Sahyadri Narayana Hospital ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯು ಮತ್ತೊಂದು ಕ್ಲೀಷ್ಟಕರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೇರವೇರಿಸಿದ್ದು, ಮಲೆನಾಡಿನ ಭಾಗದಲ್ಲಿ ಪ್ರಥಮ ಬಾರಿಗೆ ಆಂಪುಲ್ಲರಿ ಅಡಿನೋಮಾಗಳನ್ನು (ಕ್ಯಾನ್ಸರ್‌ನ ಪೂರ್ವ ಉಂಟಾಗುವ ಗಡ್ಡೆಗಳು) ಎಂಡೋಸ್ಕೋಪಿಕ್ ಆಂಪ್ಯುಲೆಕ್ಟಮಿ ಚಿಕಿತ್ಸೆ ಮೂಲಕ ಗುಣಪಡಿಸಿ ರೋಗಿಗೆ ಮರುಜನ್ಮ ನೀಡಲಾಗಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೆಡಿಕಲ್ ಗ್ಯಾಸ್ಟೋಎಂಟರಾಲಜಿ ವಿಭಾಗದ ಹಿರಿಯ ತಜ್ಞ ಡಾ. ಶಿವಕುಮಾರ್ ವಿ ಅವರು, ಸುಮಾರು ೭೨ ವರ್ಷದ ಅಧಿಕ ರಕ್ತದೊತ್ತಡ ದಿಂದ ತೀವ್ರ ಅಸ್ವಸ್ಥರಾಗಿದ್ದ ಮಹಿಳೆಯೊಬ್ಬರನ್ನು ನಮ್ಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಮೇದೋಜೀರಕ ಗ್ರಂಥಿಯ ಊತದ (pancreatitis) ಕಾರಣ ERCP ಗೆ ಶಿಫಾರಸು ಮಾಡಲಾಯಿತು. ಡ್ಯುವೋಡೆನೋಸ್ಕೋಪಿ (duodenoscopy) ಮಾಡಿದಾಗ ಆಂಪ್ಯುಲರಿ ಗೆಡ್ಡೆಯು ಕಂಡುಬಂದಿದೆ, ಮತ್ತು ಎಂಡೋಸೋನಾಗ್ರಫಿ ಪರೀಕ್ಷೆಯಲ್ಲಿ ಪಿತ್ತನಾಳದಿಂದ ಸಣ್ಣ ಕರುಳಿನ ಮೊದಲನೇ ಭಾಗದವರೆಗೆ ವಿಸ್ತರಿಸುತ್ತಿರುವ ಗೆಡ್ಡೆ ಇರುವುದು (CT Scan)ನಲ್ಲಿ ದೃಢಪಡಿಸಲಾಯಿತು. ಬಯಾಪ್ಸಿಯ ಫಲಿತಾಂಶವು ಇದು ಕ್ಯಾನ್ಸರ್ ರೋಗಕ್ಕೆ ತಿರುಗುವ ಲಕ್ಷಣಗಳನ್ನು ಹೊಂದಿದೆ ಎಂದು ನಮೋದಿಸಿದರಿಂದ ರೋಗಿಯನ್ನು ಎಂಡೋಸ್ಕೋಪಿಕ್ ಆಂಪ್ಯುಲೆಕ್ಟಮಿಗೆ ಒಳಪಡಿಸಿ ಚಿಕಿತ್ಸೆ ನೀಡಲಾಯಿತು ಎಂದರು. ಈ ಎಲ್ಲಾ ಕಾರ್ಯವಿಧಾನದ ನಂತರ ಕೇವಲ ೪೮ ಗಂಟೆಯೊಳಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ಡಾ ಶಿವಕುಮಾರ ಹರ್ಷ ವ್ಯಕ್ತಪಡಿಸಿದರು.
ಆಂಪ್ಯುಲ್ಲರಿ ಅಡೆನೊಮಾಗಳು (ಕ್ಯಾನ್ಸರ್‌ನ ಪೂರ್ವ) ಅಪರೂಪದ ಕಾಯಿಲೆಗಳಾಗಿದ್ದು ಅದು ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳಲು ತುಂಬ ಕಡಿಮೆ ಸಮಯವಿರುತ್ತದೆ. ಇದನ್ನು ತುರ್ತಾಗಿ ಪತ್ತೆಹಚ್ಚಿ ಸೂಕ್ತ ಪರಿಣಾಮಕಾರಿ ಚಿಕಿತ್ಸೆ ನೀಡಿ ರೋಗಿ ಗುಣಮುಖವಾಗುವಂತೆ ಮಾಡಲಾಗಿದೆ ಎಂದರು.
ಇದರ ಸಾಮಾನ್ಯ ರೋಗ ಲಕ್ಷಣಗಳೆಂದರೆ ಕಾಮಾಲೆ (ಜಾಂಡೀಸ್), ಹೊಟ್ಟೆ ನೋವು, ತೂಕ ಕಡಿಮೆಯಾಗುವುದು, ಮೈತುರಿಕೆ, ವಾಂತಿ, ವಾಕರಿಕೆ, ಮೇಧೋಜೀರಕ ಗ್ರಂಥಿಯ ಊತ, ಕಬ್ಬಿಣಾಂಶದ ಕೊರತೆ, ರಕ್ತ ಹೀನತೆ ಮತ್ತು ಜೀರ್ಣಾಂಗವ್ಯೂಹದ ರಕ್ತಸ್ರಾವಗಳು ಸೇರಿವೆ.
ಇದಕ್ಕೆ ಲಭ್ಯವಿರುವ ಚಿಕಿತ್ಸಾ ವಿಧಾನಗಳೆಂದರೆ ಎಂಡೋಸ್ಕೋಪಿ ಮತ್ತು ಶಸ್ತçಚಿಕಿತ್ಸೆ.
ಶಸ್ತ್ರಚಿಕಿತ್ಸೆಯ ಅಡ್ಡ ಪರಿಣಾಮಗಳೆಂದರೆ ಕರುಳು ರಂಧ್ರ ಬೀಳುವ ಸಾಧ್ಯತೆ, ಜಾಂಡೀಸ್, ರಕ್ತಸ್ರಾವ ಮತ್ತು ಗುಣಮುಖವಾಗುವ ಸಮಯವು ತುಂಬಾ ಧೀರ್ಘವಾಗಿರುತ್ತದೆ. ನಮ್ಮಲ್ಲಿ ಚಿಕಿತ್ಸೆಗೆಂದು ಬಂದ ರೋಗಿಯು ವೃದ್ದರಾಗಿದ್ದು ಶಸ್ತçಚಿಕಿತ್ಸೆಯು ಇವರಿಗೆ ಅಷ್ಟು ಸೂಕ್ತವಲ್ಲದ ಕಾರಣದಿಂದ ಅವರಿಗೆ ಎಂಡೋಸ್ಕೋಪಿಕ್ ಆಂಪ್ಯುಲೆಕ್ಟಮಿ ಮಾಡಿ ೪೮ ಗಂಟೆಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು, ಎಂದರು.
Sahyadri Narayana Hospital ಎಂಡೋಸ್ಕೋಪಿಯಲ್ಲಿ ಅಡೆನೊಮಾದ ಮಾರಕತೆಯ ಪುರಾವೆಗಳಿಲ್ಲದ ರೋಗಿಗಳಿಗೆ ಶಸ್ತçಚಿಕಿತ್ಸೆಯ ಛೇದನದ ನಂತರ ಎಂಡೋಸ್ಕೋಪಿಕ್ ಆಂಪ್ಯುಲೆಕ್ಟಮಿಯ ಆದ್ಯತೆ ನೀಡಲಾಗುತ್ತದೆ. ಏಕೆಂದರೆ ಇದರಿಂದ ಅಸ್ವಸ್ಥತೆ ಫಲಿತಾಂಶವು [೧೦%] ಕಡಿಮೆಯಾಗುತ್ತದೆ.
ಸಂಪೂರ್ಣ ಪ್ಯಾಂಕ್ರಿಯಾಟಿಕೊ-ಡ್ಯುವೋಡೆನೊಸ್ಟೊಮಿ, ಸರ್ಜಿಕಲ್ ಆಂಪ್ಯುಲೆಕ್ಟಮಿ, ಅಸ್ವಸ್ಥತೆಯ ಪ್ರಮಾಣ ಮತ್ತು ಶಸ್ತçಚಿಕಿತ್ಸಾ ಆಂಪ್ಯುಲೆಕ್ಟಮಿ ಅಸ್ವಸ್ಥತೆ ಗ್ಯಾಸ್ಟಿçಕ್ ಔಟ್ಲೆಟ್ ಅಡಚಣೆಗಳು ೪೨% ಮೇದೋಜೀರಕ ಗ್ರಂಥಿಯ ಊತ ಮತ್ತು ಕೋಲಾಂಜೈಟಿಸ್‌ನಂತಹ ತೊಡಕುಗಳನ್ನು ಹೊಂದಿರುತ್ತದೆ.
ಇAತಹ ಕ್ಲೀಷ್ಟಕರವಾದ ಚಿಕಿತ್ಸೆಯನ್ನು ನಿರ್ವಹಿಸಿ ಹಾಗೂ ಅತಿ ಕಡಿಮೆ ಸಮಯದಲ್ಲಿ ವೃದ್ಧ ರೋಗಿಯನ್ನು ಗುಣಮುಖರನ್ನಾಗಿಸಿ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾದ ಡಾ. ಶಿವಕುಮಾರ್ ವಿ ಮತ್ತು ತಂಡದವರನ್ನು ಆಸ್ಪತ್ರೆಯ ವ್ಯವಸ್ಥಾಕ ನೀರ್ದೆಶಕರಾದ ಶ್ರೀಯುತ ವರ್ಗಿಸ್ ಪಿ ಜಾನ್ ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯು ಅಭಿನಂದಿಸಿದೆ.