Rotary Jubilee Club ಮಾನವ ಕುಲ ಉದ್ದಾರಕ್ಕಾಗಿ ಭೂಮಿತಾಯಿ ನೀಡುವ ಪ್ರತಿಯೊಂದು ವಸ್ತು ಮುಖ್ಯವಾದದ್ದು ಹಾಗೂ ಅತ್ಯವಶ್ಯಕ ಎಂದು ರೋಟರಿ ಜ್ಯುಬಿಲಿ ಕ್ಲಬ್ ವಾರದ ಸಭೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸುಮಾರಾಣಿ ಮಾತನಾಡುತ್ತಿದ್ದರು.
ಪ್ಲಾಸ್ಟಿಕ್ ಪ್ರಕೃತಿಗೆ ಬಹಳ ಹಾನಿಕರ, ಆದರೆ ಮನುಷ್ಯ ತನ್ನ ಅಗತ್ಯತೆ ಪೂರೈಸಿಕೊಳ್ಳಲು ಎಲ್ಲದ್ದಕೂ ಅದನ್ನು ಉಪಯೋಗಿಸಿ ಹಲವಾರು ರೋಗ ರುಜಿನಕ್ಕೆ ಗುರಿಯಾಗುತ್ತಿದ್ದಾನೆ. ಜನ ಸಂಖ್ಯೆ, ವಾಹನಗಳ ಬಳಕೆ ಹೆಚ್ಚಾಗಿ ಶಬ್ದ, ವಾಯು
ಮಾಲಿನ್ಯ ಹೆಚ್ಚಾಗಿ ಪರಿಸರ ಹಾನಿಯುಂಟಾಗುತ್ತಿದೆ.
ಸಮಯಕ್ಕೆ ಸರಿಯಾಗಿ ಸಾಂಪ್ರದಾಯಿಕ ಮಳೆಗಳು ಬರುತ್ತಿಲ್ಲ. ಇದರಿಂದ ಹವಾಗುಣ ಏರುಪೆರಾಗುತ್ತಿದೆ, ಅರಣ್ಯನಾಶ ಮಾನವನು
ಹವಾಗುಣದ ಮೇಲೆ ಮಾಡುತ್ತಿರುವ ದೌರ್ಜನ್ಯ. ಓಝೋನ್ ಪದರ ನಮ್ಮ ಭೂಮಿಗೆ ಸಿಕ್ಕಿರುವ ಅತ್ಯುತ್ತಮ ತಡೆಗೊಡೆ ಅದು ಆಳಿಯುವ ಅಂಚಿಗೆ ಹೋಗುತ್ತಿದೆ.
ಪ್ರಗತಿಯ ಹೆಸರಿನಲ್ಲಿ ಪರಿಸರದ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಪ್ರತಿಯೊಬ್ಬರು ತಮ್ಮ ಕೈಲಾದ ಮಟ್ಟಿಗೆ ಪ್ರಕೃತಿಗೆ ಪೂರಕವಾದ ಕಾರ್ಯವನ್ನು ಮಾಡಲೇಬೇಕು. ಆಗ ಮುಂದಿನ ಪೀಳಿಗೆಗೆ ನಾವು ಸ್ವಲ್ಪಮಟ್ಟಿಗೆ ಅನುಕೂಲ ಮಾಡಿದಂತಾಗುತ್ತದೆ.
Rotary Jubilee Club ಮನೆ ಉಪಯೋಗಕ್ಕೆ ಸವಯವ ಗೊಬ್ಬರ ತಯಾರಿಸಿಕೊಳ್ಳಿ, ಮನೆ ಹಸಿಕಸ, ಹಣ್ಣಿನ ಸಿಪ್ಪೆ ಉಳಿದ ಎಲ್ಲಾ ವಸ್ತುಗಳನ್ನು ಒಂದು ಬಕ್ಕೆಟ್ ನಲ್ಲಿ ಹಾಕಿ ಒಂದು ಪದರ ಮಣ್ಣು ಹಾಕಿ ಸ್ವಲ್ಪ ನೀರು ಸಿಂಪಡಿಸಿ, ಪ್ರತಿದಿನ ಹೀಗೆ ಮಾಡಿ. ಮೂರುತಿಂಗಳಲ್ಲಿ ಉತ್ತಮ ಸವಯವ ಗೊಬ್ಬರ ಉತ್ಪತಿಯಾಗುತ್ತದೆ. ಇದರಿಂದ ಮನೆಯ ಕೈತೋಟಕ್ಕೆ, ರಾಸಯನಿಕ ಮುಕ್ತ ತರಕಾರಿ ಬೆಳೆಯಲು ಅನುಕೂಲ ವಾಗುತ್ತದೆ. ಇಂಗು ಗುಂಡಿಗಳನ್ನು ಮಾಡಿ, ಮಳೆನೀರು ಕೊಯ್ಲು ಮಾಡಲೇಬೇಕು ಎಂದರು.
ಆಗಮಿಸಿದ ಎಲ್ಲರನ್ನು ಅಧ್ಯಕ್ಷೆ ರೊ. ರೂಪಪುಣ್ಯಕೊಟಿ ಸ್ವಾಗತಿಸಿದರು, ಕಾರ್ಯದರ್ಶಿ ಪ್ರಕೃತಿ ಮಂಚಾಲೆ ವಂದಿಸಿದರು. ಭಾರದ್ವಾಜ್, ಅಶ್ವತ್, ನಾಗರಾಜ್, ವಾಗೇಶ್, ಸತ್ಯನಾರಾಯಣ್, ರೇವಣಸಿದ್ದಪ್ಪ, ರೇಣುಕಾರಾದ್ಯ, ರಾಜಶೇಖರ್ ಮುಂತಾದವರು ಭಾಗವಹಿಸಿದ್ದರು.