಪ್ರಸಾದ್ ಅವರು ರಾಮನ ಚರಿತೆಯ ಬಗ್ಗೆ ಮಾತನಾಡಿದರು. ಇನ್ನೋರ್ವ ತೀರ್ಪುಗಾರರಾದ ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜ್ ನ ಉಪನ್ಯಾಸಕರಾದ ಶ್ರೀ ಮಂಜುನಾಥ್ ಸ್ವಾಮಿ ಮಾತನಾಡುತ್ತಾ ಮಕ್ಕಳನ್ನು ಈ ದಿಸೆಯಲ್ಲಿ ತಯಾರು ಮಾಡಿದ ಪೋಷಕರಿಗೂ ಹಾಗೂ ದೇವಸ್ಥಾನದ ಅರ್ಚಕರು ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್ ಶಾರದಾ ಭಜನಾ ಮಂಡಳಿಯ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾರದಾ ಭಜನಾ ಮಂಡಳಿ ಅವರಿಂದ ಭಜನೆ ಹಾಗೂ ನೃತ್ಯ ಕಾರ್ಯಕ್ರಮ ನೆರವೇರಿತು.
Rama Navami ರಾಮನವಮಿ ಕೇವಲ ಒಂದು ಹಬ್ಬವಲ್ಲ, ಅದು ಧರ್ಮ ನೀತಿ ಮತ್ತು ಸತ್ಯ ಹೇಗೆ ಜೀವನದಲ್ಲಿ ಪಾಲಿಸಬೇಕು ಎಂಬುದನ್ನು ತೋರಿಸುವ ದಾರಿ ದೀಪ : ಸಂದೇಶ್ ಉಪಾಧ್ಯ
Date: