ಶ್ರೀರಾಮನವಮಿ
Sri Ram Navami ಪ್ರತಿ ವರ್ಷ ಹೊಸ ಸಂವತ್ಸರ ಪ್ರಾರಂಭವಾದ ಚೈತ್ರಮಾಸದ ಶುಕ್ಲಪಕ್ಷದನವಮಿಯಂದುಶ್ರೀರಾಮ
ನವಮಿಯನ್ನು ಆಚರಿಸುತ್ತಾರೆ.
ಶ್ರೀರಾಮನವಮಿಯಂದು ಭೂಮಿಯಲ್ಲಿ ರಾಮ
ನವತರಿಸಿದ ದಿನ.ಶ್ರೀಹರಿಯ ದಶಾವತಾರದಲ್ಲಿ ವಿಷ್ಣುವಿನ ಏಳನೇ ಅವತಾರವೇ ರಾಮವತಾರವು.
ಶ್ರೀರಾಮಚಂದ್ರನು ಮಹಾವಿಷ್ಣುವಿನ ಅವತಾರ
ವಾದರೂ ತನ್ನ ಆದರ್ಶ ನಡೆಯಿಂದ ಭೂಮಿಯಲ್ಲಿ ಮಹಾ ಪುರುಷನಾದನು.
ಶ್ರೀರಾಮನು ಒಬ್ಬ ಆದರ್ಶ ಪುತ್ರ,ಆದರ್ಶ ಮಿತ್ರ
,ಆದರ್ಶಬಂಧು,ಪ್ರಜೆಗಳಅಭ್ಯುದಯವನ್ನುಬಯಸಿದಆದರ್ಶ ರಾಜ.
ಧರ್ಮಪರಿಪಾಲಕನಾಗಿದ್ದವನು,ಸತ್ಯನಿಷ್ಠನಾಗಿದ್ದವನು.ಆದ್ದರಿಂದಲೇ ಸಮಸ್ತ ಮಾನವಕುಲಕ್ಕೆಆದರ್ಶ
ನಾಗಿದ್ದವನು.
ಮನುಷ್ಯನಾಗಿ ಕಂಡು ಮಾನವ ಸಮಾಜದಜೊತೆಗೆ
ದೀರ್ಘಕಾಲಿಕವಾಗಿ ಸಹ ಜೀವನ ನಡೆಸಿದಎರಡು
ಅವತಾರಗಳು ಅಂದರೆ ರಾಮಾವತಾರ ಮತ್ತು ಕೃಷ್ಣಾವತಾರ.ಭಗವಂತ ಸರ್ವ ಸಮರ್ಥ ಸರ್ವಶಕ್ತ ಎಂಬ ತಿಳಿವಳಿಕೆಸಹಜವಾದದ್ದೇಆದರೆರಾಮನನ್ನು ಸಾಮಾನ್ಯಮನುಷ್ಯನನೆಲೆಯಲ್ಲಿನಿಂತುನೋಡಿದರೆ ರಾಮನಿಂದ ಜೀವನದಲ್ಲಿ ಪಡೆಯಬಹುದಾದದ್ದು ಬಹಳಷ್ಟಿದೆ.
ರಾಮನು ಅರಮನೆಯ ಶ್ರೀಮಂತಿಕೆಯಲ್ಲಿ ಹುಟ್ಟಿ
ಬೆಳೆದವನಾದರೂ,ಕೂಡು ಕುಟುಂಬದಲ್ಲಿ ಎಂದರೆ
ತಂದೆತಾಯಿ,ಚಿಕ್ಮಮ್ಮಂದಿರು,ತಮ್ಮಂದಿರು ಎಲ್ಲರ
ಜತೆ ಬಾಲ್ಯ ಕಳೆದವನು.ನಯ ವಿನಯದ ಸೌಜನ್ಯ ಮೂರ್ತಿಯಾಗಿದ್ದವನು ಶ್ರೀರಾಮ.ಮಕ್ಕಳಿಲ್ಲದ ದಶರಥ ಮಹಾರಾಜನಿಗೆ ದೈವಾನುಗ್ರಹದಿಂದ
ಮಕ್ಕಳು ಹುಟ್ಟುತ್ತಾರೆ,ಅದರಲ್ಲೂ ರಾಮನೆಂದರೆ ದಶರಥನಿಗೆ ಮುದ್ದಿನ ಮಗ.
ರಾಜವೈಭವವಿದ್ದರೂ,ಸ್ವಲ್ಪವೂಅಹಂಕಾರವಿಲ್ಲದವನಾಗಿದ್ದನು.ಎಲ್ಲರಜೊತೆಯಲ್ಲೂಪ್ರೀತಿವಾತ್ಸಲ್ಯದಿಂದ ಇದ್ದವನು.ಇವನಗುಣಗಳಿಗೆಸದ್ಗುಣಸಂಪನ್ನೆ
ಯಾದ ಸೀತೆಯುಇವನ ಧರ್ಮಪತ್ನಿಯಾಗಿ ಕೈಹಿಡಿ
ಯುತ್ತಾಳೆ.
Sri Ram Navami ದಶರಥನು ತಾನು ಇನ್ನು ರಾಜ್ಯಭಾರವನ್ನುನಡೆಸಲು ತನ್ನ ಹಿರಿಯ ಮಗ ರಾಮನಿಗೆಪಟ್ಟಾಭಿಷೇಕವನ್ನುಮಾಡಬೇಕೆಂದು
ತೀರ್ಮಾನಿಸುತ್ತಾನೆ.
ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಸಂತೋಷದಿಂದ ಅರಮನೆಯಲ್ಲಿ ಸಿದ್ಧತೆಗಳು ನಡೆದಿದ್ದಾಗದಶರಥನ
ರಾಣಿಯಾದ ಕೈಕೇಯಿಯಿಂದ ಪಟ್ಟಾಭಿಷೇಕ ಮಹೋತ್ಸವವು ನಿಂತು ರಾಮನನ್ನು14 ವರ್ಷಗಳ ಕಾಲವನವಾಸಕ್ಕೆಕಾಡಿಗೆಹೋಗಬೇಕಾಗಿಬರುತ್ತದೆ.ದಶರಥನಿಂದ ರಾಮನಿಗೆಹೇಳಲಿಕ್ಕಾಗದ ಮಾತನ್ನು ಕೈಕೇಯಿ ಹೇಳುತ್ತಾಳೆ.
ರಾಮನು ಸ್ವಲ್ಪವೂ ವಿಚಲಿತನಾಗದೆ ಸಂತೋಷ
ದಿಂದಲೇಕೈಕೇಯಿಯಮಾತನ್ನುಕೇಳುತ್ತಾನೆ.ಅದರಂತೆ ಪಿತೃವಾಕ್ಯ ಪರಿಪಾಲನೆಗಾಗಿವನವಾಸಕ್ಕಾಗಿ ಕಾಡಿಗೆತೆರಳುತ್ತಾನೆ.ಕೈಕೇಯಿತನಗೆಪಟ್ಟಾಭಿಷೇಕವನ್ನು ತಪ್ಪಿಸಿದಳಲ್ಲಾ ಎಂದು ಕಿಂಚಿತ್ತೂ ತನ್ನ ಅಸಹನೆ
ಯನ್ನು ತೋರ್ಪಡಿಸದೆತಾಯಿಗೆ ಕೊಡುವಗೌರವ
ವನ್ನು ಕೊಡುತ್ತಾನೆ.ಅಂತಹ ಒಳ್ಳೆಯ ಮನಸ್ಸು ಹೊಂದಿದ್ದವನು ಶ್ರೀರಾಮ.ಇಂತಹ ರಾಮನಿಗೆ ನೆಚ್ಚಿನಬಂಟನಾಗಿದೊರಕಿದವನುಹನುಮಂತ.
ಹನುಮಂತಸ್ವಾಮಿನಿಷ್ಠಸೇವಕನಾಗಿತನ್ನಭಕ್ತಿಯನ್ನು ರಾಮನಲ್ಲಿ ಅರ್ಪಿಸುತ್ತಾನೆ.
ನಾವು ಈಗಲೂ ರಾಮರಾಜ್ಯವಾಗಿರಬೇಕುಎನ್ನುವ ಮಾತನ್ನುಕೇಳುತ್ತೇವೆ.ಅಂದರೆರಾಮನಆಡಳಿತದಲ್ಲಿ “ರಾಮರಾಜ್ಯ”ವಾಗಿತ್ತುಎಂದುತಿಳಿಯುತ್ತದೆ.ಶ್ರೀರಾಮಚಂದ್ರನರಾಜ್ಯಪಾಲನೆಯಲ್ಲಿಪ್ರಜೆಗಳುಧರ್ಮತತ್ಪರರಾಗಿದ್ದರು.ಸತ್ಪ್ರಜೆಗಳಾಗಿದ್ದರು,ಸತ್ಯವಂತರಾಗಿದ್ದರು.
ದೇವರ ಅವತಾರವಾದರೂ,ಮನುಷ್ಯರಂತೆಜೀವನ ನಡೆಸಿ ಆದರ್ಶ ವ್ಯಕ್ತಿತ್ವವನ್ನು ತೋರಿಸಿದವನು ಶ್ರೀರಾಮಚಂದ್ರ.ಹನುಮಂತನ ಮೂಲಕ ಪರಿಚಯವಾದ ಸುಗ್ರೀವನಿಗೆ ಸ್ನೇಹ ಹಸ್ತ ಚಾಚಿ ಅವನಅಣ್ಣನಾದವಾಲಿಯನ್ನುಸಂಹರಿಸಿಕಿಷ್ಕಿಂಧೆಯ ರಾಜನನ್ನಾಗಿ ಮಾಡಿದ ರಾಮ.
ರಾಮನು ಸುಗ್ರೀವನಿಂದ ಯಾವುದೇ ಧನಕನಕಗಳ ಅಪೇಕ್ಷೆಯಿಲ್ಲದೇ ಕೇವಲ ಅವನಿಗೆ ಅಣ್ಣನಿಂದ
ನಿಜವಾಗಿಯೂ ಮೋಸವಾಗಿದೆಯೆಂದು ತಿಳಿದು
ಅವನಿಗೆ ಸಹಾಯ ಮಾಡುತ್ತಾನೆ.ಶಬರಿಯು ರಾಮನಲ್ಲಿ ಎಷ್ಟು ಭಕ್ತಿ ಹೊಂದಿದ್ದಳೆಂದರೆ ಅವನಿಗೆ ಹಣ್ಣು ತಿನ್ನಲಿಕ್ಕೆ ಕೊಡುವಾಗ ಒಂದೊಂದುಹಣ್ಣನ್ನು ತಾನು ಕಚ್ಚಿಅದರ ರುಚಿ ಚೆನ್ನಾಗಿದೆ ಎಂದುಅನಿಸಿದ ಮೇಲೆರಾಮನಿಗೆಆಹಣ್ಣನ್ನುತಿನ್ನಲಿಕ್ಕೆಕೊಡುತ್ತಿದ್ದಳು
ಶ್ರೀರಾಮನು ತಾಯಿ ಸ್ವರೂಪಳಾಗಿದ್ದ ಶಬರಿಗೆ
ಮೋಕ್ಷವನ್ನು ಕರುಣಿಸುತ್ತಾನೆ.
ಶ್ರೀರಾಮನು ಭಕ್ತಿಯಲ್ಲಿ,ಸ್ನೇಹದಲ್ಲಿ ಇತರ ವಿಷಯ
ಗಳನ್ನುಬೆರೆಸುತ್ತಿರಲಿಲ್ಲ.ಶುದ್ಧತೆ,ನಿರ್ಮಲಮನ
ಸ್ಸೊಂದೇ ಮಾನದಂಡ ಅವನಿಗೆ.
ಲಂಕೆಯ ಮೇಲೆ ರಾಮನು ಮಾಡುವ ಯುದ್ಧವೂ
ಕೂಡ ರಾಜ್ಯ ವಿಸ್ತಾರಕ್ಕಾಗಲಿ,ಹೊನ್ನುಗಳಿಗಾಗಿ ಅಲ್ಲ.ಇತರರ ರಾಜ್ಯದ ಮೇಲೆ ದಂಡೆತ್ತಿ ಹೋಗಿ
ಗೆದ್ದು ಚಕ್ರವರ್ತಿಯಾಗಿ ಮೆರೆಯ ಬೇಕೆಂಬ ಆಸೆಯಂತೂ ರಾಮನಲ್ಲಿ ಇರಲೇಯಿಲ್ಲ.ತನ್ನಪ್ರಿಯ ಮಡದಿಯನ್ನುಅಪಹರಿಸಿದರಾವಣನಮೇಲೆಯುದ್ಧಮಾಡುವುದುರಾಮನಿಗೆಅನಿವಾರ್ಯವಾಗಿತ್ತು.ನ್ಯಾಯಕ್ಕಾಗಿಹೋರಾಡುವುದುಧರ್ಮಯುದ್ಧವಾಗಿತ್ತು.ಯುದ್ಧ ಮಾಡುವುದು ಬೇಡ ,ತನ್ನ ಪತ್ನಿಯನ್ನು ತನಗೊಪ್ಪಿಸಿ ಯುದ್ಧದಿಂದಾಗುವ ಅಪಾರ ಪ್ರಾಣ
ಹಾನಿಯನ್ನು ತಪ್ಪಿಸುವಂತೆ ತಿಳಿಸಿ ಸಂದೇಶವನ್ನು ಕಳಿಸಿಕೊಡುತ್ತಾನೆ.ರಾಮನ ಮಾತಿಗೆ ಬೆಲೆಕೊಡದೇ ಯುದ್ಧಕ್ಕೇ ಸಿದ್ಧನಾಗುತ್ತಾನೆಲಂಕಾಧಿಪತಿ.ರಾವಣನ ತಮ್ಮವಿಭೀಷಣಅಣ್ಣನವ್ಯಕ್ತಿತ್ವಕ್ಕೆವಿರುದ್ಧವಾಗಿದ್ದವನು.ಶ್ರೀರಾಮನ ಭಕ್ತ.ಶ್ರೀರಾಮನ ಆಶ್ರಯವನ್ನು ಕೋರಿ ಬಂದಾಗ ರಾವಣನ ತಮ್ಮನೆಂತ ತಿಳಿದೂ
ಮಾನವೀಯತೆಯನ್ನು ಮೆರೆದು ವಿಭೀಷಣನಿಗೆ
ಆಶ್ರಯ ಕೊಡುತ್ತಾನೆ.
ರಾಮ ರಾವಣರ ಯುದ್ಧವಾಗಿ ರಾವಣನ ಸಂಹಾರ
ವಾಗಿ ವಿಭೀಷಣನನ್ನು ಲಂಕಾರಾಜ್ಯದ ಅಧಿಪತಿ
ಯಾಗಿ ಸಿಂಹಾಸನದಲ್ಲಿ ಕೂಡಿಸುತ್ತಾನೆ ರಾಮ.ತನ್ನ ಪತ್ನಿ ಸೀತೆಯನ್ನು ಕರೆದುಕೊಂಡುಅಯೋಧ್ಯೆಗೆ ಹಿಂದಿರುಗಿ ರಾಜ್ಯಭಾರವನ್ನು ವಹಿಸಿಕೊಂಡು ಪ್ರಜೆಗಳಿಗೆ ಸಂತೋಷವನ್ನು ತಂದು ಕೊಡುತ್ತಾನೆ ಶ್ರೀರಾಮಚಂದ್ರ.
ಆದರ್ಶ ವ್ಯಕ್ತಿಯಾಗಿದ್ದವನು ಶ್ರೀರಾಮ.ಇಡೀ
ಮನು ಕುಲಕ್ಕೆ ಮಾದರಿಯಾಗಿದ್ದವನು ಶ್ರೀರಾಮ.
ಶ್ರೀರಾಮ ನವಮಿಯಂದು ರಾಮನಆದರ್ಶಗಳನ್ನು ಪಾಲಿಸುವ ಸಂಕಲ್ಪ ತೊಟ್ಟು ಅನುಸರಿಸಿದರೆರಾಮ
ನವಮಿಆಚರಣೆಯುಅರ್ಥಪೂರ್ಣವಾಗುವು
ದರಲ್ಲಿ ಸಂದೇಹವಿಲ್ಲ
ಎನ್.ಜಯಭೀಮ್ ಜೊಯ್ಸ್